ಬೆಳ್ತಂಗಡಿ : ಶಾಂತ ಸ್ವಭಾವದ ವಿಶುಕುಮಾರ್ ತನ್ನ ಸುತ್ತಮುತ್ತಲಿನ ಜನರ ಜೀವನದ ಆಗುಹೋಗುಗಳ ಘಟನೆಗಳನ್ನು ಒಂದು ಚೌಕಟ್ಟಿನಲ್ಲಿ ಬರಹದ ರೂಪಕ್ಕೆ ತಂದರು ಅವರ ಬರಹ ತೀಕ್ಷ್ಣತೆ ಹಾಗೂ ನಿರ್ಭೀತಿಯಿಂದ ಕೂಡಿತ್ತು ಅವರು ಯಾರ ಮುಲಾಜಿಗೂ ಒಲಿಯುತ್ತಿರಲಿಲ್ಲ ತಮಗೆ ಅನಿಸಿದ್ದನ್ನು ಬರೆಯುತ್ತಿದ್ದರು. ಎಂದು ಯುವವಾಹಿನಿ ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ಪ್ರೇಮನಾಥ್ ಬಂಟ್ವಾಳ್ ತಿಳಿಸಿದರು.
ಅವರು ಶಾರದಾ ಮಂಟಪ ಗುರುವಾಯನಕೆರೆಯಲ್ಲಿ ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ(ರಿ.) ಬೆಳ್ತಂಗಡಿ ಘಟಕದ ಆತಿಥ್ಯದಲ್ಲಿ ದಿನಾಂಕ 06.12.2018 ರಂದು ನಡೆದ ಕಥೆ, ನಾಟಕಕಾರ, ನಟ, ಕಾದಂಬರಿಗಾರ ಸಾಹಿತಿ ದಿವಂಗತ ವಿಶುಕುಮಾರ್ ಅವರ ವಿಶುಕುಮಾರ್ ಪರಿಚಯ ಸರಣಿ ಕಾರ್ಯಕ್ರಮದ ಮಾಲಿಕೆ 6 ರ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು
ಪ್ರಶಸ್ತಿ ಪ್ರದಾನ ಸಮಿತಿಯ ಕಾರ್ಯದರ್ಶಿ ದಿನೇಶ್ ಸುವರ್ಣ ರಾಯಿ ಮಾತನಾಡಿ ವಿಶುಕುಮಾರ್ ಕುಮಾರ್ ನೆನಪಿನಲ್ಲಿ ಯುವ ವಾಹಿನಿ ನಡೆಸುತ್ತಿರುವ ಕಾರ್ಯಕ್ರಮಗಳು ಹಾಗೂ ಮುಂದೆ ಘಟಕಗಳು ನಡೆಸಬೇಕಾದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು
ಈ ಸಂದರ್ಭದಲ್ಲಿ ಬಿಲ್ಲವರ ಮಾಹಮಂಡಲದ ನಾಮನಿರ್ದೇಶಿತ ಸದಸ್ಯರಾದ ಯೋಗೀಶ್ ಪಡಂಗಡಿ.ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನ ಕಾರ್ಯದರ್ಶಿ ರಾಕೇಶ್ ಮೂಡುಕೋಡಿ ಘಟಕದ ಸಲಹೆಗಾರರಾದ ರಮಾನಂದ ಸಾಲಿಯನ್ ಮೂಂಡುರು, ಸಂಪತ್ ಬಿ ಸುವರ್ಣ ರಘುನಾಥ್ ಶಾಂತಿ ಕೇಂದ್ರ ಸಮಿತಿಯ ನಾಮನಿರ್ದೇಶಿತ ಸದಸ್ಯರಾದ ಉಮನಾಥ್ ಕೋಟ್ಯಾನ್ ಹಾಗೂ ಘಟಕದ ನಿರ್ದೇಶಕರು ಸದಸ್ಯರು ಹಾಜರಿದ್ದರು. ಸಭಾಧ್ಯಕ್ಷತೆಯನ್ನು ವಹಿಸಿದ್ದ ಘಟಕದ ಅಧ್ಯಕ್ಷ ಪ್ರಶಾಂತ್ ಮಚ್ಚಿನ ಸ್ವಾಗತಿಸಿ ಕಾರ್ಯದರ್ಶಿ ಜಯಾರಾಜ್ ನಡಕ್ಕರ ವಂದಿಸಿದರು