ಮುಲ್ಕಿ : ಓದಿನಲ್ಲಿ ಸಿಗುವ ಆನಂದ ಅನುಭವ, ಒಳ್ಳೆಯ ವಿಚಾರ ಬೇರೆ ಯಾವ ತಂತ್ರಾಂಶದಿಂದ ಸಿಗಲು ಸಾಧ್ಯವಿಲ್ಲ. ಪುಸ್ತಕ ನಮ್ಮ ಜೀವನಕ್ಕೆ ಬೆಳಕು ಕೊಡುವಂತಹದು, ಈ ನಿಟ್ಟಿನಲ್ಲಿ ಯುವವಾಹಿನಿ ಮುಖವಾಣಿ ಯುವಸಿಂಚನ ಪತ್ರಿಕೆಯ ಸಾಧನೆ ಗಮನಾರ್ಹವಾದುದು ಎಂದು ಹೊಸ ಅಂಗಣ ಮಾಸ ಪತ್ರಿಕೆಯ ಸಂಪಾದಕರಾದ ಹರಿಶ್ಚಂದ್ರ ಪಿ. ಸಾಲ್ಯಾನ್ ಅಭಿಪ್ರಾಯ ಪಟ್ಟರು.
ಅವರು ದಿನಾಂಕ 14.11.2018 ರಂದು ಮುಲ್ಕಿ ಸಿ. ಎಸ್. ಐ ಬಾಲಿಕಾಶ್ರಮದಲ್ಲಿ ಯುವವಾಹಿನಿ (ರಿ) ಮುಲ್ಕಿ ಘಟಕದ ಆಶ್ರಯದಲ್ಲಿ ನಡೆದ ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಯುವಸಿಂಚನ ಪತ್ರಿಕೆಯ ನವೆಂಬರ್ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ ನಡುಬೈಲ್ , ಹೊಸ ಅಂಗಣ ಮಾಸ ಪತ್ರಿಕೆಯ ಸಂಪಾದಕರಾದ ಹರಿಶ್ಚಂದ್ರ ಪಿ. ಸಾಲ್ಯಾನ್, ಸಿ. ಎಸ್. ಐ ಬಾಲಿಕಾಶ್ರಮದ ಮುಖ್ಯಸ್ಥರಾದ ರೆ.ಶಶಿಕಲಾ ಅಂಚನ್ , ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುನಿಲ್. ಕೆ. ಅಂಚನ್ , ಯುವಸಿಂಚನ ಪತ್ರಿಕೆಯ ಸಂಪಾದಕ ರಾಜೇಶ್ ಸುವರ್ಣ ಯುವವಾಹಿನಿ (ರಿ) ಮುಲ್ಕಿ ಘಟಕದ ಅಧ್ಯಕ್ಷೆ ಕುಶಲ ಎಸ್ .ಕುಕ್ಯಾನ್, ಕಾರ್ಯದರ್ಶಿ ಚರಿಷ್ಮಾ, ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಟಿ. ಶಂಕರ ಸುವರ್ಣ , ವಿಜಯ ಕುಮಾರ್ ಕುಬೆವೂರು ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿಯ ಸಂಚಾಲಕ ಪ್ರದೀಪ್. ಎಸ್. ಆರ್, ದಿನೇಶ್ ಸುವರ್ಣ ರಾಯಿ, ಶಶಿಧರ ಕಿನ್ನಿಮಜಲು, ಹರೀಶ್ ಪಚ್ಚನಾಡಿ, ಉದಯ ಅಮೀನ್ ಮಟ್ಟು , ರಕ್ಷಿತಾ ಯೋಗೀಶ್ ಕೋಟ್ಯಾನ್, ಜಯ.ಸಿ.ಪೂಜಾರಿ, ಯೋಗೀಶ್ ಕೋಟ್ಯಾನ್, ಹರೀಂದ್ರ ಸುವರ್ಣ, ರಾಮಚಂದ್ರ ಕೋಟ್ಯಾನ್, ಜಯಕುಮಾರ್ ಕುಬೆವೂರು, ಮತ್ತಿತರರು ಉಪಸ್ಥಿತರಿದ್ದರು.