ಮೂಲ್ಕಿ: ಮಹಿಳೆಯರು ಸುಶಿಕ್ಷಿತರಾಗಿ ಸಂಘ ಜೀವಿಯಾಗಿ ಸ್ವಾಭಿಮಾನದಿಂದ ನಾಯಕತ್ವದ ಗುಣಗಳನ್ನು ಪಡೆದು ಬೆಳೆದರೆ ಸಮಾಜ ಅಭಿವೃದ್ಧಿಗೊಳ್ಳಲು ಸಾಧ್ಯವಿದೆ ಸ್ವಾಭಿಮಾನದ ನಡೆಗೆ ವೇದಿಕೆಯನ್ನು ಕಲ್ಪಿಸಿರಿ ಎಂದು ಮಂಗಳೂರಿನ ಯುವವಾಹಿನಿ ಕೇಂದ್ರ ಸಮಿತಿಯ ಮಹಿಳಾ ಸಂಘಟನಾ ನಿರ್ದೇಶಕಿ ಪಾರ್ವತಿ ಎಸ್. ಅಮೀನ್ ಹೇಳಿದರು.
ಅವರು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಶನಿವಾರ ನಡೆದ ಯುವವಾಹಿನಿ ಮೂಲ್ಕಿ ಘಟಕದ ಆಶ್ರಯದಲ್ಲಿ ವಿವಿಧ ಮಹಿಳಾ ಸಂಘಗಳ ಸಹಕಾರದಲ್ಲಿ ಮಹಿಳಾ ದಿನಾಚರಣೆಯ ಪ್ರಯುಕ್ತ ಭೂಮಿಕಾ ೨೦೧೯ ಉದ್ಘಾಟಿಸಿ ಮಾತನಾಡಿದರು.
ಯುವವಾಹಿನಿ ಮೂಲ್ಕಿ ಘಟಕದ ಅಧ್ಯಕ್ಷೆ ಕುಶಲ ಎಸ್.ಕುಕ್ಯಾನ್ ಅಧ್ಯಕ್ಷತೆಯನ್ನು ವಹಿಸಿ, ಸ್ವಾಗತಿಸಿದರು.
ಹಿರಿಯ ಸಾಧಕರಾದ ಸರೋಜಿನಿ ಸುವರ್ಣ ಮೂಲ್ಕಿ ಹಾಗೂ ಶಾಂಭವಿ ಶೆಟ್ಟಿ ನಿಡ್ಡೋಡಿ ಅವರ ಜೀವನಗಾಥೆಯ ಕಿರು ಚಿತ್ರಣವನ್ನು ಅನಾವರಗೊಳಿಸಲಾಯಿತು. ಸುರತ್ಕಲ್ ಯುವವಾಹಿನಿ ಘಟಕದ ಅಧ್ಯಕ್ಷ ಗುಣವತಿ ರಮೇಶ್ ಸಮನ್ವಯಕಾರರಾಗಿದ್ದರು.
ಮಂಗಳೂರಿನ ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಂಗನವಾಡಿ ಕೇಂದ್ರದ ಮೇಲ್ವಿಚಾರಕಿ ಅಶ್ವಿನಿ ಅವರು ಮಹಿಳೆಯ ಮತ್ತು ಶಿಕ್ಷಣ ಎಂಬ ವಿಷಯದಲ್ಲಿ ವಿಷಯವನ್ನು ಮಂಡಿಸಿದರು.
ಸಾಧಕರ ನೆಲೆಯಲ್ಲಿ ಮೂಲ್ಕಿ ಶ್ರೀ ನಾರಾಯಣಗುರು ಆಸ್ಪತ್ರೆಯ ಡಾ.ವಂದನಾ ಕೆ.ಎಂ. ಮತ್ತು ಸಾಮಾಜಿಕ ಕಾರ್ಯಕರ್ತೆ ನಂದಾ ಪಾಯಸ್ ಅವರನ್ನು ಸನ್ಮಾನಿಸಲಾಯಿತು. ಮೂಲ್ಕಿ ಪಂಜಿನಡ್ಕ-ಕಕ್ವ ನಿವಾಸಿ ಸಂಧ್ಯಾ ಅವರ ವಿವಾಹಕ್ಕೆ ವಿಶೇಷವಾದ ಧನಸಹಾಯವನ್ನು ರಕ್ಷಿತಾ ಯೋಗೀಶ್ ಕೋಟ್ಯಾನ್ ಚಿತ್ರಾಪು ವಿತರಿಸಿದರು.
ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಿನಾಥ ಪಡಂಗ, ಮಂಗಳುರು ಯುವವಾಹಿನಿ ಕೇಂದ್ರದ ಅಧ್ಯಕ್ಷ ಜಯಂತ್ ನಡುಬೈಲು, ನಿರ್ದೇಶಕರಾದ ಸುನಿತಾ ದಾಮೋದರ್ ಉಪಸ್ಥಿತರಿದ್ದರು. ಸಮಾಜ ಸೇವಾ ನಿರ್ದೇಶಕಿ ಜ್ಯೋತಿ ರಾಮಚಂದ್ರ ಹಾಗೂ ಉಪಾಧ್ಯಕ್ಷೆ ರಾಜೀವಿ ವಿಶ್ವನಾಥ್ ಪರಿಚಯಿಸಿದರು. ಯುವವಾಹಿನಿ ಮೂಲ್ಕಿ ಘಟಕದ ಕಾರ್ಯದರ್ಶಿ ಚರಿಷ್ಮಾ ಶ್ರೀನಿವಾಸ್ ಕಾರ್ಯದರ್ಶಿ ವಂದಿಸಿದರು. ಮಾಜಿ ಅಧ್ಯಕ್ಷೆ ರಕ್ಷಿತಾ ಯೋಗೀಶ್ ಕೋಟ್ಯಾನ್ ಹಾಗೂ ಜಾಹ್ನವಿ ಮೋಹನ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.