ಮೂಡುಬಿದಿರೆ : ಯುವವಾಹಿನಿ .ರಿ ಮೂಡುಬಿದಿರೆ ಘಟಕದ ಆಶ್ರಯದಲ್ಲಿ ದಿನಾಂಕ 16-6-2019ನೇ ಆದಿತ್ಯವಾರದಂದು “ಯುವಸ್ಪಂದನ” ಸೇವಾ ಯೋಜನೆಯ ಉದ್ಘಾಟನೆ ಹಾಗೂ ವಿದ್ಯಾರ್ಥಿ ವೇತನ” ದ ಬಗ್ಗೆ ಮಾಹಿತಿ ಕಾರ್ಯಗಾರ ಮತ್ತು ಎಸ್.ಎಸ್.ಎಲ್.ಸಿ ಯಲ್ಲಿ ಶೇ.90 ಕ್ಕಿಂತ ಅಧಿಕ ಅಂಕಗಳಿಸಿದ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮವು “ಬ್ರಹ್ಮಶ್ರೀ ಗುರುನಾರಾಯಣ ಸೇವಾ ಸಂಘ. ರಿ ಮೂಡುಬಿದಿರೆಯಲ್ಲಿ ಜರಗಿತ್ತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಡಬಿದಿರೆ ಯುವವಾಹಿನಿ ಘಟಕದ ಅಧ್ಯಕ್ಷರಾದ ಜಗದೀಶ್ಚಂದ್ರ ಡಿ ಕೆ ವಹಿಸಿದ್ದರು. ಯುವಸ್ಪಂದನ ಸೇವಾಯೋಜನೆಯ ಉದ್ಘಾಟನೆಯನ್ನು ಮುಲ್ಕಿ-ಮೂಡಬಿದಿರೆಯ ಜನಪ್ರಿಯ ಶಾಸಕರಾದ “ಉಮನಾಥ್ ಎ. ಕೋಟ್ಯಾನ್ ಇವರ ದಿವ್ಯಹಸ್ತಗಳಿಂದ ಮಾಡಿದರು ಮತ್ತು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ “ಜಯಂತ್ ನಡುಬೈಲ್” ಇವರು ಯುವವಾಹಿನಿ ಮೂಡುಬಿದಿರೆ ಘಟಕವು “ಮಾದರಿ” ಘಟಕವೆಂದು ಆಶಯದ ಮಾತುಗಳನ್ನು ಆಡಿದರು. ಶ್ರೀ ಕ್ಷೇತ್ರ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್. ಬ್ರಹ್ಮಶ್ರೀ ಗುರುನಾರಯಣ ಸೇವಾ ಸಂಘ ರಿ. ಮೂಡುಬಿದಿರೆಯಾ . ಮಾಜಿ ಅಧ್ಯಕ್ಷರು ಪೂವಪ್ಪ ಕುಂದರ್. ಸುವಿಧ್ ಬಜಾಜ್ ಮೂಡುಬಿದಿರೆ ಇದರ ಮಾಲಕರು ಸನ್ಮತ್ ಸುವರ್ಣ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ ನ ಗೌರವ ವಿಶ್ವಸ್ಥರು ಚಂದ್ರಶೇಖರ್ ಎಸ್,ಎಡಪದವು ಸಂಪನ್ಮೂಲ ವ್ಯಕ್ತಿಯಾಗಿ ಅದೆಷ್ಟೋ ಸಂಘ ಸಂಸ್ಥೆಗಳು ಮತ್ತು ಕೇಂದ್ರ ಮತ್ತು , ರಾಜ್ಯಸರ್ಕಾರ ಹಾಗೂ ದೇವಸ್ಥಾನಗಳ ವತಿಯಿಂದ ಸಿಗುವಂತಹ ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿ ಮತ್ತು ಅಪ್ಲಿಕೇಶನ್ ನೀಡಿ ಯಾವ ರೀತಿ ಯಾವ ಸಂಸ್ಥೆಗೆ ಮನವಿ ಸಲ್ಲಿಸಬೇಕೆಂದು ಸಂಕ್ಷಿಪ್ತವಾಗಿ ವಿವರಿಸಿದರು ಸುಮಾರು 400 ವಿದ್ಯಾರ್ಥಿಗಳಿಗೆ ಇದರ ಪ್ರಯೋಜನವನ್ನು ಪಡೆದರು.
