ಬೆಳ್ತಂಗಡಿ: ಯುವವಾಹಿನಿ(ರಿ) ಬೆಳ್ತಂಗಡಿ ಘಟಕ ಮತ್ತು ಯುವವಾಹಿನಿ ಸಂಚಾಲನ ಸಮಿತಿ ಓಡಿಲ್ನಾಳ ಇದರ ವತಿಯಿಂದ ಬೈನ್ ಹ್ಯಾಮರೇಜ್ಗೆ ತುತ್ತಾಗಿ ಕೋಮಾ ಸ್ಥಿತಿಯಲ್ಲಿ ಕೆಎಂಸಿ ಹಾಸ್ಪಿಟಲ್ನಲ್ಲಿ ಕಳೆದ 25 ದಿನಗಳಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತಿರುವ ಚಂದ್ರಶೇಖರ ಪೂಜಾರಿ ಸುದೆಬೈಲು ಓಡಿಲ್ನಾಳ ಇವರಿಗೆ ರೂಪಾಯಿ 15,750.00 ಸ್ವಾಂತ್ವನ ನಿಧಿಯನ್ನು ಚಂದ್ರಶೇಖರ್ ಪೂಜಾರಿ ಇವರ ಮನೆಯವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಪ್ರಶಾಂತ್ ಮಚ್ಚಿನ, ಸಂಚಾಲನ ಸಮಿತಿಯ ಕಾರ್ಯದರ್ಶಿ ನಾಗೇಶ್ ಓಡಿಲ್ನಾಳ, ಘಟಕದ ಸಲಹೆಗಾರರದ ರಮಾನಂದ ಸಾಲಿಯಾನ್ ಮೂಂಡುರು, ಸಂಪತ್ ಬಿ.ಸುವರ್ಣ, ಕಾರ್ಯದರ್ಶಿ ಜಯರಾಜ್ ನಡಕ್ಕರ, ಕೋಶದಿಕಾರಿ ಉಮೇಶ್ ಸುವರ್ಣ ಶಿರ್ಲಾಲು ಜತೆ ಕಾರ್ಯದರ್ಶಿ ಗುರುಪ್ರಸಾದ್ ಕೋಟ್ಯಾನ್ ನಿರ್ದೇಶಕರಾದ ಹರೀಶ್ ಸುವರ್ಣ ಕನ್ಯಾಡಿ, ಶಶಿದರ ಅದೇಲು, ರಾಕೇಶ್ ಬಂಗೇರ, ವಿಜಯ್ ಕುಮಾರ್ ಶಿರ್ಲಾಲು, ಸುನಿಲ್ ಕನ್ಯಾಡಿ, ಅಶ್ವಥ್ ಕುಮಾರ್ ಬೆಳಾಲು, ಶಿರ್ಲಾಲು ಸಮಿತಿಯ ಅಧ್ಯಕ್ಷರಾದ ಸದಾಶಿವ ಉರ, ಸದಸ್ಯರಾದ ಪವನ್ ಕುಮಾರ್ ಕಟ್ಟೆ, ಸಂದೀಪ್ ಅರ್ವ, ಶ್ರೀನಿವಾಸ ಪೂಜಾರಿ ಬದ್ರಕಜೆ, ಕೇಶವ ಪೂಜಾರಿ ಸುದೆಬೈಲು, ರಮೇಶ್ ಪೂಜಾರಿ ಮದ್ದಡ್ಕ, ಸಂಜೀವ ಪೂಜಾರಿ ಬಡೆಕ್ಕಿನ, ಮತ್ತು ಸಂತ್ರಸ್ತರ ಮನೆಯವರು ಉಪಸ್ಥಿತರಿದ್ದರು.