ಕಡಬ : ಯುವವಾಹಿನಿ (ರಿ.)ಕೇಂದ್ರ ಸಮಿತಿ ಮಂಗಳೂರು ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ(ರಿ) ಕಡಬ ಘಟಕದ ಆತಿಥ್ಯದಲ್ಲಿ ದಿನಾಂಕ 16.12.2018 ರಂದು ನಡೆದ ಕಥೆ ನಾಟಕಕಾರ ನಟ ಕಾದಂಬರಿಗಾರ ಸಾಹಿತಿ ದಿವಂಗತ ವಿಶು ಕುಮಾರ್ ಅವರ ವಿಶುಕುಮಾರ್ ಪರಿಚಯ ಸರಣಿ ಕಾರ್ಯಕ್ರಮದ ಮಾಲಿಕೆ 11 ರ ಸಂಪನ್ಮೂಲ ವ್ಯಕ್ತಿಯಾಗಿ ಪ್ರಶಸ್ತಿ ಪ್ರದಾನ ಸಮಿತಿಯ ಕಾರ್ಯದರ್ಶಿ ದಿನೇಶ್ ಸುವರ್ಣ ರಾಯಿ ಮಾತನಾಡಿ , ವಿಶು ಕಮಾರ್ ರವರು ಒಬ್ಬ ಉತ್ತಮ ಸಾಹಿತಿ, ಅಂಕಣಕಾರ, ಸಿನಿಮಾನಟ, ನಿರ್ಧೇಶಕ, ಅಲ್ಲದೆ ರಾಜಕೀಯ ರಂಗದಲ್ಲಿಯೂ ಗುರುತಿಸಿಕೊಂಡಿದ್ದ ನಮ್ಮ ಸಮಾಜದ ಓರ್ವ ಹೆಮ್ಮೆಯ ವ್ಯಕ್ತಿಯಾಗಿದ್ದಾರೆ. ವಿಶುಕುಮಾರ್ ಕುಮಾರ್ ನೆನಪಿನಲ್ಲಿ ಯುವವಾಹಿನಿ ನಡೆಸುತ್ತಿರುವ ಕಾರ್ಯಕ್ರಮಗಳು ಹಾಗೂ ಮುಂದೆ ಘಟಕಗಳು ನಡೆಸಬೇಕಾದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು .
ಸಭಾಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಯೋಗೀಶ್ ಕುಮಾರ್ ಅಗತ್ತಾಡಿ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯವರಿಗೆ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಚಂದ್ರಶೇಖರ ಆಲಂಕಾರು ಶಾಲು ಹೂದಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಯುವವಾಹಿನಿ ( ರಿ) ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಡಾ. ಸದಾನಂದ ಕುಂದರ್ , ಬಿಲ್ಲವ ಸಮಾಜದ ಹಿರಿಯಾರಾದ ಬಾಳಪ್ಪ ಪೂಜಾರಿ ಸಾಂತ್ಯ, ಕೇಂದ್ರ ಸಮಿತಿಯ ನಾಮನಿರ್ದೇಶಿತ ಸದಸ್ಯರಾದ ದಯಾನಂದ ಕರ್ಕೇರ ಮಡ್ಯೊಟ್ಟು, ಹಾಗೂ ಘಟಕದ ಕಾರ್ಯದರ್ಶಿ ಮಿಥುನ್ ಸುಂದರ್ ಪಲ್ಲತ್ತಡ್ಕ, ನಿರ್ದೇಶಕರಾದ ಗಣೇಶ್ ನಡುವಾಲು, ಕೆದಂಬಾಡಿ ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷರಾದ ಬಾಬು ಪೂಜಾರಿ ಇದ್ಪಾಡಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಘಟಕದ ಜತೆ ಕಾರ್ಯದರ್ಶಿ ಅಭಿಲಾಶ್ ಪಿ ಕೆ, ನಿರ್ಧೇಶಕರು, ಸದಸ್ಯರು ಸಮಾರು 82 ಜನ ಹಾಜರಿದ್ದರು. ಸಂಘಟನಾ ಕಾರ್ಯದರ್ಶಿ ಗಳಾದ ನಾರಾಯಣ ಸಾಂತ್ಯ ಸ್ವಾಗತಿಸಿ, ಸದಸ್ಯೆ ಸುಲೋಚನಾ ಬರೆಂಬೆಟ್ಟು ವಂದಿಸಿದರು. ನಿರ್ಧೇಶಕರಾದ ವಸಂತ ಪೂಜಾರಿ ಬದಿಬಾಗಿಲು ಕಾರ್ಯಕ್ರಮ ನಿರೂಪಿಸಿದರು.