ಕೂಳೂರು : ಯುವವಾಹಿನಿ ಎಂಬ ಐದು ಅಕ್ಷರದಲ್ಲಿ ಒಂದು ಆಕರ್ಷಣೆ ಇದೆ, ಶಕ್ತಿ ಇದೆ, ಭರವಸೆ ಇದೆ. ಆರೋಗ್ಯಕರವಾದ ಸಂಪರ್ಕವೇ ಸಂಘಟನೆಯ ಸಾಧನ. ವಾಹಿನಿ ಅಂದರೆ ನಿರಂತರವಾದ ಹರಿವು, ಯುವವಾಹಿನಿಯ ನಿಸ್ವಾರ್ಥವಾದ ಸಮಾಜಮುಖಿ ಕಾಳಜಿಯಿಂದ ಕೂಡಿದ ಈ ಹರಿವಿನ ಶಕ್ತಿಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಯುವವಾಹಿನಿ ಯುವಜನತೆಯ ಭರವಸೆಯ ಬೆಳಕಾಗಿದೆ ಎಂದು ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ.ಸುವರ್ಣ ತಿಳಿಸಿದರು.
ದಿನಾಂಕ 05.05.2019 ರಂದು ಕೂಳೂರು ಚರ್ಚ್ ಹಾಲ್ ನಲ್ಲಿ ಜರುಗಿದ ಯುವವಾಹಿನಿ (ರಿ) ಕೂಳೂರು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಗೋಕರ್ಣನಾಥ ಕೊ ಅಪರೇಟಿವ್ ಬ್ಯಾಂಕ್ ನ ನಿವೃತ್ತ ಜನರಲ್ ಮೆನೇಜರ್ ಹಾಗೂ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಅಣ್ಣು ಪೂಜಾರಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಕೂಳೂರು ಘಟಕದ ಅಮೋಘ ಸಾಧನೆ ಶ್ಲಾಘನೀಯ : ಜಯಂತ ನಡುಬೈಲು
ಮೂರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಕೂಳೂರು ಘಟಕದ ಸಾಧನೆ ಶ್ಲಾಘನೀಯ, ವಿದ್ಯೆಗೆ ಪ್ರೋತ್ಸಾಹ, ನಿರಂತರ ಸಮಾಜಮುಖಿ ಕಾರ್ಯಗಳ ಮೂಲಕ ಕೂಳೂರು ಘಟಕದ ಸಾಧನೆ ಮನೆಮಾತಾಗಿವೆ ಎಂದು ಯುವವಾಹಿನಿ ಕೂಳೂರು ಘಟಕದ 2019-20 ನೇ ಸಾಲಿನ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಜಯಂತ್ ನಡುಬೈಲು ತಿಳಿಸಿದರು.
ಮಾತ್ರ ಸ್ಪರ್ಶ ಮುಖವಾಣಿ:
ಘಟಕದ ಸದಸ್ಯ ಲೋಕೇಶ್ ಪೂಜಾರಿ ಸಂಪಾದಕೀಯದಲ್ಲಿ ಮೂಡಿ ಬಂದ ಯುವವಾಹಿನಿ(ರಿ) ಕೂಳೂರು ಘಟಕದ 2018-19 ನೇ ಸಾಲಿನ ಮುಖವಾಣಿ ಮಾತ್ರ ಸ್ಪರ್ಶವನ್ನು ಮಂಗಳೂರು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಭವ್ಯ ಗಂಗಾಧರ್ ಇವರು ಬಿಡುಗಡೆಗೊಳಿಸಿದರು .
ಯುವವಾಹಿನಿ (ರಿ) ಕೂಳೂರು ಘಟಕದ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು .
ಕಾರ್ಯಕ್ರಮದಲ್ಲಿ ಎಲ್. ಕೆ ಗ್ರೂಪ್ ಮಂಗಳೂರು ಉದ್ಯಮಿ ಕಿಶೋರ್ ಸುವರ್ಣ, ಯುವವಾಹಿನಿ ಕೂಳೂರು ಘಟಕದ ಸಲಹೆಗಾರರಾದ ನೇಮಿರಾಜ್, ಬ್ರಹ್ಮಶ್ರೀ ನಾರಾಯಣ ಗುರು ಮoದಿರದ ಅಧ್ಯಕ್ಷರಾದ ಹರೀಶ್ ಅಮೀನ್ ಇವರು
ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಕಲಕಲಾವಲ್ಲಭ (ಜರ್ನಲಿಸಮ್ನಲ್ಲಿ ಮಂಗಳೂರು ಯೂನಿವರ್ಸಿಟಿ ಗೆ 2 ಚಿನ್ನದ ಪದಕ, ಯಕ್ಷಗುರು, ಸಾಹಿತಿ) ದೀವಿತ್ ಕೋಟ್ಯಾನ್ ಇವರನ್ನು ಇವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಸೌಂದರ್ಯ ತಾರೆ ಸುದೀಕ್ಷ ಕಿರಣ್ ಸುವರ್ಣ ಇವರನ್ನು ಅಭಿನoದಿಸಲಾಯಿತು.ವೆೈ.ಪಿ.ಎಲ್ ತoಡದ ಮಾಲಕರಾದ ತಾರನಾಥ್ ಎಚ್.ಬಿ ಹಾಗು ನಮ್ಮ ಘಟಕಕ್ಕೆ ಸದಾ ಸಹಕಾರ ನೀಡುತ್ತಿರುವ ದಿನಕರ್ ಬoಗೇರ ಇವರನ್ನು ಕೂಡ ಅಭಿನoದಿಸಲಾಯಿತು.
ಯುವವಾಹಿನಿ ಕೂಳೂರು ಘಟಕದ ನಿಕಟ ಪೂರ್ವ ಅಧ್ಯಕ್ಷರಾದ ಪುಷ್ಪರಾಜ್ ಕುಮಾರ್ ನೂತನ ಪದಾಧಿಕಾರಿಗಳನ್ನು ಸಭೆಗೆ ಪರಿಚಯಿಸಿದರು . ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಭಾಸ್ಕರ್ ಕೋಟ್ಯಾನ್ ರವರು ಸಭೆಯನ್ನುದ್ದೇಶಿಸಿ ತನ್ನ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ತಿಳಿಸಿ ಸರ್ವರ ಸಹಕಾರ ಯಾಚಿಸಿದರು.
ಕಾರ್ಯಕ್ರಮದಲ್ಲಿ ಸುಮಾರು 73 ವಿದ್ಯಾರ್ಥಿಗಳಿಗೆ ರೂಪಾಯಿ 2,19,000/- ಮೊತ್ತದ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು. ಕೇಂದ್ರ ಸಮಿತಿಯ ವಿದ್ಯಾನಿಧಿಗೆ ರೂಪಾಯಿ 40000/- ಹಸ್ತಾಂತರಿಸಲಾಯಿತು .
SSLC ಹಾಗೂ PUC ಯಲ್ಲಿ ಶೇಕಡಾ 80% ಕ್ಕಿಂತ ಅಧಿಕ ಅಂಕ ಗಳಿಸಿದ 24 ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ನಿರ್ಗಮನ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ರವರು ತನ್ನ ಅಧಿಕಾರ ಅವಧಿಯಲ್ಲಿ ಸಹಕರಿಸಿದ ಎಲ್ಲಾ ಸದಸ್ಯರಿಗೂ ಹಾಗೂ ಇತರ ಘಟಕದವರಿಗೂ ಕೃತಜ್ಞತೆ ಸಲ್ಲಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.
ಕಾರ್ಯದರ್ಶಿ ಪವಿತ್ರಾ ಅಂಚನ್ ವಾರ್ಷಿಕ ವರದಿ ಮಂಡಿಸಿದರು. ಲೋಕೇಶ್ ಕೋಟ್ಯಾನ್ ಸ್ವಾಗತಿಸಿದರು ವಿ. ಜೆ ಪ್ರತೀಶ್ ಗೌರೀಶ್ ಹಾಗೂ ಸುಜಿತ್ ರಾಜ್. ಕಾರ್ಯಕ್ರಮ ನಿರೂಪಿಸಿದರು. ಸಂಚಾಲಕರಾದ ನಿಶಿತ್ ಪೂಜಾರಿ ವಂದನಾರ್ಪಣೆ ಮಾಡಿದರು.
Mathr sparsha is very nice. All members are real hero’s.