Yuvavahini

MAR 17, 2019 3.54 PM IST

ಯುವವಾಹಿನಿ (ರಿ ) ಕೊಲ್ಯ ಘಟಕದ ಪದಗ್ರಹಣ ಸಮಾರಂಭ : 2019-20

ಕೊಲ್ಯ : ಯುವವಾಹಿನಿ (ರಿ) ಕೊಲ್ಯ ಘಟಕ ಇದರ 2019 -20 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ದಿನಾಂಕ 17/03/2019 ನೇ ಆದಿತ್ಯವಾರದಂದು ಬ್ರಹ್ಮ ಶ್ರೀ ನಾರಾಯಣ ಗುರು ಮಂದಿರ ಕೊಲ್ಯದಲ್ಲಿ ಜರಗಿತು. ಒಂದೇ ಜಾತಿ,ಒಂದೇ ಧರ್ಮ,ಒಂದೇ ದೇವರು ಎಂಬ ತತ್ವವನ್ನು ಜಗತ್ತಿಗೆ ಸಾರಿದ ಬ್ರಹ್ಮ ಶ್ರೀ ನಾರಾಯಣ ಗುರುಗಳಿಗೆ ಪ್ರಾರ್ಥನೆ ಮತ್ತು ಪೂಜೆ ಸಲ್ಲಿಸುವುದರ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.ಘಟಕದ ಅಧ್ಯಕ್ಷರಾದ ಕುಸುಮಾಕರ್ ಕುಂಪಲರವರು ಸಮಾರಂಭಕ್ಕೆ ಆಗಮಿಸಿದ ಮುಖ್ಯ ಅತಿಥಿಗಳನ್ನು ಪ್ರೀತಿಪೂರ್ವಕವಾಗಿ ಸ್ವಾಗತಿಸಿದರು.ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗೋಕರ್ಣನಾಥ ಕಾಲೇಜು ಮಂಗಳೂರಿನ ಉಪನ್ಯಾಸಕರಾದ ಡಾ|ದಿನಕರ್ ಎಸ್ ಪಚ್ಚನಾಡಿ ಯವರು,ನಾವು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಎಷ್ಟು ಸ್ವಚ್ಚತೆಯಲ್ಲಿ ಇಡುತ್ತೆವೆಯೊ,ಅಷ್ಟೇ ಕಾಳಜಿಯನ್ನು ನಮ್ಮ ಆಂತರ್ಯದಲ್ಲೂ ತೋರ್ಪಡಿಸಿದಾಗ ನಮ್ಮಿಂದ ಈ ಸಮಾಜಕ್ಕೆ ನಿಷ್ಕಲ್ಮಶವಾದ ಸೇವೆಯನ್ನು ನೀಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ನಮ್ಮ ಘಟಕದ ಸದಸ್ಯರಾದ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಅಜಿತ್ ಪೂಜಾರಿ ಪಜೀರು ಮತ್ತು ಸೌಜನ್ಯ ಅಜಿತ್ ಪೂಜಾರಿ ,ದೀಪಕ್ ಎಸ್ ಕೋಟ್ಯಾನ್ ಮತ್ತು ಸೌಮ್ಯ ದೀಪಕ್ ಈ ನವ ಜೋಡಿಗಳನ್ನು ಸಾಂಪ್ರದಾಯಿಕ ರೀತಿಯಲ್ಲಿ ಆರತಿ ಬೆಳಗಿಸಿ ಶುಭ ಕೋರಲಾಯಿತು.

ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷರಾದ ಜಯಂತ್ ನಡುಬೈಲ್ ರವರು ಕಳೆದ ಒಂದು ವರುಷದಲ್ಲಿ ಕೊಲ್ಯ ಘಟಕದ ಕಾರ್ಯ ಸಾಧನೆಗಳಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಘಟಕದ ಎಲ್ಲಾ ಸದಸ್ಯರಿಗೆ ಅಭಿನಂದನೆಯನ್ನು ಸಲ್ಲಿಸಿದರು.

