ಮಾಣಿ : ವ್ಯಕ್ತಿ ತನ್ನ ನಡತೆ ಮತ್ತು ಕಾರ್ಯಗಳಿಂದ ಬದುಕಿರುವಾಗಲೆ ಸಾಯಬಾರದು ಬದಲಾಗಿ ನಮ್ಮ ವ್ಯಕ್ತಿತ್ವ ನಮ್ಮ ಸಾವಿನ ಬಳಿಕವೂ ನಮ್ಮನ್ನು ಜೀವಂತವಾಗಿರಿಸಬೇಕು, ನಮ್ಮ ನಡುವೆ ಇಲ್ಲದೇ ಇದ್ದರೂ ಅವರ ವ್ಯಕ್ತಿತ್ವದಿಂದ ನಮ್ಮ ನಡುವೆ ಇಂದಿಗೂ ಜೀವಂತವಾಗಿರುವವರು ವಿಶುಕುಮಾರ್ ಅವರ ಜೀವನ ಕ್ರಮ ಅನುಕರಣೀಯ ಎಂದು ಯುವವಾಹಿನಿ ಕೇಂದ್ರ ಸಮಿತಿ ಉಪಾಧ್ಯಕ್ಷ ನರೇಶ್ ಕುಮಾರ್ ಸಸಿಹಿತ್ಲು ತಿಳಿಸಿದರು.
ಅವರು ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು, ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ (ರಿ.), ಮಾಣಿ ಘಟಕದ ಅತಿಥ್ಯದಲ್ಲಿ ನಡೆದ ವಿಶುಕುಮಾರ್ ಪರಿಚಯ-ಸರಣಿ ಕಾರ್ಯಕ್ರಮದ ಮಾಲಿಕೆ 3. ರಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ದಿನಾಂಕ 01.12.2019 ರಂದು ನಾರಾಯಣ ಗುರು ಸಮುದಾಯ ಭವನ ಮಾಣಿಯಲ್ಲಿ ನಡೆದ ಈ ಸಮಾರಂಭದ ಅಧ್ಯಕ್ಷತೆಯನ್ನು ಯುವವಾಹಿನಿ ಮಾಣಿ ಘಟಕದ ಅಧ್ಯಕ್ಷರಾದ ಹರೀಶ್ ಪೂಜಾರಿ ಬಾಕಿಲ ವಹಿಸಿದ್ದರು. ತನ್ನ ಬದುಕಿನುದ್ದಕ್ಕೂ ನೇರ ನಡೆನುಡಿ ಹೊಂದಿ ಸಾಮಾಜಿಕ ಸ್ಥಿತ್ಯಂತರಗಳನ್ನು ಬರಹದ ಮೂಲಕ ಮೂಡಿಸಿ ಜಾಗೃತಿ ಮೂಡಿಸಿ ತನ್ನ ವಾದವನ್ನು ಜೀವನದಲ್ಲಿ ಸಾಧಿಸಿದರು ಅಂತಹ ಬದುಕು ಕಂಡವರು ಸಾಹಿತಿ, ಕಥೆಗಾರ, ಕಾದಂಬರಿಗಾರ, ನಿರ್ದೇಶಕ, ನಾಟಕಗಾರ ವಿಶು ಕುಮಾರ್ ಅವರ ಅವರ ಬದುಕು ಹಾಗೂ ಸಾಹಿತ್ಯದ ಪರಿಚಯ ವರ್ಣನೆಗೆ ಅಸಾಧ್ಯ ಎಂದರು.
ಸಮಿತಿ ಸಂಚಾಲಕರು ಪ್ರದೀಪ್ ಎಸ್.ಆರ್ ವಾರ್ಷಿಕ ಕಾರ್ಯಕ್ರಮದ ಮಾಹಿತಿ ನೀಡಿದರು. ಕಾರ್ಯದರ್ಶಿ ದಿನೇಶ್ ಸುವರ್ಣ ರಾಯಿ ಭಾಷಣ , ರಸಪ್ರಶ್ನೆ ಹಾಗೂ ವಾರ್ಷಿಕ ಕಾರ್ಯಕ್ರಮದ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕೇಂದ್ರ ಸಮಿತಿ ಅಧ್ಯಕ್ಷರಾದ ಜಯಂತ್ ನಡುಬೈಲ್, ಪ್ರಧಾನ ಕಾರ್ಯದರ್ಶಿ ಸುನೀಲ್ ಕೆ ಅಂಚನ್, ಕೋಶಾಧಿಕಾರಿ ಹರೀಶ್ ಕೋಟ್ಯಾನ್, ಮಾಣಿ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ನಾರಾಯಣ ಸಾಲ್ಯಾನ್, ಯುವಸಿಂಚನ ಪತ್ರಿಕೆ ಸಂಪಾದಕ ರಾಜೇಶ್ ಸುವರ್ಣ, ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಪ್ರೇಮ್ ನಾಥ್ ಕೆ, ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷ ಲೋಕೇಶ್ ಸುವರ್ಣ ಅಲೆತ್ತೂರು, ಉಪಾಧ್ಯಕ್ಷ ರಮೇಶ್ ಪೂಜಾರಿ, ಕಾರ್ಯದರ್ಶಿ ಸುಜಿತ್ ಮಾಣಿ ಉಪಸ್ಥಿತರಿದ್ದರು.
ಮಾಣಿ ಘಟಕದ ನಿಕಟಪೂರ್ವ ಅಧ್ಯಕ್ಷ ರಾಜೇಶ್ ಪೂಜಾರಿ ಬಾಬನಕಟ್ಟೆ ಸ್ವಾಗತಿಸಿದರು. ಯುವವಾಹಿನಿ ಮಾಣಿ ಘಟಕದ ಉಪಾಧ್ಯಕ್ಷ ಪ್ರಶಾಂತ್ ಧನ್ಯವಾದ ನೀಡಿದರು.