ಮಂಗಳೂರು : ನಗರಕ್ಕೆ ಹಸಿರು ಮೆರುಗು ನೀಡುವ ಸಂಘಟನೆಗಳ ಕಾರ್ಯ ಶ್ಲಾಘನೀಯವಾದುದು,ಇದೊಂದು ಸಮಾಜಮುಖಿ ಕಾರ್ಯಕ್ರಮ ಎಂದು ಮಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಸಚೇತಕರಾದ ಶಶಿಧರ್ ಹೆಗ್ಡೆ ತಿಳಿಸಿದರು.
ಅವರು ದಿನಾಂಕ 14/07/2019ರಂದು ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕ ಹಾಗೂ SPYSS ಕರ್ನಾಟಕ ನೇತ್ರಾವತಿ ವಲಯ ಮಂಗಳೂರು, ಮಹಾಲಿಂಗೇಶ್ವರ ಉಪವಲಯದ ಆಶ್ರಯದಲ್ಲಿ ಮಂಗಳೂರಿನ ಕೊಟ್ಟರಚೌಕಿಯಿಂದ ಕೊಟ್ಟಾರದವರೆಗೆ ರಸ್ತೆ ವಿಭಜಕದಲ್ಲಿ ಹೂ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಜ್ಞಾನೋದಯ ಭಜನಾ ಮಂದಿರದ ಕಾರ್ಯದರ್ಶಿ ಶೇಖರ್ ಶೆಟ್ಟಿ, spyss ಮಹಾಲಿಂಗೇಶ್ವರ ವಲಯದ ಸಂಚಾಲಕರಾದ ದಾಮೋದರ್ , ಯೋಗ ಬಂಧು ವಸಂತ್ ಕಾರoದೂರು, ಯುವವಾಹಿನಿ ಮಹಿಳಾ ಘಟಕದ ಅಧ್ಯಕ್ಷೆ ಉಮಾಶ್ರೀಕಾಂತ್, ಕಾರ್ಯದರ್ಶಿ ನೈನ ವಿಶ್ವನಾಥ್, ಕೋಶಾಧಿಕಾರಿ ರವಿಕಲ ಯಶವoತ್, ನಿಕಟ ಪೂರ್ವ ಅಧ್ಯಕ್ಷೆ ರಶ್ಮಿ ಕರ್ಕೇರ, ಉಪಾಧ್ಯಕ್ಷೆ ಶುಭ ರಾಜೇಂದ್ರ, ಮಾಜಿ ಅಧ್ಯಕ್ಷೆ ಸುಪ್ರೀತ , ಸಂಚಾಲಕರಾದ ರೇಖಾ ಗೋಪಾಲ್, spyss ನ ಯೋಗ ಬಂಧುಗಳು, ಯುವವಾಹಿನಿ ಸದಸ್ಯರು ಉಪಸ್ಥಿತರಿದ್ದರು.
ಬಳಿಕ ಕೊಟ್ಟಾರ ಚೌಕಿಯಿಂದ ಕೊಟ್ಟಾರದವರೆಗೆ ನಗರಕ್ಕೆ ಮೆರುಗು ನೀಡುವ ರಸ್ತೆ ವಿಭಜಕದಲ್ಲಿ ಸಸಿಗಳನ್ನು ನೆಡಲಾಯಿತು.