ದಿನಾಂಕ 22-01-2017 ರಂದು ಯುವವಾಹಿನಿ ಸುರತ್ಕಲ್ ಘಟಕದ ಪದಗ್ರಹಣ ಸಾರಥ್ಯ-2017 ಕಾರ್ಯಕ್ರಮವು ಸುರತ್ಕಲ್‌ನ ಲಯನ್ಸ್‌ಕ್ಲಬ್ ಸಭಾಭವನದಲ್ಲಿ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಪ್ರಧಾನ ಕಾರ್ಯದರ್ಶಿ ಹಾಗೂ ಯುವವಾಹಿನಿ ಕೇಂದ್ರ ಸಮಿತಿಯ ಸಲಹೆಗಾರರಾದ ಬಿ. ತಮ್ಮಯರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಎಸ್.ಎಸ್. ಪೂಜಾರಿ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯೆ ಶ್ರೀಮತಿ ಪ್ರತಿಭಾ ಕುಳಾಯಿ ಮತ್ತು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷ ಪದ್ಮನಾಭ ಮರೋಳಿ ಮೊದಲಾದವರು ಭಾಗವಹಿಸಿದ್ದರು. ಘಟಕದ ಅಧ್ಯಕ್ಷ ಭಾಸ್ಕರ ಸಾಲ್ಯಾನ್ ಅಗರಮೇಲು, ಕಾರ್ಯದರ್ಶಿ ವಿವೇಕ್ ಬಿ. ಕೋಟ್ಯಾನ್ ಮತ್ತು ಕಾರ್ಯಕ್ರಮದ ಸಂಚಾಲಕ ಸತೀಶ್ ಕೋಟ್ಯಾನ್‌ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ವಿಠೋಭ ರುಕ್ಮಾಯಿ ಇಡ್ಯಾ ಮತ್ತು ಶ್ರೀ ನಾರಾಯಣಗುರು ಮಂದಿರದ ಮೂರು ಅರ್ಚಕರುಗಳಾದ ಶ್ರೀ ಗಂಗಾಧರ ಶಾಂತಿ, ಶ್ರೀ ದಯಾನಂದ ಶಾಂತಿ ಮತ್ತು ಶ್ರೀ ಹೇಮನಾಥ ಶಾಂತಿ ಇವರುಗಳ ಗುರುತಿಸಿ ಗೌರವಿಸಲಾಯಿತು. ಸಮಾಜದ ಯುವ ಪ್ರತಿಭೆ, ಅಂತರಾಷ್ಟ್ರೀಯ ಕರಾಟೆ ಪಟು ಪ್ರತಿಕ್ ಪೂಜಾರಿಯವರನ್ನು ಅಭಿನಂದಿಸಲಾಯಿತು.
