ಕಡಬ : ಜಾತಿ ಸಂಘಟನೆಗಳು ಸಮಾಜದ ಅಭಿವೃದ್ಧಿಗೆ ಪೂರಕವಾಗಿರಬೇಕೇ ಹೊರತು ಸಮಾಜವನ್ನು ಒಡೆಯಬಾರದು.ಸಮಾಜಮುಖಿ ಚಿಂತನೆಗಳಿಂದ ಸದೃಢ ರಾಷ್ಟ್ರ ನಿರ್ಮಾಣದ ಗುರಿಯೊಂದಿಗೆ ಜಾತಿ ಸಂಘಟನೆಗಳು ಕಾರ್ಯ ನಿರ್ವಹಿಸಬೇಕು ಎಂದು ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ.ಸದಾನಂದ ಪೆರ್ಲ ಹೇಳಿದರು.
ಅವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿಯ ಕಡಬ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದರು.
ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಮತ್ತು ಸಂದೇಶಗಳು ಜಾಗತಿಕ ಮನ್ನಣೆ ಪಡೆದಿವೆ. ಅವರ ಆದರ್ಶ ಮತ್ತು ತತ್ವದಡಿ ಕಾರ್ಯ ನಿರ್ವಹಿಸುತ್ತಿರುವ ಯುವವಾಹಿನಿ ಸಂಘಟನೆಯು ಯುವಕರಿಗೆ ಸ್ಫೂರ್ತಿ ಮತ್ತು ಚೈತನ್ಯವನ್ನು ತುಂಬುತ್ತಿದೆ. ಸಮಾಜದ ಯುವ ಸಮುದಾಯ ಐಎಎಸ್, ಐಪಿಎಸ್, ಐಎಫ್ಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಮೂಲಕ ಯುವಜನರು ಉನ್ನತ ಅವಕಾಶಗಳನ್ನು ಪಡೆಯಬೇಕು ಈ ನಿಟ್ಟಿನಲ್ಲಿ ಇಂತಹ ಸಂಘಟನೆಗಳು ಪೂರಕವಾಗಿ ಸ್ಪಂದಿಸಬೇಕು ಎಂದು ಸಲಹೆ ನೀಡಿದರು.
ಯುವವಾಹಿನಿ ಸಂಘಟನೆಯ ಪಾತ್ರ ಮಹತ್ವದ್ದು
ಸಮಾರಂಭ ಉದ್ಘಾಟಿಸಿ ಮಾತನಾಡಿದ ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಂಘದ ಉಪಾಧ್ಯಕ್ಷ ಪ್ರವೀಣ್ ಕುಮಾರ್ ಕೆಡೆಂಜಿ,ನಮ್ಮ ಶಕ್ತಿ ನಮಗೇ ತಿಳಿದಿಲ್ಲ.ಇದ್ದುದನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಬದಲು ಇಲ್ಲದೆಡೆ ತುಡಿಯುತ್ತಿದ್ದೇವೆ.ಸಮಾಜದ ಯುವಕರಿಗೆ ಸರಿಯಾದ ಮಾರ್ಗದರ್ಶನ ನೀಡುತ್ತಿರುವ ಯುವವಾಹಿನಿ ಸಂಘಟನೆಯ ಪಾತ್ರ ಮಹತ್ವದ್ದು ಎಂದರು.
