ಕಂಕನಾಡಿ : ಯುವವಾಹಿನಿ(ರಿ) ಕಂಕನಾಡಿ ಘಟಕದ ಪದಗ್ರಹಣ ಸಮಾರಂಭ ವು ಮಹಾಕಾಳಿ ದೈವಸ್ಥಾನದ ವಠಾರ ಉಜ್ಜೋಡಿ ಯಲ್ಲಿ ಜರಗಿತು. ಸಮಾರಂಭವನ್ನು ಶ್ರೀನಿವಾಸ ಬಂಗೇರ ಉಜ್ಜೋಡಿ ಉಧ್ಘಾಟಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಪ್ರಧಾನ ಕಾರ್ಯದರ್ಶಿ ರವಿಪೂಜಾರಿ ಚಿಲಿಂಬಿ ಅವರು ಮಾತನಾಡಿ ಯುವವಾಹಿನಿಯು ಜಾತಿ ಅಸಮಾನತೆಯನ್ನು ಹೋಗಲಾಡಿಸಿ ಯುವ ಜನತೆಯನ್ನು ಉತ್ತಮ ದಿಸೆಯಲ್ಲಿ ಕೊಂಡೊಯ್ಯುತ್ತಿದೆ ಸಂಘಟನೆಯಿಂದ ಇದು ಸಾಧ್ಯ ಗೆಜ್ಜೆಗಿರಿಯ ಶಿಲಾನ್ಯಾಸ ಸಂದರ್ಭ ಕೆಲವೇ ದಿನಗಳಲ್ಲಿ ಐವತ್ತು ಸಾವಿರ ಜನರನ್ನು ಸೇರಿಸಿ ಇತಿಹಾಸ ನಿರ್ಮಿಸಿದ್ದು ತಮಗೆಲ್ಲ ಗೊತ್ತಿದೆ. ಗೆಜ್ಜೆಗಿರಿ ಕ್ಷೇತ್ರವು ವಿಶ್ವ ಮಟ್ಟದಲ್ಲಿ ಗುರುತಿಸುವಂತೆ ನಾವೆಲ್ಲ ಜೊತೆಯಾಗಿ ಕೆಲಸ ಮಾಡೋಣ ಎಂದರು. ಯುವವಾಹಿನಿಯು ಶಿಸ್ತು ಬದ್ಧವಾಗಿ ಕೆಲಸ ಮಾಡುವ ಜೊತೆಗೆ ನಮ್ಮ ಸಮಾಜದಲ್ಲಿ ಸಾಧನೆ ಮಾಡುವ ಎಲ್ಲರಿಗೂ ಸ್ಫೂರ್ತಿ ಯಾಗಿ ನಮ್ಮ ಸಮಾಜಕ್ಕೆ ಬೆಳಕಾಗಿ ಇರುವ ಯುವವಾಹಿನಿ ನಮಗೆಲ್ಲ ಆದರ್ಶ ಎಂದರು.
ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಜಯಂತ್ ನಡುಬೈಲ್ ಕಂಕನಾಡಿ ಘಟಕದ ಸಾಧನೆಯನ್ನು ಕೊಂಡಾಡಿದರು ಹಾಗೂ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ಭೋಧನೆ ಮಾಡಿದರು.ಯುವವಾಹಿನಿ ಅಧ್ಯಕ್ಷರಾದ ಭವಿತ್ ರಾಜ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರು ಹಾಗೂ ಘಟಕದ ಸಲಹೆಗಾರರಾದ ಜಯರಾಂ ಕಾರಂದೂರು, ಘಟಕದ ಕಾರ್ಯದರ್ಶಿ ಸುಮಾ ವಸಂತ್ ಉಪಸ್ಥಿತರಿದ್ದರು. ಯುವವಾಹಿನಿ ಕಂಕನಾಡಿ ಘಟಕದ 2019-2020 ನೂತನ ಅಧ್ಯಕ್ಷರಾಗಿ ಸುರೇಶ್ ಎಂ.ಎಸ್.ಅವಿರೋಧವಾಗಿ ಆಯ್ಕೆಗೊಂಡರು.ನೂತನ ಕಾರ್ಯದರ್ಶಿ ಪ್ರಥ್ವಿ ರಾಜ್ ವಂದಿಸಿದರು ರಾಕೇಶ್ ಕುಮಾರ್ ಹಾಗೂ ಸಹನ ಕಾರ್ಯಕ್ರಮ ನಿರೂಪಿಸಿದರುವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಲಾಯಿತು ಕರಾಟೆ ಯಲ್ಲಿ ಶ್ರಾವ್ಯ ಹಾಗೂ ವಿಶ್ವಿತ್, ಸ್ಕೇಟಿಂಗ್ ನಲ್ಲಿ ರಾಷ್ಟ್ರಮಟ್ಟದಲ್ಲಿ ಚಿನ್ನದ ಪದಕ ಗಳಿಸಿದ ದೇವಿಕಾ ಜಿ ಕೆ ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯುತ್ತಮ ಅಂಕ ಗಳಿಸಿದ ಅಂದ ವಿದ್ಯಾರ್ಥಿ ಯಕ್ಷಿತ್ ಹಾಗೂ ಯಕ್ಷಗಾನದಲ್ಲಿ ವಿಶೇಷ ಸಾಧನೆ ಮಾಡಿದ ನಿರಂಜಯ ನಾರಯಣ ಅವರನ್ನು ಸನ್ಮಾನಿಸಲಾಯಿತುಘಟಕಕ್ಕೆ ನಿರಂತರ ಸಹಕಾರ ನೀಡಿದ ರಮೇಶ್ ರವರನ್ನು ಗುರುತಿಸಲಾಯಿತು
ವಿದ್ಯಾರ್ಥಿಗಳಿಗೆ ದಿಕ್ಸೂಚಿ ಕಾರ್ಯಕ್ರಮ
ಯುವವಾಹಿನಿ ಕೇಂದ್ರ ಸಮಿತಿ ಸಹಕಾರದೊಂದಿಗೆ ಯುವವಾಹಿನಿ ಸದಸ್ಯರ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಐಎಎಸ್ ಉಚಿತ ತರಬೇತಿ ನೀಡುವ ದಿಕ್ಸೂಚಿ ಕಾರ್ಯಕ್ರಮವನ್ನು ನೂತನ ಅಧ್ಯಕ್ಷರಾದ ಸುರೇಶ್ ಎಂಎಸ್ ಘೋಷಣೆ ಮಾಡಿದರು.