ಯುವವಾಹಿನಿ (ರಿ) ಕೊಲ್ಯ ಘಟಕದ 2019 -20 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣದ ಕಾರ್ಯವನ್ನು ಚುನಾವಣಾಧಿಕಾರಿಯಾದ ಮತ್ತು ಕೊಲ್ಯ ಘಟಕದ ಸ್ಥಾಪಕ ಅಧ್ಯಕ್ಷರಾದ ಸುರೇಶ್ ಬಿ ರವರು ನೆರವೇರಿಸಿದರು.ತದನಂತರ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಭೋಧನೆಯನ್ನು ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷರಾದ ಜಯಂತ್ ನಡುಬೈಲ್ ರವರು ನಡೆಸಿಕೊಟ್ಟರು.

ಯುವವಾಹಿನಿ (ರಿ) ಕೊಲ್ಯ ಘಟಕಕ್ಕೆ ಪ್ರಾರಂಭದಿಂದಲೂ ಸಹಕಾರವನ್ನು ನೀಡುತ್ತಿದ್ದ ಪುಣ್ಯಭೂಮಿ ತುಳುನಾಡ ಸೇವಾ ಪೌಂಡೇಶನ್ ಇದರ ಸಂಸ್ಥಾಪಕರಾದ ಚಂದ್ರಶೇಖರ್ ಪೂಜಾರಿ ಬಂಟ್ವಾಳರವರು ಮುಖ್ಯ ಅತಿಥಿಗಳ ನೆಲೆಯಲ್ಲಿ ಮಾತನಾಡಿ ಯುವವಾಹಿನಿ (ರಿ) ಕೊಲ್ಯ ಘಟಕದ ಸಮಾಜಮುಖಿ ಕಾರ್ಯಕ್ರಮಗಳಿಗೆ ನಿರಂತರ ಬೆಂಬಲವನ್ನು ನೀಡುತ್ತೇನೆಂದು ಭರವಸೆಯಿತ್ತರು.ಈ ಸಂದರ್ಭದಲ್ಲಿ ಬಹ್ಮಶ್ರೀ ನಾರಾಯಣಗುರುಗಳ ತತ್ವದಂತೆ, ವಿವಾಹದ ಶುಭ ಸಂದರ್ಭದಲ್ಲಿ ಮಧ್ಯಮುಕ್ತ ಸಮಾರಂಭವನ್ನು ಮಾಡಿ ಎಲ್ಲರಿಂದಲೂ ಮೆಚ್ಚುಗೆ ಗಳಿಸಿದ ನಮ್ಮ ಘಟಕದ ಸದಸ್ಯರ ಮಾತೆಯರಾದ ಸರೋಜಿನಿ ಮತ್ತು ನವೀನ ರವರನ್ನು ಅಭಿನಂದಿಸಲಾಯಿತು.

ಯುವವಾಹಿನಿ (ರಿ) ಕೊಲ್ಯ ಘಟಕದ ಶಾಶ್ವತ ವಿದ್ಯಾನಿಧಿ ಯೋಜನೆಗೆ ಒಂದು ತಿಂಗಳ ವೇತನವನ್ನು ಉದಾರ ಮನಸ್ಸಿನಿಂದ ದೇಣಿಗೆಯಾಗಿ ನೀಡಲು ನಿರ್ಧರಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ಅತಿಥಿಗಳಲ್ಲಿ ಒರ್ವರಾದ ಭವ್ಯ ಸಿ ಕೋಟ್ಯಾನ್ ರವರು ಯುವವಾಹಿನಿಯ ಸಮಾಜಮುಖಿ ಸೇವೆಯನ್ನು ಮುಕ್ತಕಂಠದಿಂದ ಸ್ವಾಗತಿಸಿದರು.

ಪದಗ್ರಹಣದ ನಂತರ ಪ್ರತಿಜ್ಞಾವಿಧಿ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷರಾದ ಆನಂದ್ ಎಮ್ ಮಲಯಾಳಕೋಡಿಯವರು ನಿರ್ಗಮನ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಅಭಿನಂದನೆಯನ್ನು ಸಲ್ಲಿಸಿ, ಮುಂದಕ್ಕೆ ಯುವವಾಹಿನಿ (ರಿ) ಕೊಲ್ಯ ಘಟಕವನ್ನು ಯಶಸ್ವಿಯಾಗಿ ಮುನ್ನಡೆಸಲು ಎಲ್ಲಾ ಸದಸ್ಯರ ಸಹಕಾರವನ್ನು ಯಾಚಿಸಿದರು.

