ಮೂಡುಬಿದಿರೆ : ಸಾಧನೆ ಮತ್ತು ತೃಪ್ತ ಜೀವನಕ್ಕೆ ರಾಜಕೀಯವೊಂದೆ ದಾರಿಯಲ್ಲ. ಶಿಕ್ಷಣ, ಉದ್ಯಮ, ಕಲೆ, ಕ್ರೀಡೆ, ಕೃಷಿ ಮೊದಲಾದ ನೂರು ದಾರಿಗಳಿವೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಬೀದಿಯಲ್ಲಿ ಹಾಲು-ಜೇನು ಹರಿಯುವುದು ಸಾಧ್ಯವಿಲ್ಲ. ರಾಜಕೀಯದಿಂದಲೆ ಉದ್ಧಾರ ಎಂಬುದು ಭ್ರಮೆ ಬೇಡ’’ ಎಂದು ಕಾರ್ಕಳದ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ ಕೋಟ್ಯಾನ್ ನುಡಿದರು. ಅವರು ಮೂಡುಬಿದಿರೆಯ ಯುವವಾಹಿನಿ ಘಟಕದ ಪದಗ್ರಹಣ ಸಮಾರಂಭದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು.
ಸಮಾಜಕ್ಕೆ ಘೋರ ಸಿಟ್ಟಿಗಿಂತ ಸಾತ್ವಿಕ ಸಿಟ್ಟಿನ ಅಗತ್ಯವಿದೆ. ಬದಲಾವಣೆಗಿಂತ ಮನಪರಿವರ್ತನೆಯ ಕೆಲಸ ಆಗಬೇಕಾಗಿದೆ. ಜಗತ್ತಿನ ಯುದ್ಧಗಳನ್ನೇ ಮಾತುಕತೆಯ ಮೂಲಕ ತಪ್ಪಿಸಲಾಗುತ್ತದೆ. ಹಿರಿಯರು ಯುವ ಸಮುದಾಯಕ್ಕೆ ತಿಳಿ ಹೇಳಿ ಆರೋಗ್ಯಪೂರ್ಣ ಸಮಾಜ ನಿರ್ಮಿಸುವುದು ಎಲ್ಲಾ ಸೇವಾ ಕಾರ್ಯಗಳಿಗಿಂತಲೂ ತುರ್ತಿನ ಕೆಲಸ ಎಂದರು.
ಮೆಸ್ಕಾಂ ಇಲಾಖೆಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಜಯಾನಂದ ಎಂ ಮಾತನಾಡಿ “ಸಮಾಜದಲ್ಲಿ ಅಸ್ತಿತ್ವದಲ್ಲಿರುವ ಯಾವುದೇ ಸ್ವರೂಪದ ಸಂಘಟನೆಗಳು ಕುಟುಂಬ ಬಾಂಧವ್ಯವನ್ನು ಹಾಗೂ ಮಾನವ ಪ್ರೇಮವನ್ನು ಬತ್ತುವಂತೆ ಮಾಡಬಾರದು. ಆ ಸಂಘಟನೆಗಳಲ್ಲಿ ಸ್ವಾರ್ಥ ತುಂಬಿದರೆ ಸುಖಿ ಸಮಾಜ ನಿರ್ಮಾಣ ಅಸಾಧ್ಯ ಎಂದರು. 21/04/2019ನೇ ಆದಿತ್ಯವಾರ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ (ರಿ) ಮೂಡಬಿದಿರೆಯಲ್ಲಿ ನಡೆದ ಯುವವಾಹಿನಿ ಪದಗ್ರಹಣ ಸಮಾರಂಭವನ್ನು ಹಿರಿಯರು ಆದ ಶ್ರೀಮತಿ ಭಾನುಮತಿ ಶೀನಪ್ಪ ಮಾಲ್ಹಕರು ನಾರಾಯಣ ಸಾ-ಮಿಲ್ ಇವರು ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್, ಮಂಗಳೂರಿನ ಅಧ್ಯಕ್ಷರಾದ ಶ್ರೀ ನವೀನ್ ಚಂದ್ರ ಡಿ. ಸುವರ್ಣ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಶುಭ ಹಾರೈಸಿದರು,. ಶ್ರೀ ರವೀಂದ್ರ ಎಂ. ಸುವರ್ಣ ಅಧ್ಯಕ್ಷರು ಬ್ರಹ್ಮಶ್ರೀ ಗುರುನಾರಾಯಣ ಸೇವಾ ಸಂಘ (ರಿ). ಮೂಡುಬಿದಿರೆ, ಶ್ರೀ ಟಿ. ಶಂಕರ್ ಸುವರ್ಣ ಮಾಜಿ ಅಧ್ಯಕ್ಷರು ಕೇಂದ್ರ ಸಮಿತಿ ಮಂಗಳೂರು ಹಾಗೂ ಸಲಹೆಗಾರರು ಯುವವಾಹಿನಿ ರಿ. ಮೂಡುಬಿದಿರೆ ಘಟಕ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀ ಜಯಂತ್ ನಡುಬೈಲ್ ಅಧ್ಯಕ್ಷರು ಯುವವಾಹಿನಿ ರಿ. ಕೇಂದ್ರ ಸಮಿತಿ ಮಂಗಳೂರು ಇವರು ಪ್ರತಿಜ್ಞಾ ಬೋಧನೆಯನ್ನು ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜೇಶ್ ಡಿ. ಕೋಟ್ಯಾನ್ ಅಧ್ಯಕ್ಷರು, ಯುವವಾಹಿನಿ ರಿ. ಮೂಡುಬಿದಿರೆ ಘಟಕ ವಹಿಸಿದ್ದರು. ಗೌರವ ಉಪಸ್ಥಿತಿಯಲ್ಲಿ ರಾಕೇಶ್ ಕುಮಾರ್ ಮೂಡುಕೋಡಿ, ಸಂಘಟನಾ ಕಾರ್ಯದರ್ಶಿ ಯುವವಾಹಿನಿ ರಿ. ಕೇಂದ್ರ ಸಮಿತಿ, ಮಂಗಳೂರು, ಶ್ರೀ ಪಿ.ಕೆ. ರಾಜು ಪೂಜಾರಿ ಅಧ್ಯಕ್ಷರು, ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ರಿ. ಕಾಶಿಪಟ್ಣ, ಶ್ರೀಮತಿ ಗೀತಾ ಸುಭಾಷ್ ಅಧ್ಯಕ್ಷರು, ಶ್ರೀ ನಾರಾಯಣಗುರು ಮಹಿಳಾ ಘಟಕ, ಮೂಡುಬಿದಿರೆ. ಶ್ರೀ ಸುಧಾಕರ ಪೂಜಾರಿ, ಅಧ್ಯಕ್ಷರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ರಿ. ಕಡಂದಲೆ-ಪಾಲಡ್ಕ, ಶ್ರೀ ಗೋಪಾಲ ಪೂಜಾರಿ ಅಧ್ಯಕ್ಷರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ರಿ. ಕಲ್ಲಮುಂಡ್ಕೂರು, ಶ್ರೀ ನಾರಾಯಣ ಪೂಜಾರಿ, ಬೈರೊಟ್ಟಿ ಅಧ್ಯಕ್ಷರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ರಿ. ಬೋರುಗುಡ್ಡೆ ಇವರು ಉಪಸ್ಥಿತರಿದ್ದರು. ನೂತನ ಅಧ್ಯಕ್ಷರಾಗಿ ಎಲ್.ಎನ್. ಜಗದೀಶ್ಚಂದ್ರ ಡಿ.ಕೆ. ಮತ್ತು ಕಾರ್ಯದರ್ಶಿಯಾಗಿ ನವಾನಂದ ಇವರನ್ನು ಆಯ್ಕೆ ಮಾಡಲಾಯಿತ್ತು.
ಆರ್ಥಿಕ ನೆರವು : ಮಾರ್ನಾಡ್ ನಿವಾಸಿ ರಾಜೇಶ್ ಇವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಇವರ ಚಿಕಿತ್ಸೆಗೆ ವೈಧ್ಯಕೀಯ ನೆರವು ಹಾಗೂ ಇರುವೈಲ್‍ನ ನಿವಾಸಿಯಾಗಿ ಸವಿತ ಇವರ ಮದುವೆಗಾಗಿ ಆರ್ಥಿಕ ನೆರವು ನೀಡಲಾಯಿತು.
ನೂತನ ಅಧ್ಯಕ್ಷರು ಜಗದೀಶ್ಚಂದ್ರ ಡಿ.ಕೆ. ಸ್ವಾಗತಿಸಿದರು, ಕಾರ್ಯದರ್ಶಿ ರಾಮ್ ಕುಮಾರ್ ವಾರ್ಷಿಕ ವರದಿ ಮಂಡಿಸಿದರು. ಕು. ಸೌಮ್ಯ ಮತ್ತು ಪ್ರತೀಶ್ ಕುಳೂರು ಕಾರ್ಯಕ್ರಮವನ್ನು ನಿರೂಪಿಸಿದರು. ನೂತನ ಕಾರ್ಯದರ್ಶಿ ನವಾನಂದ ಸರ್ವರಿಗೂ ಧನ್ಯವಾದ ನೀಡಿದರು.
ಸನ್ಮಾನ ಕಾರ್ಯಕ್ರಮ: ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರು ಹಾಗೂ ಮೂಡಬಿದಿರೆ ಘಟಕದ ಸಲಹೆಗಾರರಾದ ಟಿ. ಶಂಕರ್ ಸುವರ್ಣ ಮತ್ತು ಮೂಡಬಿದಿರೆ ಯುವವಾಹಿನಿ ಘಟಕದ ಸ್ಥಾಪನೆಗೆ ಮುಖ್ಯ ಕರನಿಕರ್ತರಾದ ರಾಕೇಶ್ ಕುಮಾರ್ ಮೂಡುಕೊಡಿ ಮತ್ತು ಬಾಲ ಪ್ರತಿಭೆ ಸಿಂಚನ ಎಸ್ ಕೋಟ್ಯಾನ್ ಬೆಳುವಾಯಿ ಇವರನ್ನು ಸನ್ಮಾನಿಸಲಾಯಿತು