ವಿಶುಕುಮಾರ್ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ

ವಿಶುಕುಮಾರ್ ಒಡನಾಡಿಗಳೊಂದಿಗೆ ಸಂವಾದ-ಆದಿನಗಳು

ಮಂಗಳೂರು : ಸಾಯೋದಕ್ಕಿಂತ ಸತ್ತು ಬದುಕಬೇನ್ನುವ ಮಾತಿದೆ. ಇದಕ್ಕೊಪ್ಪುವಂತೆ ನಮ್ಮನಗಲಿದ ವಿಶ್ವನಾಥ್ ಯಾನೆ ವಿಶುಕುಮಾರರು ಸತ್ತು ಬದುಕಿದವರು. ಅದೆಷ್ಟೋ ಸಾಧನೆಗಳನ್ನು ನೋಡಿದ್ದೇವೆ. ಕೇವಲ ಪ್ರಶಸ್ತಿ ಪತ್ರ, ಸ್ಮರಣಿಕೆ, ಪಾರಿತೋಷಕಗಳಿಂದ ಕೆಲವರನ್ನು ಗುರುತಿಸಬಹುದು. ಆದರೆ ಬದುಕಿದ ದಾರಿ, ಸವೆಸಿದ ಸಮಯ, ತೋರಿದ ತಾಳ್ಮೆ ಇನ್ನೊರ್ವರಿಗೆ ಆದರ್ಶವಾಗುತ್ತೆ ಎಂದಾದರೆ ಆ ಬದುಕು, ಆದರ್ಶ, ದೇವರಿಗೆ ಸಮ ಅನ್ನೋದು ಸತ್ಯ. ಪ್ರತಿಯೊಂದು ಕ್ಷೇತ್ರದಲ್ಲೂ ಸಮರ್ಥವಾಗಿ ತನ್ನನ್ನು ತೊಡಗಿಸಿಕೊಂಡು, ಸರಳತೆ, ತಾಳ್ಮೆ, ಸಹನೆ, ಶಿಸ್ತು, ಸಮಯಕ್ಕೆ ಉದಾಹರಣೆಯಾಗಿ ಸತ್ತು ಬದುಕಿದ ವಿಶುಕುಮಾರ್‌ರವರದ್ದು ಆದರ್ಶನೀಯ ಬದುಕು. ಈ ಶಿಸ್ತಿನ ಸಿಪಾಯಿ, ತುಳುನಾಡ ಮಾಣಿಕ್ಯ ಸಂಸ್ಮರಣೆಯಾಗಿ ದಿನಾಂಕ 17.02.2019 ರಂದು ಯುವವಾಹಿನಿ ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಯುವವಾಹಿನಿ ಸಸಿಹಿತ್ಲು ಘಟಕದ ಆತಿಥ್ಯದಲ್ಲಿ ಮಂಗಳೂರು ಪುರಭವನದಲ್ಲಿ ನಡೆದ ವಿಶುಕುಮಾರ್ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಶುಕುಮಾರ್‌ರವರ ಬದುಕನ್ನು ಸಮಾಜಕ್ಕೆ ತಿಳಿಯಪಡಿಸುವ ಉದ್ದೇಶದಿಂದ “ವಿಶುಕುಮಾರ್ ಒಡನಾಡಿಗಳೊಂದಿಗೆ ಸಂವಾದ-ಆದಿನಗಳು” ಎಂಬ ಸಂವಾದದಲ್ಲಿ ವಿಶುಕುಮಾರ್‌ರವರ ಒಡನಾಡಿ ಮಾದವ ಕುಲಾಲ್, ಪರ್ತಕರ್ತರು ಹಾಗೂ ಬರಹಗಾರ ಮಿತ್ರರಾದ ರವಿರಾಜ್ ಅಜ್ರಿ, ರಂಗ ಒಡನಾಡಿ ವಿಠಲ ಭಂಡಾರಿ ಹರೇಕಳ ಹಾಗೂ ವಿಶುಕುಮಾರ್ ರವರ ಧರ್ಮಪತ್ನಿ ವಿಜಯಲಕ್ಷ್ಮಿ ಉಪಸ್ಥಿರಿದ್ದು ಸಂವಾದವನ್ನು ಅರ್ಥಪೂರ್ಣವಾಗಿ ರೂಪಿಸಿದರು. ಒಂದು ಸಣ್ಣ ಟೀ ತರುವ ಹುಡುಗನ ದಿನಂಪ್ರತಿ ನಡವಳಿಕೆಯಲ್ಲಿ ಕಲೆಯನ್ನು ಗುರುತಿಸಿ, ಹುಡುಗನನ್ನು ತನ್ನ ನಾಟಕದಲ್ಲಿ ಖಾಯಂ ಕಲಾವಿದನನ್ನಾಗಿ ಮಾಡಿದ ಕೀರ್ತಿ ವಿಶುಕುಮಾರ್ ಅವರದ್ದು. ಇಂದು ಅದೇ ಹುಡುಗ ಆಗಿದ್ದ ನಾನಿಂದು ಅವರ ಬಗ್ಗೆ ಮಾತಾಡುವಂತಹ ದಿನ ಬರುತ್ತೆ ಅಂತ ತಿಳ್ಕೊಂಡಿರಲಿಲ್ಲವೆಂದು ಗದ್ಗದಿತರಾಗಿ ಕುಲಾಲ್‌ರು ಹೇಳಿಕೊಂಡಾಗ ಒಮ್ಮೆಗೆ ಅವರ ಆ ದಿನಗಳು ಕಲ್ಪನಾಯುಕ್ತವಾಗಿ ನಮ್ಮ ಎದುರು ಬಂದದ್ದು ಸುಳ್ಳಲ್ಲ. ಬರಹದಲ್ಲಿ ಧೃಡತೆಯಿದ್ದು ಅದನ್ನು ವ್ಯಕ್ತಪಡಿಸುವಲ್ಲಿ ಅಜ್ರಿಯವರು ಸೋತರೂ ತನ್ನ ಬ್ಲಾಗ್‌ಗಳಲ್ಲಿ ವಿಶುಕುಮಾರ್ ಅವರನ್ನು ಪೂರ್ಣವಾಗಿ ಬಿಂಬಿಸಿ, ಪ್ರತಿಷ್ಟಾಪಿಸಿದ್ದರೂ, ವಿಶುಕುಮಾರ್‌ರವರ ಕೊನೆಯ ದಿನಗಳ ಭಾವಚಿತ್ರ ತನಗೆ ಸಿಕ್ಕಿಲ್ಲವೆಂಬ ನೋವನ್ನು ವ್ಯಕ್ತಪಡಿಸಿದರು. ಪ್ರೀತಿಸಿ, ಗೋಗರೆದು ವಿಶುಕುಮಾರ್‌ರವರನ್ನು ಮದುವೆಯಾದ ವಿಜಯಲಕ್ಷ್ಮಿ ಯವರು ಅವರ ತಾಳ್ಮೆ, ಸಹನೆ ಶಿಸ್ತು ಗಾಂಭೀರ್ಯದ ಬಗ್ಗೆ ಮಾತನಾಡಿ, ಮದುವೆಯಾಗಿ ವರುಷದಲ್ಲೆ ಮಾರಕ ಅನಾರೋಗ್ಯದಿಂದಾಗಿ ಹಾಸಿಗೆ ಹಿಡಿದು 89 ಇದ್ದ ತೂಕ 29 ರವರೆಗೆ ತಲುಪಿದ ಬಗ್ಗೆ ಬಿಸಿಯುಸಿರ ನಡುವೆ ಹೇಳಿಕೊಂಡಾಗ ಅಲ್ಲಿ ಇದ್ದಂತಹ ನೋಡುಗರ ಕೇಳುಗರ ಕಣ್ಣು ತುಂಬಿ ಬಂದಿರೋದು ಸತ್ಯ. ಅದಕ್ಕಾಗಿಯೇ ಅವರ ಕೊನೆ ಗಳಿಗೆಯ ಭಾವಚಿತ್ರ ನಾನು ಅಜ್ರಿಯವರಿಗೆ ಕೊಟ್ಟಿರಲಿಲ್ಲ ಎಂಬುದನ್ನು ವಿಜಯಲಕ್ಷ್ಮಿ ಸಮರ್ಥಿಸಿಕೊಂಡರು. ಸಾವಿನ ಕೊನೆಗಳಿಗೆಯಲ್ಲಿ “ದೇವ ನನ್ನ ಗಂಡನನ್ನು ಜೀವಂತ ಶವವಾದರೂ ಸಾಕು ಕೊಟ್ಟು ಬಿಡು” ಎಂದು ದೇವರಲ್ಲಿ ಕೇಳಿಕೊಂಡಿದ್ದೆ . ಆದರೆ ಕೊಡಲಿಲ್ಲ. ರಾಜನಂತಿದ್ದ ತನ್ನ ಮನೆಯೊಳಗೆ ಕಾಯ ಸೇರಿದ ವಿಶುಕುಮಾರ್‌ರವರ ಪಾರ್ಥಿವ ಶರೀರಕ್ಕೆ ಪ್ರವೇಶವಿಲ್ಲವೆಂದಾಗ ಎಲ್ಲರನ್ನು ಎದುರಿಸಿ ಮನೆಯೊಳಗೆ ಸೇರಿಸಿದ್ದೆ. ಅಲ್ಲಿ ಇನ್ನೇನು ನನ್ನ ದೇಹ ಕುಸಿಯುತ್ತಿದೆ ಅನ್ನುವಷ್ಟರಲ್ಲಿ ಇವರ ಕಾಲ ಬುಡದಲ್ಲಿ ಮಗ ಶ್ರವಣ ಕಂಡ. ಮತ್ತೆ ಅವನಿಗೋಸ್ಕರ ಬದುಕಬೇಕೆನಿಸಿತು” ಅಂದಾಗ ಸಂವಾದದಲ್ಲಿರುವ ಎಲ್ಲರ ಮನಸ್ಸುಗಳು ಭಾರವಾಯಿತು. ವಿಜಯಲಕ್ಷ್ಮಿ ಯವರಿಗೆ “ತಾಯಿ ನೀನು ಸದಾ ಸುಖಿಯಾಗಿರು” ಅಂತ ಅದೇಷ್ಟೋ ಹೃದಯಗಳು ಹಾರೈಸಿರಬಹುದು. ಹಾಗೆ ಹರೇಕಳ ಅವರು ಸಂವಾದದ ವಿಷಯವನ್ನು ಮುಟ್ಟದಿರುವುದು ಖೇಧವಾದರೂ ಅದನ್ನು ಸಮದೂಗಿಸಿಕೊಂಡವರು ಕಾರ್ಯಕ್ರಮದ ಸಮನ್ವಯಕಾರರಾದ ಮುದ್ದು ಮೂಡುಬೆಳ್ಳೆ. ವಿಶುಕುಮಾರ್ ಒಬ್ಬ ವ್ಯಕ್ತಿಯಲ್ಲ ಅವರೊಂದು ಶಕ್ತಿ. ಇವರ ಒಡನಾಡಿಗಳು ಅನೇಕರಿರಬಹುದು. ಆದರೂ ನಮಗೆ ನೇರವಾಗಿ ಕಂಡಂತಹ ಕೆಲವರನ್ನಾದರೂ ಈ ಕಾರ್ಯಕ್ರಮದಲ್ಲಿರುವ ಒಟ್ಟುಗೂಡಿಸುವ ಪ್ರಯತ್ನ ಮಾಡಿದ ಹೆಮ್ಮೆಯಿದೆ. ವಿಶುಕುಮಾರ್‌ರವರ ಕೆಲವು ಸಾಹಿತ್ಯ ಮಾತ್ರ ನಮಗೆ ದೊರೆತಿದೆ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಸಂಪಾದಿಸುವ ಕೆಲಸ ನಮ್ಮಿಂದಾಗಲಿ ಅನ್ನೋ ಆಶಯದೊಂದಿಗೆ ಮಾತನ್ನು ಮುಂದುವರಿಸಲು ಕಾರ್ಯಕ್ರಮದ ಅಧ್ಯಕ್ಷ ಸ್ಥಾನದಲ್ಲಿದ್ದ ಪ್ರಭಾಕರ ನೀರುಮಾರ್ಗರಿಗೆ ಅನುವು ಮಾಡಿಕೊಟ್ಟರು. ಸಾಹಿತ್ಯ, ಯಕ್ಷಗಾನ, ಸಿನೆಮಾ, ನಾಟಕ, ರಂಗನಿರ್ದೇಶನದ ಒಟ್ಟು ಮಾಹಿತಿಯನ್ನು ಸಮಯದ ಕೊರತೆಯಿಂದಾಗಿ ಸೂಕ್ಷ್ಮವಾಗಿ ಹಾಗೂ ಕಲಾ ಗಾಂಭೀರ್ಯತೆಯ ಒಟ್ಟು ಸಾರಂಶವನ್ನು ನಮ್ಮ ಪ್ರಭಾಕರ ನೀರುಮಾರ್ಗರು ಕಾರ್ಯಕ್ರಮದ ಮುಂದಿಟ್ಟರು. ಸಂದರ್ಭಕ್ಕೆ ತಕ್ಕಂತೆ ಪ್ರಮೀಳಾ ದೀಪಕ್ ಪೆರ್ಮುದೆ ಈ ಸಂವಾದ ಕಾರ್ಯಕ್ರಮ ನಿರೂಪಿಸಿದರು.

