ಮೂಲ್ಕಿ : ಬಿರುವೆರ್ ಕುಡ್ಲ (ರಿ) ಮೂಲ್ಕಿ ಘಟಕ , ಯುವವಾಹಿನಿ (ರಿ) ಮೂಲ್ಕಿ ಘಟಕ ಮತ್ತು ಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ ಕೆ,ಎಸ್ ರಾವ್ ನಗರ ಹಾಗೂ ಗ್ರಾಮೀಣ ಅರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ ಯೆನಪೋಯ ಡೀಮ್ಡ್ ಟು ಬಿ ಯುನಿವೆರ್ಸಿಟಿ ಮತ್ತು ಸಮುದಾಯ ದಂತ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಇದರ ಜಂಟಿ ಆಶ್ರಯದಲ್ಲಿ ಉಚಿತ ಬ್ರಹತ್ ವೈದ್ಯಕೀಯ ಮತ್ತು ದಂತ ಚಿಕಿತ್ಸಾ ಶಿಬಿರವು ದಿನಾಂಕ 30/6/2019 ಆದಿತ್ಯವಾರದಂದು ಕೆ ಎಸ್ ರಾವ್ ನಗರದ ಶ್ರೀ ನಾರಾಯಣಗುರು ಸೇವಾ ಸಂಘ ದಲ್ಲಿ ಜರುಗಿತು,.
ಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ರಾಘವ ಸುವರ್ಣ ಸಭಾಧ್ಯಕ್ಷತೆ ವಹಿಸಿದ್ದರು, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಪ್ರದಾನ ಕಾರ್ಯದರ್ಶಿ ವಿಜಯ್ ಕುಮಾರ್ ಕುಬೆವೂರ್ ದೀಪ ಬೆಳಗಿಸಿ ಉದ್ಘಾಟಿಸಿದರು, ಜೆಸಿಐ ವಲಯಾಧಿಕಾರಿ ಮಲ್ಲಿಕಾರ್ಜುನ್ ಆರ್ ಕೆ, ಯೆನಪೋಯ ಆಸ್ಪತ್ರೆಯ ಡೆಪ್ಯುಟಿ ಡೈರೆಕ್ಟರ್ ಡಾ . ಪೂನಂ, ದಂತ ವೈದ್ಯ ಡಾ . ವಿನು ಜೋಸೆಫ್, ಮೆಡಿಕಲ್ ಆಫೀಸರ್ ಡಾ . ಲೋಕೇಶ್, ಸಾರ್ವಜನಿಕ ಸಂಪರ್ಕಾಧಿಕಾರಿ ಭರತ್, ಯುವವಾಹಿನಿ ಮೂಲ್ಕಿ ಘಟಕ ಅಧ್ಯಕ್ಷ ಸತೀಶ್ ಕಿಲ್ಪಾಡಿ, ಬಿರುವೆರ್ ಕುಡ್ಲ ಅಧ್ಯಕ್ಷ ಕಿಶೋರ್ ಸಾಲಿಯಾನ್, ವೇದಿಕೆರಿಯಲ್ಲಿ ಉಪಸ್ಥಿತರಿದ್ದರು,. ಗಿರಿಧರ್ ಅಮೀನ್ ಪ್ರಾರ್ಥನೆ ಗೈದ ರು , ಸತೀಶ್ ಕಿಲ್ಪಾಡಿ ಸ್ವಾಗತಿಸಿ, ಕಿಶೋರ್ ಸಾಲಿಯಾನ್ ವಂದನಾರ್ಪಣೆ ಮಾಡಿದರು, ಎಲ್ಲಾ ಅತಿಥಿಗಳಿಗೆ ಲಕ್ಶ್ಮಣ ಫಲದ ಗಿಡವನ್ನು ನೀಡಲಾಯಿತು. ಉಮೇಶ್ ಮಾನಂಪಾಡಿ ನಿರೂಪಿಸಿದರು