ಈ ಸಂದರ್ಭದಲ್ಲಿ , ಕಳೆದ ಒಂದು ವರ್ಷದ ಅವಧಿಯಲ್ಲಿ ಅಭೂತಪೂರ್ವವಾದ ಕಾರ್ಯಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿ, ಕೊಲ್ಯ ಪರಿಸರದಲ್ಲಿ ಮತ್ತು ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು ಮತ್ತು ವಿವಿಧ ಘಟಕಗಳಿಂದ ಗುರುತಿಸಲ್ಪಟ್ಟು, ಹಲವಾರು ಉತ್ತಮ ಸಮಾಜಮುಖಿ ಕಾರ್ಯಕ್ರಮಗಳನ್ನು ಅರ್ಪಿಸಿದ 2018- 9 ನೇ ಸಾಲಿನ ಅಧ್ಯಕ್ಷರಾದ ಕುಸುಮಾಕರ್ ಕುಂಪಲರವರನ್ನು ಕೊಲ್ಯ ಘಟಕದ ಸರ್ವಸದಸ್ಯರ ಪರವಾಗಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಅವರ ಸಹಧರ್ಮಿಣಿ ಸೌಮ್ಯ ಕುಸುಮಾಕರ್ ಜೊತೆಯಾಗಿದ್ದರು.ಇವರ ಸನ್ಮಾನ ಪತ್ರವನ್ನು ಘಟಕದ ಕೋಶಾಧಿಕಾರಿಯವರಾದ ರಘುರಾಮ್ ಸುವರ್ಣರವರು ವಾಚಿಸಿದರು

ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಘಟಕದ ಅಧ್ಯಕ್ಷರಾದ ಕುಸುಮಾಕರ್ ಕುಂಪಲರವರು ಕಳೆದ ಒಂದು ವರುಷದ ಅಧ್ಯಕ್ಷೀಯ ಅವಧಿಯಲ್ಲಿ ಸಹಕಾರ ನೀಡಿದ ಘಟಕದ ಎಲ್ಲಾ ಸದಸ್ಯರಿಗೆ ಹೃದಯಾಂತರಾಳದ ಕೃತಜ್ಞತೆಯನ್ನು ಸಲ್ಲಿಸಿ, ಮುಂದೆಯೂ ಉತ್ತಮ ರೀತಿಯಲ್ಲಿ ಸಹಕಾರವನ್ನು ನೀಡುತ್ತೇನೆಂದು ಭರವಸೆಯನ್ನು ನೀಡಿದರು.