ಕಾರ್ಯಕ್ರಮದ ವೈಶಿಷ್ಟ್ಯತೆ:-
2018-19 ನೇ ಸಾಲಿನಲ್ಲಿ ಮೂಡುಬಿದಿರೆ ವ್ಯಾಪ್ತಿಯಲ್ಲಿ ಶೇ.90ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ “ಯುವಸಿರಿ-2019″ಎಂಬ ವಿಶೇಷ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
ವಿದ್ಯಾರ್ಥಿ ವೇತನದ ವಿತರಣೆ:- ಯುವವಾಹಿನಿ ರಿ. ಮೂಡುಬಿದಿರೆ ಘಟಕದ ವತಿಯಿಂದ ಉದ್ಘಾಟನೆಗೊಂಡ ” ಯುವಸ್ಪಂದನ “ಸೇವಾ ಯೋಜನೆಯ ಮೂಲಕ ಸುಮಾರು 12 ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ರೂ.5000 ದಂತೆ ನೀಡುವ ಮೂಲಕ ಯುವಸ್ಪಂದನ ಸೇವಾ ಯೋಜನೆಗೆ ಚಾಲನೆಯನ್ನು ನೀಡಲಾಯಿತು.
“ಯುವಸಿಂಚನ” ಪತ್ರಿಕೆಯ ಜೂನ್ ಸಂಚಿಕೆ ಬಿಡುಗಡೆ.
ಯುವವಾಹಿನಿಯಾ ಮುಖವಾಣಿ “ಯುವಸಿಂಚನ” ಪತ್ರಿಕೆಯ ಜೂನ್ ಸಂಚಿಕೆಯನ್ನು ಶಾಸಕರಾದ ಉಮನಾಥ್ ಎ. ಕೋಟ್ಯಾನ್ ಬಿಡುಗಡೆ ಮಾಡಿದರು
ಬ್ರಹ್ಮಶ್ರೀ ಗುರುನಾರಾಯಣ ಸೇವಾ ಸಂಘ ರಿ. ಮೂಡುಬಿದಿರೆ ಇದರ ಅಧ್ಯಕ್ಷರಾದ ರವೀಂದ್ರ ಎಂ.ಸುವರ್ಣ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರು ಹಾಗೂ ಮೂಡುಬಿದಿರೆ ಘಟಕದ ಸಲಹೆಗಾರರಾದ ಟಿ.ಶಂಕರ್ ಸುವರ್ಣ, ನಾರಾಯಣ ಸ್ವಾಮಿಲ್ ಮೂಡಬಿದಿರೆ ಮಾಲಕರಾದ ಭಾನುಮತಿ ಶೀನಪ್ಪ ಪುರಸಭೆ ಸದಸ್ಯರುಗಳಾದ ಸುರೇಶ್ ಕೋಟ್ಯಾನ್, ನಾಗರಾಜ್ ಪೂಜಾರಿ, ರಾಜೇಶ್ ನಾಯ್ಕ್ ಇವರುಗಳು ಉಪಸ್ಥಿತಿಯಲ್ಲಿದ್ದರು. ಘಟಕದ ಅಧ್ಯಕ್ಷರಾದ ಜಗದೀಶ್ಚಂದ್ರ ಡಿ.ಕೆ ಪ್ರಾಸ್ತವಿಕ ಮಾತುಗಳನ್ನು ಆಡುತ್ತಾ ಸರ್ವರನ್ನು ಸ್ವಾಗತಿಸಿದರು.ಸೌಮ್ಯ ಕಾರ್ಯಕ್ರಮ ನಿರೂಪಿಸಿದರು.
ವಿಧ್ಯಾರ್ಥಿ ವೇತನ ನೀಡಿರುವ ವಿಧ್ಯಾರ್ಥಿಗಳ ಮಾಹಿತಿಯನ್ನು ಸುದೀಪ್ ಬುನ್ನಣ್ ವಾಚಿಸಿದರು. ಶಂಕರ್ ಕೋಟ್ಯಾನ್ ಶೇ 90ಕಿಂತ ಅಂಕಗಳನ್ನು ಪಡೆದಿರುವ ವಿಧ್ಯಾರ್ಥಿಗಳ ಅಭಿನಂದನ ಪತ್ರ ಮಂಡಿಸಿದರು. ಕಾರ್ಯದರ್ಶಿ ನವಾನಂದ ಸರ್ವರಿಗೂ ವಂದನಾರ್ಪನೆ ಗೈದರು.