ಬಜಪೆ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ (ರಿ.) ಬಜಪೆ ಘಟಕದ ಆತಿಥ್ಯದಲ್ಲಿ ಯುವವಾಹಿನಿ ಅಂತರ್ ಘಟಕ ರಸಗೀತಾ – 2018 ರ ಜಾನಪದ ಗೀತೆ ಸಮೂಹ ಗಾಯನ ಸ್ಪರ್ಧೆಯಲ್ಲಿ ಯುವವಾಹಿನಿ ಬೆಂಗಳೂರು ಘಟಕ ಹಾಗೂ ರಸಪ್ರಶ್ನೆ ಸ್ಪರ್ಧೆಯಲ್ಲಿ ಯುವವಾಹಿನಿ ಮಂಗಳೂರು ಘಟಕ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಜಾನಪದ ಗೀತಾ ಗಾಯನ ಸ್ಪರ್ಧೆಯ ತೀರ್ಪುಗಾರರಾಗಿ ಉಮಾಕಾಂತ್ ನಾಯಕ್ ಮತ್ತು ಮಲ್ಲಿಕಾ ಶೆಟ್ಟಿ ಇವರು ಭಾಗವಹಿಸಿದ್ದರು. ಈ ವಿಭಾಗದಲ್ಲಿ ಒಟ್ಟು 11 ಘಟಕಗಳು ಸ್ಪರ್ಧೆಯನ್ನು ನೀಡಿದುವು. ಕನಕಾ ಮೋಹನ್ ತೀರ್ಪುಗಾರರನ್ನು ಸಭೆಗೆ ಪರಿಚಯಿಸಿ ಸ್ವಾಗತಿಸಿದರು. ಈ ಸ್ಪರ್ಧಾ ಕಾರ್ಯಕ್ರಮದ ಉದ್ಘೋಷಣೆಯನ್ನು ನಿರ್ಮಲಾ ಗೋಪಾಲ್ ಮತ್ತು ಗೋಪಾಲಕೃಷ್ಣ ಕೆ. ಇವರು ನಡೆಸಿಕೊಟ್ಟರು. ಕಾರ್ಯಕ್ರಮದ ಬಳಿಕ ವಿವಿಧ ಘಟಕಗಳ ಪ್ರತಿಭೆಗಳಿಂದ ರಸಗಾನ ನಡೆಯಿತು.
ಅಪರಾಹ್ನದ ಬಳಿಕ ರಸಪ್ರಶ್ನೆ ಸ್ಪರ್ಧೆ ನಡೆಯಿತು. ಬೆಳಿಗ್ಗೆ ರಸಪ್ರಶ್ನೆಯ 13 ತಂಡಗಳಿಗೆ ಪ್ರಾಥಮಿಕ ಸುತ್ತು ಲಿಖಿತ ಸ್ಪರ್ಧೆಯನ್ನು ನಡೆಸಲಾಯಿತು. ಇದರಲ್ಲಿ ಅತೀ ಹೆಚ್ಚು ಅಂಕಗಳಿಸಿದ 5 ತಂಡಗಳಾದ ಮಂಗಳೂರು ಘಟಕ, ಮೂಡಬಿದ್ರೆ ಘಟಕ, ಯೆಡ್ತಾಡಿ ಘಟಕ, ಉಪ್ಪಿನಂಗಡಿ ಘಟಕ, ಎಕ್ಕಾರು-ಪೆರ್ಮುದೆ ಘಟಕಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿ ಬಳಿಗ ಜರುಗಿದ ಮೌಖಿಕ ಪ್ರಶ್ನಾವಳಿ ಸ್ಪರ್ಧೆಯಲ್ಲಿ ಮಂಗಳೂರು ಘಟಕ ಪ್ರಥಮ, ಉಪ್ಪಿನಂಗಡಿ ಘಟಕ ದ್ವಿತೀಯ, ಯಡ್ತಾಡಿ ಘಟಕ ತೃತೀಯ ಸ್ಥಾನ ತಮ್ಮದಾಗಿಸಿಕೊಂಡರು. ಸ್ಪರ್ಧಾ ಕಾರ್ಯಕ್ರಮವನ್ನು ವಿಶ್ವನಾಥ ಪೂಜಾರಿ ರೆಂಜಾಳ ಇವರು ನಡೆಸಿಕೊಟ್ಟರು. ಮಾಧವ ಸಾಲ್ಯಾನ್ ಮತ್ತು ವಿನೀತ್ ಪೂಜಾರಿ ಸಹಕರಿಸಿದರು.
ವಿಜೇತರ ಪಟ್ಟಿ.
ಜಾನಪದ ಗೀತಾ ಸಮೂಹ ಗಾಯನ :
ಪ್ರಥಮ: ಬೆಂಗಳೂರು ಘಟಕ
ದ್ವಿತೀಯ: ಕೊಲ್ಯ ಘಟಕ
ತೃತೀಯ: ಪಡುಬಿದ್ರೆ ಘಟಕ
ರಸಪ್ರಶ್ನೆ ಸ್ಪರ್ಧೆ :
ಪ್ರಥಮ: ಮಂಗಳೂರು ಘಟಕ
ದ್ವಿತೀಯ: ಉಪ್ಪಿನಂಗಡಿ ಘಟಕ
ತೃತೀಯ: ಯಡ್ತಾಡಿ ಘಟಕ