ವೇಣೂರು :ಯುವವಾಹಿನಿ(ರಿ) ವೇಣೂರು ಘಟಕದ ಆಶ್ರಯದಲ್ಲಿ ಮತ್ತು ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ದಿನಾಂಕ 20/1/2019ನೇ ಆದಿತ್ಯವಾರ ವೇಣೂರಿನ ಪಲ್ಗುಣಿ ನದಿಗೆ ಪಾರಂಪರಿಕ ಕಟ್ಟ ಹಾಕುವ ಮೂಲಕ ನದಿ ಮಟ್ಟ ಏರಿಕೆಗೆ ಶ್ರಮದಾನ ಮತ್ತು ಜಲ ಸಾಕ್ಷರತೆ ಅರಿವು ಕಾರ್ಯಕ್ರಮವು ವೇಣೂರಿನ ಕೈತೇರಿ ಎಂಬಲ್ಲಿ ನಡೆಯಿತು . ಉಪವಿಭಾಗಾಧಿಕಾರಿ ಡಾ.ಹೆಚ್.ಕೆ.ಕೃಷ್ಣ ಮೂರ್ತಿಯವರು ಚಾಲನೆ ನೀಡುವುದರೊಂದಿಗೆ ದಿನವಿಡೀ ನಡೆದ ಶ್ರಮದಾನದಲ್ಲಿ ವೇಣೂರು ಯುವವಾಹಿನಿ ಘಟಕದ ಅಧ್ಯಕ್ಷರಾದ ನಿತೀಶ್ ಹೆಚ್. ಜಿಲ್ಲಾ ಪಂ.ಸದಸ್ಯರಾದ ಧರಣೇಂದ್ರ ಕುಮಾರ್,ಶೇಖರ್ ಕುಕ್ಕೇಡಿ,ಪತ್ರಕರ್ತ ಪದ್ಮನಾಭ ಕುಲಾಲ್, ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ರಾಕೇಶ್ ಮೂಡುಕೋಡಿ,ಯು.ಕೇ.ಸಮಿತಿ ನಾಮನಿರ್ದೇಶನ ಸದಸ್ಯ ಯೋಗೀಶ್ ಬಿಕ್ರೊಟ್ಟು, ಘಟಕದ ನಿಯೋಜಿತ ಅಧ್ಯಕ್ಷ ನವೀನ್ ಪಚ್ಚೇರಿ,ನಿ. ಕೋಶಾಧಿಕಾರಿ ಹರೀಶ್ ಪಿ.ಎಸ್,ಘಟಕದ ನಿರ್ದೇಶಕರಾದ ರಾಜೇಶ್ ಕೈತೇರಿ,ಜಯಂತ ಕೋಟ್ಯಾನ್ ಕುಕ್ಕೇಡಿ, ರಕ್ಷೀತ್ ಬಜಿರೆ,ಯು.ಸಂ. ಸ.ಪದಾಧಿಕಾರಿಗಳಾದ ಶೇಖರ ಪರದ್ಯಾರು, ಸತೀಶ್ ಕಜಿಪಟ್ಟ,ವಿಜಯ ಹೊಸಪಟ್ನ,ಸುಜೀತ್ ಮುದ್ದಾಡಿ,ರಂಜೀತ್ ಜಾರಿಗೆದಡಿ,ಸಂತೋಷ್ ಮಂಜಲೊಕ್ಕು,ಸತೀಶ ಆಂಚನ್ ಕೇಶವ ಬೊರ್ಡೆಲು ಸೇರಿದಂತೆ ಘಟಕದ ಹೆಚ್ಚಿನ ಸದಸ್ಯರು ಭಾಗವಹಿಸಿದ್ದರು.ಈ ಕಾರ್ಯಕ್ರಮದಲ್ಲಿ ಪೋಲೀಸ್ ಉಪನಿರೀಕ್ಷರು,ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರು,ಅರಣ್ಯ ಇಲಾಖೆಯ ರೇಂಜರ್,ಕಂದಾಯ ನಿರೀಕ್ಷರು, ಹೀಗೆ ಅನೇಕ ಇಲಾಖೆಗಳ ಅಧಿಕಾರಿಗಳು ಜಲ ಸಂರಕ್ಷಣೆಯ ಮಹತ್ವದ ಕಾರ್ಯದಲ್ಲಿ ಕೈಜೋಡಿಸಿದರು.