ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಬ್ರಹ್ಮ ಕಲಶೋತ್ಸವದ ಅಂಗವಾಗಿ ಜರಗಿದ ಬೃಹತ್ ಹೊರೆಕಾಣಿಕೆ ಮೆರವಣಿಗೆಯಲ್ಲಿ ಯುವವಾಹಿನಿ ಕೇಂದ್ರ ಸಮಿತಿಯು ತನ್ನ ವಿವಿಧ ಘಟಕಗಳನ್ನು ಸಂಘಟಿಸಿ ಒಟ್ಟು 23 ಘಟಕಗಳ ಹೊರೆಕಾಣಿಕೆ ಸೇವೆಯ ಜೊತೆ ಆಕರ್ಷಕ ನಾರಾಯಣ ಗುರುಗಳ ಟ್ಯಾಬ್ಲೋ ಮೂಲಕ ಮೆರವಣಿಗೆಯಲ್ಲಿ ಭಾಗವಹಿಸಿತು. ಮೆರವಣಿಗೆಯು ಶಿಸ್ತುಬದ್ಧವಾಗಿ ಯಶಸ್ವಿಯಾಗಿ ಮೂಡಿ ಬರಲು ಯುವವಾಹಿನಿಯ ನೂರಾರು ಕಾರ್ಯಕರ್ತರು ಸಮಾಜ ಭಾಂಧವರ ಜೊತೆ ಸೇರಿಕೊಂಡು ಐತಿಹಾಸಿಕ ಮೆರವಣಿಗೆಯ ಯಶಸ್ವಿ ಗೆ ಕಾರಣಕರ್ತರಾದರು. ಈ ಸಂದರ್ಭದಲ್ಲಿ ಯುವವಾಹಿನಿಯ ಸದಸ್ಯರಲ್ಲಿ ಶ್ರೀ ಕ್ಷೇತ್ರದ ಗರ್ಭಗುಡಿಗೆ ತಾಮ್ರದ ಹೊದಿಕೆಗೆ ತಾಮ್ರ ವನ್ನು ಹಣದ ರೂಪದಲ್ಲಿ ಸ್ವಯಂ ಪ್ರೇರಿತರಾಗಿ ನೀಡಬೇಕು ಎಂದು ಕೇಂದ್ರ ಸಮಿತಿಯ ಅಧ್ಯಕ್ಷರಾದ ಜಯಂತ್ ನಡುಬೈಲ್ ಕೇಳಿಕೊಂಡಾಗ ಸದಸ್ಯರು ಸ್ವ ಇಚ್ಛೆಯಿಂದ ನೀಡಿದ ಒಟ್ಟು ರೂಪಾಯಿ 125000-00 ನ್ನು ಕ್ಷೇತ್ರಕ್ಕೆ ಸಲ್ಲಿಸಲು ಸಂಗ್ರಹಿಸಲಾಯಿತು. ಬಿಲ್ಲವ ಸಮಾಜಕ್ಕೆ ಸ್ವಾಭಿಮಾನ ಮತ್ತು ಆತ್ಮಗೌರವವನ್ನು ನೀಡಿ ಅರಿವಿನ ಬೆಳಕಿನ ಸಾಧನೆಗಾಗಿ ಶ್ರೀ ನಾರಾಯಣ ಗುರುಗಳು ಸ್ವತಃ ಪ್ರತಿಷ್ಠಾಪನೆ ಮಾಡಿದ ಶ್ರೀ ಕ್ಷೇತ್ರದ ಎಲ್ಲಾ ಚಟುವಟಿಕೆಗಳಲ್ಲಿ ಯುವವಾಹಿನಿಯ ಎಲ್ಲಾ ಘಟಕಗಳು ಭಾಗವಹಿಸುತ್ತಿರುವುದು ನಮಗೆಲ್ಲ ಹೆಮ್ಮೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಜಯಂತ್ ನಡುಬೈಲ್ ಎಲ್ಲಾ ಘಟಕ ಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶ್ರೀ ಕ್ಷೇತ್ರದ ಹೊರೆಕಾಣಿಕೆ ಮತ್ತು ಬ್ರಹ್ಮ ಕಲಶೋತ್ಸವ ಕಾರ್ಯ ಕ್ರಮದಲ್ಲಿ ಸೇವೆಯಲ್ಲಿ ತೊಡಗಿಸಿಕೊಂಡ ಎಲ್ಲಾ ಘಟಕಗಳಗೆ ಧನ್ಯವಾದ ಅರ್ಪಿಸಿ ಸೇವೆಯಲ್ಲಿ ತೊಡಗಿಕೊಳ್ಳುವಲ್ಲಿ ಸಂಘಟನಾತ್ಮಕ ಕೆಲಸ ಮಾಡಿದ ಕೇಂದ್ರ ಸಮಿತಿಯ ಪ್ರಚಾರ ನಿರ್ದೇಶಕರಾದ ಹರೀಶ್ ಕೆ ಪೂಜಾರಿಯವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.