ಶ್ರೀ ನಾರಾಯಣಗುರು ಸೇವಾದಳ, (ಬಿಲ್ಲವ ಸಮಾಜ ಸೇವಾ ಸಂಘ ಮೂಲ್ಕಿ, ಯುವವಾಹಿನಿ (ರಿ) ಮೂಲ್ಕಿ ಘಟಕದ ಹಾಗೂ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ ಇದರ ಜಂಟಿ ಸಹಭಾಗಿತ್ವದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರವು ದಿನಾಂಕ 22-01-2017 ರಂದು ಮೂಲ್ಕಿ ಬಿಲ್ಲವ ಸಂಘದಲ್ಲಿ ಜರಗಿರುತ್ತದೆ.
ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ ಇದರ ಖ್ಯಾತ ಹೃದಯರೋಗ ತಜ್ಞ ಡಾ| ಸುಬ್ರಹ್ಮಣ್ಯಮ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಗೋಪಿನಾಥ ಪಡಂಗ ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ್ದರು. ಡಾ| ಲಾರೆನ್ಸ್ ಮಥಾಯಸ್ (ಎಲುಬು ಮತ್ತು ಸಂಧಿ ರೋಗ ವಿಭಾಗದ ಮುಖ್ಯಸ್ಥರು), ಹರ್ಷರಾಜ್ ಶೆಟ್ಟಿ ಜಿ.ಎಮ್, ಸೇವಾದಳ ದಳಪತಿ ಉಮೇಶ್ ಮಾನಂಪಾಡಿ, ಯುವವಾಹಿನಿ (ರಿ.) ಮೂಲ್ಕಿ ಘಟಕದ ಅಧ್ಯಕ್ಷ ಚೇತನ್ ಕುಮಾರ್, ಸತೀಶ್ ಕಿಲ್ಪಾಡಿ ಮುಂತಾದವರು ಉಪಸ್ಥಿತರಿದ್ದರು. ಶಿಬಿರಾರ್ಥಿಗಳಿಗೆ ಹೃದಯ ರೋಗ, ಎಲುಬು ಮತ್ತು ಸಂಧಿ ರೋಗ ಹಾಗೂ ಇತರ ರೋಗಗಳ ತಪಾಸಣೆಯನ್ನು ತಜ್ಞ ವೈದ್ಯರುಗಳಿಂದ ನಡೆಸಲಾಯಿತು.