ವರದಿ : ಪ್ರಮೀಳಾ ದೀಪಕ್ ಪೆರ್ಮುದೆ

Leave a Reply

Your email address will not be published. Required fields are marked *

ಸಂಪರ್ಕಿಸಿ : +91 99644 75220
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ :
ಸ್ಥಳ :

ಯುವವಾಹಿನಿ(ರಿ.) ಕುಪ್ಪೆಪದವು ಘಟಕ

ದಿನಾಂಕ : 18-08-2024
ಸ್ಥಳ : ಕುದ್ರೋಳಿ ಗೋಕರ್ಣನಾಥ ಕ್ಷೇತ್ರ

ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ ಹಾಗೂ ಕೇಂದ್ರ ಸಮಿತಿ, ಮಂಗಳೂರು.

ಆರ್ಥಿಕತೆಯ ಸಂಕಷ್ಟದ ವಿದ್ಯಾರ್ಥಿಗಳಿಗೆ ಯುವವಾಹಿನಿಯ ವಿದ್ಯಾನಿಧಿ ಸಂಜೀವಿನಿಯಾಗಿದೆ : ಪದ್ಮನಾಭ ಮಾಣಿಂಜ

ಮಂಗಳೂರು:- ವಿದ್ಯೆ ನಮ್ಮನ್ನು ಯಾರ ಮತ್ತು ಯಾವುದರ ಹಂಗೂ ಇಲ್ಲದೆ ಅಸಹಾಯಕತೆ ಎನ್ನುವ ಪದವೇ ಇಲ್ಲದೆ ನಮ್ಮನ್ನು ನಾವು ಬೆಳೆಸಿಕೊಳ್ಳಬೇಕು. ಅದಕ್ಕೆ ಬಡತನ, ಆರ್ಥಿಕತೆ, ಯಾವುದೂ ಅಡ್ಡಿ ಬರಬಾರದು. ನನಗೂ ಸಹಾಯ ಮಾಡುವವರಿದ್ದರೆ ನಾನೂ ಕಲಿಯುತ್ತಿದ್ದೆ ಎನ್ನುವ ವಿದ್ಯಾರ್ಥಿ ಸಮೂಹಕ್ಕೆ ಯುವವಾಹಿನಿಯ...

Tuesday, 13-12-2022
ಯುವವಾಹಿನಿ ಸಂಸ್ಥೆಯ ಮೂವತೈದು ವರುಷಗಳ ಸಾಧನೆಯನ್ನು ಗುರುತಿಸಿ ರಾಜ್ಯ ಸರಕಾರದ ಗೌರವ

ಯುವವಾಹಿನಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಗರಿ

  ಮಂಗಳೂರು : ಯುವವಾಹಿನಿ ಸಂಸ್ಥೆಯ 35 ವರುಷಗಳ ಸಾಮಾಜಿಕ ಶೈಕ್ಷಣಿಕ, ಕ್ರೀಡಾ, ಸಾಂಸ್ಕೃತಿಕ ಮತ್ತು ಆರೋಗ್ಯ ಕ್ಷೇತ್ರದ ಸಾಧನೆಯನ್ನು ಗುರುತಿಸಿ ದಕ್ಷಿಣ ಕನ್ನಡ ಜಿಲ್ಲಾಡಳಿತವು ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಬೆಂಗಳೂರಿನಲ್ಲಿ ನವೆಂಬರ್ ಒಂದರಂದು ನಡೆಯುವ...

Sunday, 30-10-2022
error: Content is protected !!