ವೇಣೂರು : ಯುವವಾಹಿನಿ (ರಿ) ವೇಣೂರು ಘಟಕದ ಅಂಡಿಂಜೆ ಗ್ರಾಮಸಂಚಾಲನ ಸಮಿತಿಯ ವತಿಯಿಂದ ಮರಕಡಿಯುವ ಮೆಷಿನ್ ತಾಗಿ ಗಾಯಗೊಂಡು ಆರ್ಥಿಕ ಸಂಕಷ್ಟದಲ್ಲಿರುವ ಅಂಡಿಂಜೆ ಗ್ರಾಮದ ಕಾನ ಮನೆಯ ಪ್ರವೀಣ್ ಪೂಜಾರಿಯವರಿಗೆ 10,000/ ರೂಪಾಯಿ ಸಾಂತ್ವನ ನಿಧಿಯನ್ನು ಹಸ್ತಾಂತರ ಮಾಡಲಾಯಿತು ,ಈ ಸಂದರ್ಭದಲ್ಲಿ ಸಂಚಾಲನ ಸಮಿತಿಯ ಅಧ್ಯಕ್ಷರಾದ ರಾಕೇಶ್ ಪೂಜಾರಿ ,ಕಾರ್ಯದರ್ಶಿ ರಕ್ಷಿತ್ ಹಲಕ್ಕಿ,ಅಂಡಿಂಜೆ ಗ್ರಾಮ ಪಂಚಾಯತ್ ಸದಸ್ಯರಾದ ನಿತೀನ್ ಮುಂಡೇವು, ಯುವವಾಹಿನಿ ವೇಣೂರು ಘಟಕದ ನಿರ್ದೇಶಕರಾದ ಪ್ರಶಾಂತ್ ನವಜ್ಯೋತಿ ,ಉಮೇಶ್ಚಂದ್ರ ಅಂಬಲ,ಸತೀಶ್ ಪಿ ಎನ್,ಶುಭಕರ ರಾಗಿಮೇರು , ಹಾಗೂ ಸುರೇಶ್ ಪೂಜಾರಿ, ಪ್ರವೀಣ್ ಪೂಜಾರಿ,ಸೂರಜ್ ಮುಂತಾದವರು ಉಪಸ್ಥಿತರಿದ್ದರು .