ಸನ್ಮಾನ
ನೂತನ ಅಧ್ಯಕ್ಷರಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದ ಜನಾರ್ದನ ಬಿ.ಎಲ್. ಸರ್ವರ ಸಹಕಾರ ಕೋರಿದರು.ನಿವೃತ ಸೈನಿಕ ರಾಜೇಶ್ ಬಸ್ತಿ ಕೊಡೆಂಕಿರಿ ಹಾಗೂ ಹಿರಿಯ ಕೃಷಿಕ ಶೀನಪ್ಪ ಪೂಜಾರಿ ಪಾಲಪ್ಪೆ ಅವರನ್ನು ಸನ್ಮಾನಿಸಲಾಯಿತು. ಘಟಕದ ನಿರ್ಗಮನ ಅಧ್ಯಕ್ಷ ಯೋಗೀಶ್ ಕುಮಾರ್ ಅಗತ್ತಾಡಿ ಹಾಗೂ ಕಾರ್ಯದರ್ಶಿ ಮಿಥುನ್ ಸುಂದರ್ ಪಲ್ಲತ್ತಡ್ಕ ಅವರನ್ನು ಅಭಿನಂದಿಸಲಾಯಿತು.ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಪ್ರಮಾಣ ವಚನ
ಯುವವಾಹಿನಿ ಮಂಗಳೂರು ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ ನಡುಬೈಲು ಯುವವಾಹಿನಿ ಕಡಬ ಘಟಕದ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.ಯುವವಾಹಿನಿ ಕಡಬ ಘಟಕದ ನಿರ್ಗಮನ ಅಧ್ಯಕ್ಷ ಯೋಗೀಶ್ ಕುಮಾರ್ ಅಗತ್ತಾಡಿ ಅಧ್ಯಕ್ಷತೆ ವಹಿಸಿದ್ದರು. ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರು ಹಾಗು ಘಟಕದ ಸಲಹೆಗಾರರಾಗಿರುವ ಡಾ.ಸದಾನಂದ ಕುಂದರ್ ನೂತನ ಪದಾಧಿಕಾರಿಗಳನ್ನು ಪರಿಚಯಿಸಿದರು. ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಚಂದ್ರಶೇಖರ ಆಲಂಕಾರು ಮುಖ್ಯ ಅತಿಥಿಗಳಾಗಿದ್ದರು.
ಬಿಲ್ಲವ ಸಂಘದ ಕಡಬ ವಲಯ ಸಂಚಾಲಕ ಎಸ್.ಜಿನ್ನಪ್ಪ ಸಾಲಿಯಾನ್, ಮರ್ದಾಳ ವಲಯ ಸಂಚಾಲಕ ಸತೀಶ್ ಕೆ. ಮರ್ದಾಳ, ಆಲಂಕಾರು ವಲಯ ಸಂಚಾಲಕ ಸದಾನಂದ ಕುಮಾರ್ ಮಡ್ಯೊಟ್ಟು ಉಪಸ್ಥಿತರಿದ್ದರು. ಯುವವಾಹಿನಿ ಘಟಕದ ಕೋಶಾಧಿಕಾರಿ ಅಭಿಲಾಷ್ ಪಿ.ಕೆ. ಸ್ವಾಗತಿಸಿ, ನಿರ್ಗಮನ ಕಾರ್ಯದರ್ಶಿ ಮಿಥುನ್ ಸುಂದರ್ ಪಲ್ಲತ್ತಡ್ಕ 2018-19ನೇ ಸಾಲಿನ ವರದಿ ವಾಚಿಸಿದರು. ಶಿಕ್ಷಕಿ ಸರಿತಾ ಜನಾರ್ದನ ಬಿ.ಎಲ್. ಕಾರ್ಯಕ್ರಮ ನಿರೂಪಿಸಿ, ನೂತನ ಕಾರ್ಯದರ್ಶಿ ಶಿವಪ್ರಸಾದ್ ನೂಚಿಲ ವಂದಿಸಿದರು.
ಸುಚೇತಾ ಕದ್ರ ಹಾಗೂ ದಯಾನಂದ ಕರ್ಕೇರ ಆಲಂಕಾರು ಅವರು ಸಮ್ಮಾನಿತರನ್ನು ಪರಿಚಯಿಸಿದರು. ಘಟಕದ ನೂತನ ಉಪಾಧ್ಯಕ್ಷ ರಾಜೇಶ್ ಪೂಜಾರಿ ದೋಳ ಅವರು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪರಿಚಯಿಸಿದರು.