Yuvavahini

MAR 08, 2017 11.00 AM IST

ಅಭಿಮತ - ನರೇಶ್ ಕುಮಾರ್ ಸಸಿಹಿತ್ಲು

ಹೆಣ್ಣು ಹೆತ್ತವರ ನೋವು ನೀಗಿದ ’ವಧುವರರ ಅನ್ವೇಷಣಾ ಸಮಾವೇಶ’ – ಅಭಿಮತ

ಹೆಣ್ಣು ನೋಡಲು ಗಂಡಿನ ಕಡೆಯವರು ಬರುತ್ತಾರೆ ಎಂದರೆ ಸಾಕು ಹೆಣ್ಣು ಹೆತ್ತವರಿಗೆ ಒಂದು ರೀತಿಯ ಆತಂಕ ಮತ್ತು ಸಂಭ್ರಮ. ಸೂರ್ಯ ಮೂಡುವ ಮುನ್ನವೆ ಎದ್ದು ಮನೆಯನ್ನು ಒಪ್ಪಓರಣ ಮಾಡಿಟ್ಟುಕೊಳ್ಳುತ್ತಾರೆ. ಎಲ್ಲವನ್ನೂ ಅಚ್ಚುಕಟ್ಟಾಗಿ ಸಿದ್ಧಪಡಿಸುತ್ತಾರೆ. ಶಿಸ್ತು, ರುಚಿಕಟ್ಟಾದ ಅಡುಗೆ, ಒಪ್ಪವಾಗಿರುವ ಮನೆ, ಅಲಂಕಾರ ಗೊಂಡಿರುವ ಹೆಣ್ಣುಮಗಳು ಸಂಭ್ರಮದ ಓಡಾಟ ಇದಕ್ಕೆಲ್ಲ ಕೊರತೆಯೇ ಕಂಡು ಬರುವುದಿಲ್ಲ. ಇದು ಒಂದು ಮನೆಯ ಕಥೆಯಾದರೆ ಇನ್ನು ಸಾಮೂಹಿಕ ವಧು-ವರಾನ್ವೇಷಣೆ ನಡೆಸಿದರೆ ಹೇಗಿರಬಹುದು? ಈ ಕಲ್ಪನೆಯೇ ಒಂದು ಅದ್ಭುತ ಅನಿಸುವುದಿಲ್ಲವೇ? ಏನೋ ಸಮ್‌ಥಿಂಗ್ ಸ್ಪೇಷಲ್ ಅಲ್ವೇ? ಹೌದು! ಈ ಅದ್ಬುತ ಕನಸಿಗೆ ಜೀವ ನೀಡುವ ಪ್ರಯತ್ನವೊಂದು ಸದ್ದಿಲ್ಲದೆ ನಡೆದಿದೆ. ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕ ಇಂತಹ ಒಂದು ಪ್ರಯತ್ನವನ್ನು ಅಚ್ಚುಕಟ್ಟಾಗಿ ನಡೆಸಿದೆ.

ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕ, ಯುವವಾಹಿನಿ (ರಿ) ಕೇಂದ್ರ ಸಮಿತಿಯ ಸಹಕಾರದಲ್ಲಿ ಬಿಲ್ಲವ ವಧುವರರ ಅನ್ವೇಷಣಾ ಸಮಾವೇಶವೊಂದು ಕುದ್ರೋಳಿ ಗೋಕರ್ಣನಾಥ ಸನ್ನಿಧಿಯಲ್ಲಿ ಅರ್ಥ ಪೂರ್ಣವಾಗಿ ಸಂಪನ್ನಗೊಂಡಿದೆ. ಇಲ್ಲಿ ಶಿಸ್ತು ಇತ್ತು, ಅಚ್ಚುಕಟ್ಟುತನವಿತ್ತು, ಸಂಭ್ರಮವಿತ್ತು, ಮನೆ ಮಗಳ ವರನ್ವೇಷಣೆಯ ಸಂಭ್ರಮವಿತ್ತು, ನೆಂಟರಿದ್ದರು, ಫಲತಾಂಬೂಲವಿತ್ತು ಎಲ್ಲವನ್ನೂ ಅಚ್ಚುಕಟ್ಟಾಗಿ ರೂಪಿಸಿದ ವ್ಯವಸ್ಥೆಯಿತ್ತು. ಮಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾರಾಕೇಶ್ ಇವರ ಕನಸಿನ ಕೂಸು, ಅವರ ವ್ಯವಸ್ಥಿತ ಯೋಚನೆಯಿಂದ ಅವರ ತಂಡದ ಪರಿಪೂರ್ಣ ಶ್ರಮದಿಂದ ಯಶಸ್ವಿಯಾಗಿ ಸಮಾವೇಶ ಮೂಡಿ ಬಂದಿದೆ.

