ಮಂಗಳೂರು : ನಿರಂತರವಾಗಿ ಸ್ವಚ್ಚತಾ ಕಾರ್ಯ ನಡೆಸುವ ಯುವವಾಹಿನಿ ಕೂಳೂರು ಘಟಕವು ಈ ಬಾರಿ ಜೀವಜಲ ನೀಡುವ ನದಿಯನ್ನು ಸ್ವಚ್ಚ ಗೊಳಿಸುವ ಮೂಲಕ ಮಾದರಿಯಾಗಿದೆ ಎಂದು ಮಂಗಳೂರು ಉತ್ತರ ವಿಧಾನಸಭಾ ಶಾಸಕರಾದ ಭರತ್ ಶೆಟ್ಟಿ ತಿಳಿಸಿದರು.
ಅವರು ದಿನಾಂಕ 06.01.2019 ರಂದು ಯುವವಾಹಿನಿ ಕೂಳೂರು ಘಟಕದ ಆಶ್ರಯದಲ್ಲಿ ಜರುಗಿದ ಮಂಗಳೂರಿನ ಫಲ್ಗುಣಿ ನದಿಯ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಯುವವಾಹಿನಿ(ರಿ) ಕೂಳೂರು ಘಟಕದ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್, ಉಪಾಧ್ಯಕ್ಷರಾದ ಭಾಸ್ಕರ ಕೋಟ್ಯಾನ್ ,ಕಾರ್ಯದರ್ಶಿ ಪವಿತ್ರ ಅಂಚನ್, ಸಂಘಟನಾ ಕಾರ್ಯದರ್ಶಿ ಪವಿತ್ರ ಅಮೀನ್,ಘಟಕದ ಸಲಹೆಗಾರರಾದ ಯುವವಾಹಿನಿ (ರಿ) ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ನೇಮಿರಾಜ್, ಕೂಳೂರು ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಅಧ್ಯಕ್ಷರಾದ ಹರೀಶ್ ಅಮೀನ್, ನಿಕಟಪೂರ್ವ ಅಧ್ಯಕ್ಷರಾದ ಜಯಾನಂದ ಅಮೀನ್ ,ಭಾ.ಜ.ಪ ಪಂಜಿಮೊಗರು 12 ನೇ ವಾರ್ಡಿನ ಅಧ್ಯಕ್ಷರಾದ ಗಣೇಶ್ ಶೆಟ್ಟಿ , ಪ್ರಧಾನ ಕಾರ್ಯದರ್ಶಿ ವಿವೇಕ್ ಸುವರ್ಣ, ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಗುರುಚಂದ್ರ ಹೆಗ್ಡೆ, ರಿವರ್ ಫೆಸ್ಟಿವಲ್ ಕಮಿಟಿ ಸದಸ್ಯರಾದ ಯತೀಶ್ ಬೈಕಂಪಾಡಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು .
ಯುವವಾಹಿನಿ(ರಿ) ಕೂಳೂರು ಘಟಕವು ತಿಂಗಳಲ್ಲಿ ಒಂದು ದಿನ ಪರಿಸರ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಗುತ್ತಿದ್ದು ,ಈ ಬಾರಿ ವಿಶೇಷವಾಗಿ ಜಿಲ್ಲಾಡಳಿತ ಹಮ್ಮಿಕೊಂಡಿರುವ ‘ರಿವರ್ ಫೆಸ್ಟಿವಲ್’ ಗೆ ಸಂಪೂರ್ಣ ಸಹಕಾರ ನೀಡುತ್ತಾ , ಫಲ್ಗುಣಿ ನದಿಯ ಸ್ವಚ್ಛತೆಯ ಉದ್ದೇಶದಿಂದಾಗಿ 50ಕ್ಕಿಂತ ಹೆಚ್ಚಿನ ಘಟಕದ ಸದಸ್ಯರು ಸೇರಿ 4 ದೋಣಿಗಳಲ್ಲಿ ಸಾಗಿ ಫಲ್ಗುಣಿ ನದಿ ತೀರ ಹಾಗೂ ನದಿ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡರು. ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಹಿಂದುಳಿದ ಮೋರ್ಚಾ ಉಪಾಧ್ಯಕ್ಷ ನವೀನಚಂದ್ರ ಬಿ ಪೂಜಾರಿ ಇವರು ಈ ಸ್ವಚ್ಛತಾ ಕಾರ್ಯಕ್ಕೆ 4 ದೋಣಿಗಳನ್ನು ಒದಗಿಸಿಕೊಟ್ಟರು . ಯುವವಾಹಿನಿ ಕೂಳೂರು ಘಟಕದ ಕಾರ್ಯದರ್ಶಿ ಪವಿತ್ರ ಅಂಚನ್ ವಂದಿಸಿದರು.