ಮೂಡಬಿದಿರೆ : ದಕ್ಷಿಣ ಕನ್ನಡ ಸ್ಕೀಪ್ ಸಮಿತಿ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗು ಆಳ್ವಾಸ್ ಶಿಕ್ಷಣ ಸಂಸ್ಥೆ ಮತ್ತು “”ಯುವವಾಹಿನಿ (ರಿ) ಮೂಡುಬಿದಿರೆ ಘಟಕ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ದಿನಾಂಕ 24-3-2019ರಂದು ಮೂಡುಬಿದಿರೆ ಯ “ಸ್ವರಾಜ್ ಮೈದಾನದ ಮುಖ್ಯ ದ್ವಾರ”ದಿಂದ ಮೂಡುಬಿದಿರೆ ವ್ಯಾಪ್ತಿಯ 18ಕಿ.ಮೀ ಜಿಲ್ಲಾ ಮಟ್ಟದ ಮ್ಯಾರಥಾನ್ ಸ್ಪರ್ಧೆ ಯಶಸ್ವಿಯಾಗಿ ನಡೆಯಿತು.
ಈ “ಮ್ಯಾರಥಾನ್” ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ವ್ಯಾಪ್ತಿಯಲ್ಲಿ ಬರುವ ಶಾಲಾ/ಕಾಲೇಜು ಗಳ ವಿದ್ಯಾರ್ಥಿಗಳು, ಇಲಾಖಾ ಅಧಿಕಾರಿ/ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಒಟ್ಟು 2500 ಜನರು ಭಾಗವಹಿಸದ್ದು ಈ ಸ್ಪರ್ಧೆಯನ್ನು ಯಶಸ್ವಿಗೊಳಿಸಿದರು.ಸುಮಾರು 1,350 ಕ್ರೀಡಾ ಸ್ಪರ್ಧಿಗಳು ಭಾಗವಹಿಸಿದ್ದು “ಯುವವಾಹಿನಿ ರಿ. ಮೂಡುಬಿದಿರೆ ಘಟಕದಿಂದ 35 ಸದಸ್ಯರು ಪಾಲ್ಗೊಂಡಿದ್ದರು…
ಮ್ಯಾರಥಾನ್ ಕಾರ್ಯಕ್ರಮಕ್ಕೆ ಯುವವಾಹಿನಿ ಮೂಡುಬಿದಿರೆ ಘಟಕದ ವತಿಯಿಂದ ರೂ. 5,000 ನಗದು ನೀಡಲಾಯಿತು. ಮತ್ತು ಈ ಬಗ್ಗೆ ಸಹಕಾರ ನೀಡಿದ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರು ಹಾಗೂ ಯುವವಾಹಿನಿ ರಿ. ಮೂಡಬಿದಿರೆ ಘಟಕದ ಸಲಹೆಗಾರರಾದ ಟಿ. ಶಂಕರ್ ಸುವರ್ಣ ಇವರನ್ನು ಅಭಿನಂದಿಸಲಾಯಿತು.