ಬಿಲ್ಲವ ಸಮುದಾಯದಲ್ಲಿ ಯುವತಿಯ ಸಂಖ್ಯೆ ಅಧಿಕವಾಗಿದ್ದು, ಬಡ ಹೆಣ್ಣುಮಕ್ಕಳ ಮದುವೆ ನಾನಾ ಕಾರಣದಿಂದ ವಿಳಂಬವಾಗುತ್ತಿದ್ದು, ಹೆಣ್ಣು ಹೆತ್ತ ಮನಸುಗಳಿಗೆ ಇದೊಂದು ಕಾಡುವ ಮತ್ತು ಬಗೆಹರಿಯದ ನೋವಾಗಿತ್ತು. ನೊಂದ ಮನಸುಗಳಿಗೆ ಸಾಂತ್ವಾನ ನೀಡಿ, ಮನೆಯ ಸಮಸ್ಯೆಗೆ ಆಸರೆಯಾಗುವ ಚಿಂತನೆಯಿಂದ ವಧುವರರ ಸಮಾವೇಶ ಎನ್ನುವ ಹಳೆಯ ಕಲ್ಪನೆಗೆ ಹೊಸ ಜೀವನೀಡುವ ಯತ್ನ ಈ ಸಮಾವೇಶದ ಮೂಲಕ ನಡೆದಿತ್ತು. ಬೇರೆ ಬೇರೆ ಸಮುದಾಯದಲ್ಲಿ ನಡೆದಿದ್ದ ಮತ್ತು ನಡೆಯುತ್ತಿದ್ದ ಸಮಾವೇಶಕ್ಕೆ ತೀರಾ ಭಿನ್ನವಾಗಿ ನಡೆದಿದ್ದ ಈ ಸಮಾವೇಶ ಎಲ್ಲರ ಮೆಚ್ಚುಗೆಗೂ ಕಾರಣವಾಗಿತ್ತು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ, ಕಾಸರಗೋಡು, ಮಡಿಕೇರಿ ಮುಂಬೈ ಸಹಿತ ವಿದೇಶದಲ್ಲಿ ನೆಲೆಸಿರುವ ಸಮಸ್ತ ಬಿಲ್ಲವರನ್ನು ಸ್ಥಳೀಯ ಸಂಘ ಸಂಸ್ಥೆಗಳ ಮೂಲಕ ಸಂಪರ್ಕಿಸಿ ವಿವಾಹ ಅಪೇಕ್ಷಿತ ಜೋಡಿಗಳ ಮಾಹಿತಿಯನ್ನು ಪೂರ್ವದಲ್ಲಿಯೇ ಪಡೆದು ಎಲ್ಲಾ ಮಾಹಿತಿಯನ್ನು ಪವರ್ ಪಾಯಿಂಟ್ ಮೂಲಕ ಹೊಂದಿಸಿಕೊಳ್ಳಲಾಗಿತ್ತು. ವರ ಅಥವಾ ವಧು ಅಪೇಕ್ಷಿತರ ಫೋಟೋ, ಅವರ ಕುಲ, ರಾಶಿ, ನಕ್ಷತ್ರ, ಇತರ ಎಲ್ಲಾ ವಿವರವನ್ನೂ ಪವರ್ ಪಾಯಿಂಟ್ ಮೂಲಕ ನೀಡಿ ಪ್ರತಿಯೊಬ್ಬರಿಗೂ ಒಂದೊಂದು ಕೋಡ್ ನೀಡಲಾಗಿದ್ದು, ವಧು ಇಲ್ಲವೆ ವರರು ಬಯಸುವ ಹೆಣ್ಣಿನ ಕೋಡ್ ನಂಬರ್ ಬರೆದಿಟ್ಟುಕೊಂಡು ಬಳಿಕ ಸಂಘಟಕರಿಂದ ಅವರ ಸಂಪೂರ್ಣ ಮಾಹಿತಿಯ ಫೈಲ್ ಪಡೆದು ತಮಗೆ ಒಪ್ಪಿಗೆಯಾದರೆ ಸ್ಥಳದಲ್ಲಿಯೇ ಸಂಬಂಧ ಕುದುರಿಸಿಕೊಳ್ಳುವ ವ್ಯವಸ್ಥೆ ರೂಪಿಸಲಾಗಿತ್ತು. ಇಲ್ಲಿ ಹೆಣ್ಣು ವೇದಿಕೆಗೆ ಬಂದು ಹೋಗುವ ಯಾವ ಹಳೆಯ ಪದ್ಧತಿಯೂ ಇರಲಿಲ್ಲ. ಪರಸ್ಪರ ಒಪ್ಪಿಗೆಯಾಗುವ ಜೋಡಿಯ ಕುಟುಂಭಿಕರು ಪ್ರತ್ಯೇಕವಾಗಿ ಕುಳಿತು ಮುಂದಿನ ಮಾತುಕತೆ ನಡೆಸಬಹುದಾಗಿದೆ. ಇಲ್ಲಿ ಇನ್ನೂ ಒಂದು ವಿಶೇಷ ಕಂಡು ಬಂದಿತ್ತು. ವಧು ಮತ್ತು ವರ ಹಾಗೂ ಅವರ ಕುಟುಂಭಿಕರಿಗೆ ಪ್ರತ್ಯೇಕವಾದ ಕೌನ್ಸಿಲಿಂಗ್ ವ್ಯವಸ್ಥೆಯನ್ನೂ ನುರಿತ ಆಪ್ತ ಸಮಾಲೋಚಕರಿಂದ ನಡೆಸಲಾಗಿತ್ತು. ಈ ಕೌನ್ಸಿಲಿಂಗ್ ಕೇವಲ ಅಂದಿನ ದಿನಕ್ಕೆ ಸೀಮಿತವಾಗದೆ ಪ್ರತಿ ಭಾನುವಾರ ಎಂಬಂತೆ ಮುಂದುವರಿದುಕೊಂಡು ಬರುತ್ತಿದೆ.