ಯುವವಾಹಿನಿ ಸುರತ್ಕಲ್ ಘಟಕದ ಮುಖವಾಣಿ ಚಿಲುಮೆ ಪತ್ರಿಕೆಯನ್ನು ಎಸ್.ಎಸ್. ಪೂಜಾರಿಯವರು ಬಿಡುಗಡೆಗೊಳಿಸಿದರು. ಸಂಪಾದಕರಾದ ಶ್ರೀ ಕೃಷ್ಣ ಪಿ. ಅಂಚನ್‌ರವರು ಈ ಕಾರ್ಯಕ್ರಮ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ತಾ. 11-12-2016 ರಂದು ನಡೆದ ಕ್ರೀಡೋತ್ಸವದ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
ಚುನಾವಣಾಧಿಕಾರಿ ಕೃಷ್ಣ ಪಿ. ಅಂಚನ್‌ರವರು ನೂತನ ಪದಾಧಿಕಾರಿಗಳನ್ನು ಸಭೆಗೆ ಪರಿಚಯಿಸಿದರು. ಅಧ್ಯಕ್ಷರಾಗಿ ರವೀಂದ್ರ ಎಸ್. ಕೋಟ್ಯಾನ್, ಕಾರ್ಯದರ್ಶಿ ರಿತೇಶ್ ಕೆ. ಕೃಷ್ಣಾಪುರ, ಉಪಾಧ್ಯಕ್ಷ ಅಶೋಕ್ ಕುಳಾಯಿ, ಜೊತೆ ಕಾರ್ಯದರ್ಶಿ ಕಿಶೋರ್ ಕುಮಾರ್, ಕೋಶಾಧಿಕಾರಿ ಪ್ರಶಾಂತ್ ಇಡ್ಯಾ, ಸಂಘಟನಾ ಕಾರ್ಯದರ್ಶಿ ದೀಪೇಶ್ ರಾಜ್ ಮತ್ತು ವಿವಿಧ ನಿರ್ದೇಶಕರುಗಳಲ್ಲಿ ವ್ಯಕ್ತಿತ್ವ ವಿಕಸನ-ರವೀಂದ್ರ ಕಾನ, ಕ್ರೀಡೆ, ಆರೋಗ್ಯ ಸಮಾಜ ಸೇವೆ-ಶ್ರೀನಿವಾಸ ಸುವರ್ಣ, ಸಾಹಿತ್ಯ ಮತ್ತು ಸಂಸ್ಕೃತಿ-ಚರಣ್ ಸನಿಲ್, ಉದ್ಯೋಗ ಮತ್ತು ಭವಿಷ್ಯ ನಿಧಿ – ಜೀವನ್ ಕೋಟ್ಯಾನ್, ಕುಟುಂಬ ಸಂಪರ್ಕ – ಸೌಪರ್ಣ, ನಾರಾಯಣ ಗುರು ತತ್ವಾದರ್ಶ ಪ್ರಚಾರ – ವಿವೇಕ್ ಬಿ. ಕೋಟ್ಯಾನ್, ವಿದ್ಯಾರ್ಥಿ ಸಂಘಟನೆ – ಅಶೋಕ್, ವಿದ್ಯಾನಿಧಿ – ರಾಜೇಶ್ ಎಲ್. ಶೆಟ್ಟಿ ಮೊದಲಾದವರು ನೂತನ ಕಾರ್ಯಕಾರಿ ಸಮಿತಿಗೆ ಆಯ್ಕೆಗೊಂಡರು.
ನೂತನ ಪದಾಧಿಕಾರಿಗಳಿಗೆ ಕೇಂದ್ರ ಸಮಿತಿಯ ಅಧ್ಯಕ್ಷ ಪದ್ಮನಾಭ ಮರೋಳಿಯವರು ಪ್ರತಿಜ್ಞಾ ವಿಧಿಯನ್ನು ಭೋದಿಸಿದರು.
ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ) ಕೇಂದ್ರ ಸಮಿತಿ, ವಿವಿಧ ಘಟಕಗಳ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಘಟಕದ ಅಧ್ಯಕ್ಷ ಭಾಸ್ಕರ್ ಸಾಲ್ಯಾನ್ ಅಗರಮೇಲು ಸ್ವಾಗತಿಸಿದರು. ವಿಜಯ ಎಸ್. ಕುಕ್ಯಾನ್‌ರವರು ಪ್ರಸ್ತಾವನೆಗೈದರು. ಕಾರ್‍ಯದರ್ಶಿ ವರದಿ ವಾಚಿಸಿದರು. ಕು| ಜಿ.ಡಿ. ಹರ್ಷಿತ ಪ್ರಾರ್ಥಿಸಿದರು. ಕಾರ್ಯಕ್ರಮದ ಸಂಚಾಲಕ ಸತೀಶ್ ಕೋಟ್ಯಾನ್‌ರವರು ವಂದಿಸಿದರು. ಸೌಪರ್ಣರವರು ಕಾರ್ಯಕ್ರಮವನ್ನು ನಿರೂಪಿಸಿದರು.