ಮಾಣಿ : ಯುವವಾಹಿನಿಯು ವಿದ್ಯೆ,ಉದ್ಯೋಗ ಮತ್ತು ಸಂಪರ್ಕ ಎಂಬ ಧ್ಯೇಯ ವಾಕ್ಯದೊಂದಿಗೆ ಚಿರಪರಿಚಿತವಾಗಿದೆ. ಈ ನೆಲೆಯಲ್ಲಿ ಆಸಕ್ತರಿಗೆ ಸಹಾಯ ಮಾಡಲು ಯುವವಾಹಿನಿ(ರಿ) ಮಾಣಿ ಘಟಕದ ವತಿಯಿಂದ ಕಳೆದ ಬಾರಿ ರೂಪುಗೊಂಡ ಯೋಜನೆಯೇ ಸ್ಪಂದನ. ಬರಿಮಾರು ಗ್ರಾಮದ ಮುಳ್ಳಿಬೈಲು ಬೆಟ್ಟು ಮನೆಯಲ್ಲಿ ವಾಸವಾಗಿರುವ ಗಣೇಶ ಮತ್ತು ರೂಪ ದಂಪತಿಗಳ ಒಂದೂವರೆ ವರ್ಷದ ಮಾಸ್ಟರ್ ಜೀವಿತ್ ಎಂಬ ಮಗುವಿಗೆ ಮಾತನಾಡಲು ಆಗದೆ,ತಲೆ ಎತ್ತಲು ಆಗದೆ,ನಡೆದಾಡಲು ಆಗದೆ, ದ್ರಷ್ಟಿ ಮಂದ ವಾದ ಕಾರಣ ವೈದ್ಯರ ಬಳಿ ಪರೀಕ್ಷೆ ಮಾಡಿಸಿದಾಗ ಮಗುವಿನ ಮೆದುಳಿಗೆ ಹೋಗುವ ಹಾಗೂ ಹೊರ ಬರುವ ನರ ಬ್ಲಾಕ್ ಆದ ಕಾರಣ ಎಂಜಿಯೋಗ್ರಾಫ್ ಮಾಡಿ ತಲೆ ಅಪರೇಶನ್ ಮಾಡಲು ಸುಮಾರು 4 ಲಕ್ಷ ರೂಪಾಯಿ ಖರ್ಚುವೆಚ್ಚ ತಗಲುತ್ತದೆ ಎಂಬ ವಿಷಯ ತಿಳಿದ ಕೂಡಲೇ ದಿನಾಂಕ 12.01.2019 ರಂದು ಯುವವಾಹಿನಿ(ರಿ.) ಮಾಣಿ ಘಟಕದ ವತಿಯಿಂದ 10,000/- ರೂಪಾಯಿ ಚೆಕ್ ಮತ್ತು ಅಧ್ಯಕ್ಷರು ತಮ್ಮ ವಯಕ್ತಿಕ ಅಲ್ಪ ಮೊತ್ತವನ್ನು ಗಣೇಶ್ ಅವರ ಮನೆಯಲ್ಲಿ ನೀಡಲಾಯಿತು.
ಈ ಸಂದರ್ಭದಲ್ಲಿ ಯುವವಾಹಿನಿ ಮಾಣಿ ಘಟಕದ ಅಧ್ಯಕ್ಷರು ಹರೀಶ್ ಪೂಜಾರಿ ಬಾಕಿಲ,ನಿ.ಪೂ ಅಧ್ಯಕ್ಷರು ರಾಜೇಶ್ ಬಾಬನಕಟ್ಟೆ,ಹಿರಿಯರಾದ ಮೋಹನ್ ದಾಸ್ ಸುವರ್ಣ, ಕಾರ್ಯದರ್ಶಿ ಸುಜಿತ್ ಅಂಚನ್,ಕೋಶಧಿಕಾರಿ ಶಿವರಾಜ್,ಸಮಾಜಸೇವ ನಿರ್ದೇಶಕರಾದ ದಯಾನಂದ ಕಾಪಿಕಾಡ್,ಕೇಶವ ಬರಿಮಾರ್ ಸೇರಿದಂತೆ ಇತರ ಸದಸ್ಯರು ಉಪಸ್ಥಿತರಿದ್ದರು.
Yuvavahini is always doing good work. May God bless all members.