ಸಮಾವೇಶದ ಒಂದೇ ದಿನದಲ್ಲಿ ೩೫೦ಕ್ಕೂ ಅಧಿಕ ಮಂದಿಯ ನೋಂದಣಿ ನಡೆದಿದ್ದು ಇದಕ್ಕೂ ಮುನ್ನ ಆರು ಜೋಡಿಗಳಿಗೆ ಸಂಬಂಧ ಕುದುರಿಸಲಾಗಿತ್ತು. ಇದಲ್ಲದೆ ಮದುವೆ ನಡೆಸಲು ಸಾಧ್ಯವೇ ಇಲ್ಲದ ಹೆಣ್ಣು ಮಗಳಿಗೆ ಮದುವೆಯನ್ನೂ ಉಚಿತವಾಗಿ ಮಾಡುವ ಸಂಕಲ್ಪವನ್ನು ಯುವವಾಹಿನಿ ಮಂಗಳೂರು ಮಹಿಳಾ ಘಟಕ ಮಾಡಿಕೊಂಡಿದ್ದು, ಈ ಬಗ್ಗೆ ಘೋಷಣೆಯನ್ನೂ ಮಾಡಿದೆ. 350 ರಷ್ಟು ವಧುವರರು ಬಂದಿದ್ದರೆ ಸಾವಿರಕ್ಕೂ ಮಿಕ್ಕಿ ಬಂಧುಬಾಂಧವರು ಬಂದಿದ್ದು, ನಿಗದಿತ ಸಮಯಕ್ಕೆ ಮುಂಚಿತವಾಗಿ ಆಗಮಿಸಿ ತಮ್ಮ ಮನೆಯ ಕಾರ್ಯಕ್ರಮದಂತೆ ಪಾಲ್ಗೊಂಡಿದ್ದರು. ವ್ಯವಸ್ಥಿತ ವಾದ ನೋಂದಣಿ, ಊಟ ಉಪಹಾರದ ವ್ಯವಸ್ಥೆ, ಸಮವಸ್ತ್ರದಲ್ಲಿದ್ದ ಸಂಘಟಕರು, ವಧು ಮತ್ತು ವರನ ಕಡೆಯವರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ, ಸರಳವಾದ ಉದ್ಘಾಟನಾ ಸಮಾರಂಭ, ಸ್ಥಳದಲ್ಲಿಯೇ ನೋಂದಣಿ ಮತ್ತು ಮಾತುಕತೆಗೆ ಅವಕಾಶ, ಕೌನ್ಸಿಲಿಂಗ್ ಕೇಂದ್ರ ಇವೆಲ್ಲವನ್ನೂ ಅಚ್ಚುಕಟ್ಟಾಗಿ ಯೋಜನಾ ಬದ್ಧವಾಗಿ ರೂಪಿಸಿದ್ದರು ಅಧ್ಯಕ್ಷೆ ವಿದ್ಯಾರಾಕೇಶ್ ಮತ್ತವರ ತಂಡ. ಬಿಲ್ಲವ ಸಮುದಾಯದಲ್ಲಿ ಕಳೆದ ಹಲವಾರು ವರುಷದಿಂದ ಕೇಳಿ ಬರುತ್ತಿದ್ದ, ಒಂದು ಕೂಗಿಗೆ ಸ್ಪಂದಿಸುವ ಮೂಲಕ ಯುವವಾಹಿನಿ ಮಂಗಳೂರು ಮಹಿಳಾ ಘಟಕ ಒಂದು ಮಹತ್ತರವಾದ ಕಾರ್ಯ ಸಾಧನೆಯನ್ನು ನಡೆಸಿದೆ.

ಮಂಗಳೂರು ಮಹಿಳಾ ಘಟಕಕ್ಕೆ ಅಭಿನಂದನೆಗಳು.

– ನರೇಶ್‌ಕುಮಾರ್ ಸಸಿಹಿತ್ಲು

2 thoughts on “ಹೆಣ್ಣು ಹೆತ್ತವರ ನೋವು ನೀಗಿದ ’ವಧುವರರ ಅನ್ವೇಷಣಾ ಸಮಾವೇಶ’ – ಅಭಿಮತ

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!