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರು ಮತ್ತು ಕೊಲ್ಯ ಘಟಕದ ಗೌರವ ಸಲಹೆಗಾರರಾದ ಅಶೋಕ್ ಕುಮಾರ್ ಮಂಗಳೂರು ಮತ್ತು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರು ಹಾಗೂ ಕೊಲ್ಯ ಘಟಕದ ಮಾಜಿ ಗೌರವ ಸಲಹೆಗಾರರಾದ ತುಕರಾಮ್ ಎನ್ ರವರು ಪದಗ್ರಹಣದ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಕೊಲ್ಯ ಘಟಕದ ಶಾಶ್ವತ ವಿದ್ಯಾನಿಧಿ ಯೋಜನೆಗೆ ಸಹಕಾರ ನೀಡಿದ ಭವ್ಯ ಸಿ ಕೋಟ್ಯಾನ್ ಮತ್ತು ಅಶೋಕ್ ಮಂಗಳೂರು ಇವರಿಗೆ ಶಾಶ್ವತ ವಿದ್ಯಾನಿಧಿ ಲಾಂಛನವನ್ನು ಘಟಕದ ಅಧ್ಯಕ್ಷರಾದ ಕುಸುಮಾಕರ ಕುಂಪಲರವರು ನೀಡಿದರು.ಘಟಕದ ಕೋಶಾಧಿಕಾರಿಯಾದ ರಘುರಾಮ್ ಸುವರ್ಣ ರವರು ಈ ಸಂದರ್ಭದಲ್ಲಿ,ಶಾಶ್ವತ ವಿದ್ಯಾನಿಧಿ ಯೋಜನೆಯಲ್ಲಿ ಇದುವರೆಗೆ ಒಟ್ಟುಗೂಡಿದ ರೂ 3,30,000/-( ಮೂರು ಲಕ್ಷದ ಮೂವತ್ತು ಸಾವಿರ) ದ ಬ್ಯಾಂಕ್ ಖಾತೆಯಲ್ಲಿ ತೊಡಗಿಸಿದ ನಿರಖು ಠೇವಣಿ ಪತ್ರವನ್ನು ಶಾಶ್ವತ ವಿದ್ಯಾನಿಧಿ ಯೋಜನೆಯ ಪ್ರಧಾನ ಸಂಚಾಲಕರಾದ ಕುಸುಮಾಕರ ಕುಂಪಲರವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸಮಾರಂಭದಲ್ಲಿ ಹಾಜರಿದ್ದ ವಿವಿಧ ಘಟಕಗಳ ಪದಾಧಿಕಾರಿಗಳು ಮತ್ತು ಬಿಲ್ಲವ ಸೇವಾ ಸಮಾಜ (ರಿ) ಕೊಲ್ಯ ದ ಮಾಜಿ ಅಧ್ಯಕ್ಷರುಗಳು ನೂತನ ಪದಾಧಿಕಾರಿಗಳಿಗೆ ಮತ್ತು ನಿರ್ಗಮನ ಅಧ್ಯಕ್ಷರಿಗೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಕೆ.ಪಿ.ಟಿ ಮಂಗಳೂರಿನ ಶೋಭಾ ಲಿಂಗಪ್ಪ ಪೂಜಾರಿ,ನವೀನ್ ಕನೀರುತೋಟಗುಡ್ಡೆ,ಮತ್ತು ಗೌರವ ಉಪಸ್ಥಿತಿಯಾಗಿ ಬಿಲ್ಲವ ಸೇವಾ ಸಮಾಜ (ರಿ) ಕೊಲ್ಯದ ಅಧ್ಯಕ್ಷರಾದ ಆನಂದ್ ಎಸ್ ಕೊಂಡಾಣರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಘಟಕದ ಗಾಯಕ ಸದಸ್ಯರ ಇಂಪಾದ ಹಾಡುಗಳು ವಿಶೇಷ ಮೆರುಗನ್ನು ನೀಡಿತು. ಯುವವಾಹಿನಿ (ರಿ) ಕೊಲ್ಯ ಘಟಕದ ಕಾರ್ಯದರ್ಶಿಯವರಾದ ಲತೀಶ್ ಪಾಪುದಡಿ ಯವರು 2018 – 19 ನೇ ಸಾಲಿನ ವಾರ್ಷಿಕ ವರದಿಯನ್ನು ವಾಚಿಸಿದರು ಯುವವಾಹಿನಿ (ರಿ) ಕೊಲ್ಯಘಟಕದ ಸದಸ್ಯರಾದ ಸೌಮ್ಯ ಕುಸುಮಾಕರ್, ಸೌಮ್ಯ ಯೋಗೀಶ್ ಮತ್ತು ರಶ್ಮಿತಾ ರವರು ಪ್ರಾರ್ಥನೆಯನ್ನು ನೆರವೇರಿಸಿದರು.ಘಟಕದ ಪ್ರಚಾರ ನಿರ್ದೇಶಕರಾದ ಲತೀಶ್ ಎಂ ಸಂಕೋಳಿಗೆಯವರು ಪ್ರಸ್ತಾವನೆಗೈದರು,ಮಹಿಳಾ ಸಂಘಟನಾ ನಿರ್ದೇಶಕರಾದ ಸುಧಾ ಸುರೇಶ್ ರವರು ಕಾರ್ಯಕ್ರಮಕ್ಕೆ ಆಗಮಿಸಿದ ವಿವಿಧ ಘಟಕಗಳ ಸದಸ್ಯರನ್ನು ಮತ್ತು ಮುಖ್ಯ ಸಮಾಜ ಭಾಂಧವರನ್ನು ಗುರುತಿಸಿದರು, ನಿಯೋಜಿತ ಕಾರ್ಯದರ್ಶಿಯವರಾದ ಆನಂದ್ ಅಮೀನ್ ಸೋಮೇಶ್ವರರವರು ಧನ್ಯವಾದ ಸಮರ್ಪಿಸಿದರು ಮತ್ತು ಸ್ಥಾಪಕ ಅಧ್ಯಕ್ಷರಾದ ಸುರೇಶ್ ಬಿ ಮತ್ತು ಪ್ರಚಾರ ನಿರ್ದೇಶಕರಾದ ಲತೀಶ್ ಎಂ ಸಂಕೋಳಿಗೆಯವರು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!