ಬೆಳ್ತಂಗಡಿ :ತಳ ಮಟ್ಟದಲ್ಲಿ ಇರುವ ಯುವ ಸಮುದಾಯವನ್ನು ಮೇಲೆತ್ತುವ ಕೆಲಸವಾಗಬೇಕು ಎಂದು ಯುವವಾಹಿನಿ(ರಿ) ಬೆಳ್ತಂಗಡಿ ಘಟಕದ ಸಲಹೆಗಾರರು ರಮಾನಂದ ಸಾಲಿಯನ್ ಮೂಂಡುರು ಹೇಳಿದರು.
ಅವರು ಮಾ.08 ರಂದು ಸುವರ್ಣ ಆರ್ಕೇಡ್ ನಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ(ರಿ.) ಬೆಳ್ತಂಗಡಿ ಘಟಕದ ನೂತನ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ನಡೆದ ಸ್ಪೂರ್ತಿ…. ಇದು ಯುವವಾಹಿನಿಯ ಮಾರ್ಗದರ್ಶಿಯೆಡೆಗೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.ಘಟಕವು ಬೆಳ್ತಂಗಡಿಯಲ್ಲಿ ನೋಂದವರ ಪರವಾಗಿ ಹಾಗೂ ಅಶಕ್ತರಿಗೆ ಸಂಜೀವಿನಿಯಾಗಿ ಕೆಲಸ ಮಾಡುತ್ತಿದ್ದು ಹೋರಾಟದ ಮೂಲಕ ಕಳೆದ 5 ವರ್ಷಗಳಿಂದ ಉತ್ತಮ ಸೇವೆಯೊಂದಿಗೆ ಮುನ್ನಡೆಯುತ್ತಿದೆ ಎಂದರು
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ನರೇಶ್ ಕುಮಾರ್ ಸಸಿಹಿತ್ಲು ಮಾತನಾಡಿ ಯುವವಾಹಿನಿ ಬೆಳೆದು ಬಂದ ದಾರಿ ಯುವವಾಹಿನಿಯ ಮಾರ್ಗದರ್ಶಿಯ ಬಗ್ಗೆ ನಿಯಮಗಳು ಶಿಸ್ತು ಹಾಗೂ ಸಮಯ ಪಾಲನೆಗೆ ಕೊಡುತ್ತಿರುವ ಮಹತ್ವ ಘಟಕದ ಪದಾಧಿಕಾರಿಗಳ ಜವಾಬ್ದಾರಿಯ ಬಗ್ಗೆ ಮಾಹಿತಿ ಹಾಗೂ ಮಾರ್ಗದರ್ಶನ ನೀಡಿದರು. ಘಟಕದ ಎಲ್ಲಾ ನಿರ್ದೇಶಕರು ಸದಸ್ಯರು ಸಲಹೆಗಾರರು ಹಾಜರಿದ್ದರು
ಸಮಾರಂಭದ ಅಧ್ಯಕ್ಷತೆಯನ್ನು ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಹರೀಶ್ ಸುವರ್ಣ ಕನ್ಯಾಡಿ ವಹಿಸಿದ್ದರು.ಸಲಹೆಗಾರದ ರಘುನಾಥ್ ಶಾಂತಿ ಪ್ರಾರ್ಥಿಸಿ ವ್ಯಕ್ತಿತ್ವ ವಿಕಸನ ನಿರ್ದೇಶಕ ಪ್ರದೀಪ್ ಮಚ್ಚಿನ ಸ್ವಾಗತಿಸಿದರು ಪ್ರಜ್ಞಾ ಒಡಿಲ್ನಾಳ ಕಾರ್ಯಕ್ರಮ ನಿರೂಪಿಸಿದರು ಕಾರ್ಯದರ್ಶಿ ವಿಜಯ್ ಕುಮಾರ್ ಶಿರ್ಲಾಲು ವಂದಿಸಿದರು
An ideal program. Congratulations