ವೇಣೂರು: ಯುವವಾಹಿನಿ ಘಟಕ ವೇಣೂರು ಇದರ ಆಶ್ರಯದಲ್ಲಿ ಗ್ರಾ.ಪಂ. ವೇಣೂರು, ಹಿಂದೂ ರುದ್ರಭೂಮಿ ಅನುಷ್ಠಾನ ಸಮಿತಿ ಬಜಿರೆ, ಅರಣ್ಯ ಇಲಾಖೆ ವೇಣೂರು ಇದರ ಸಹಕಾರದಲ್ಲಿ ಪರಿಸರ ಸಂರಕ್ಷಣೆ ಜಾಗೃತಿ ಹಾಗೂ ಸಸಿ ನೆಡುವ ಕಾರ್ಯಕ್ರಮವು ರವಿವಾರ ಬಜಿರೆ ಹಿಂದೂರುದ್ರಭೂಮಿ ಮೋಕ್ಷ ಧ್ವಾರ ಇಲ್ಲಿ ಜರಗಿತು.
ವೇಣೂರು ವಲಯ ಅರಣ್ಯಾಧಿಕಾರಿ ಪ್ರಶಾಂತ್ ಕುಮಾರ್ ಪೈ ಅವರು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಯುವವಾಹಿನಿ ಘಟಕದ ಅಧ್ಯಕ್ಷ ನವೀನ್ ಪಚ್ಚೇರಿ ಅಧ್ಯಕ್ಷತೆ ವಹಿಸಿದ್ದರು. ವೇಣೂರು ಗ್ರಾ.ಪಂ. ಉಪಾಧ್ಯಕ್ಷ ಅರುಣ್ ಕ್ರಾಸ್ತ, ಸದಸ್ಯರಾದ ರಾಜೇಶ್ ಪೂಜಾರಿ ಕೈತೇರಿ, ಸತೀಶ್ ಹೆಗ್ಡೆ, ವಿಶಾಲಾಕ್ಷಿ, ಆರಂಬೋಡಿ ಗ್ರಾ.ಪಂ. ಸದಸ್ಯ ಹರೀಶ್ ಕುಮಾರ್ ಪೊಕ್ಕಿ, ವೇಣೂರು ವಿವೇಕಾನಂದ ಸೇವಾ ಟ್ರಸ್ಟ್ ಸ್ಥಾಪಕಾಧ್ಯಕ್ಷ ಯಂ. ವಿಜಯರಾಜ ಅಧಿಕಾರಿ, ಹಿಂದೂ ರುದ್ರಭೂಮಿ ಅನುಷ್ಠಾನ ಸಮಿತಿ ಅಧ್ಯಕ್ಷ ಉದ್ಯಮಿ ಕೆ. ಭಾಸ್ಕರ ಪೈ, ಕಾರ್ಯದರ್ಶಿ ರಾಜು ಪೂಜಾರಿ, ಕೋಶಾಧಿಕಾರಿ ಶಶಿಕುಮಾರ್ ಇಂದ್ರ, ಯುವವಾಹಿನಿ ಕೇಂದ್ರ ಸಮಿತಿ ಸಂಘಟನ ಕಾರ್ಯದರ್ಶಿ ರಾಕೇಶ್ ಕುಮಾರ್ ಮೂಡುಕೋಡಿ, ನಾಮನಿರ್ದೇಶಿತ ಸದಸ್ಯ ಯೋಗೀಶ್ ಬಿಕ್ರೊಟ್ಟು, ವೇಣೂರು ಯುವವಾಹಿನಿ ಘಟಕದ ಮಾಜಿ ಅಧ್ಯಕ್ಷ ನಿತೀಶ್ ಎಚ್., ಉಪಾಧ್ಯಕ್ಷ ಅರುಣ್ ಕೋಟ್ಯಾನ್, ಕೋಶಾಧಿಕಾರಿ ಹರೀಶ್ ಪಿ.ಎಸ್., ನ್ಯಾಯವಾದಿ ಸತೀಶ್ ಪಿ.ಎನ್. ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಅರ್ಥಪೂರ್ಣ ಹಾಗೂ ಆವಶ್ಯಕ ಕಾರ್ಯಕ್ರಮ ಅಭಿನಂದನೆಗಳು ವೇಣೂರು ಘಟಕ