ಮೂಲ್ಕಿ: ನಾರಾಯಣಗುರುಗಳ ತತ್ವ ಆದರ್ಶದಂತೆ ಇಂದು ಬಿಲ್ಲವ ಸಮಾಜವು ಸಂಘಟನತ್ಮಕವಾಗಿ ಬೆಳೆಯುವುದರೊಂದಿಗೆ ಸಮಾಜದಲ್ಲಿ ಕರಾವಳಿಯ ಸಂಪ್ರದಾಯವನ್ನು ಸಂಸ್ಥೆಯ ಮೂಲಕ ಉಳಿಸುವ ಪ್ರಯತ್ನ ಶ್ಲಾಘನೀಯವಾಗಿದೆ. ಯುವ ಸಮಾಜವನ್ನು ಕಟ್ಟಿ ಬೆಳೆಸುವ ಜವಬ್ದಾರಿಯನ್ನು ನಾರಾಯಣಗುರುಗಳ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿರಿ ಎಂದು ಉಡುಪಿಯ ಕಿರಿಯ ಕಾನೂನು ಅಧಿಕಾರಿ ಮುಮ್ತಾಜ್ ಹೇಳಿದರು.
ಅವರು ಮೂಲ್ಕಿ ಯುವವಾಹಿನಿ ಘಟಕದ ವತಿಯಿಂದ ದಿನಾಂಕ 06.11.2018 ರಂದು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ನಡೆದ 16ನೇ ವರ್ಷದ ತುಳುವೆರೆ ತುಡಾರ ಪರ್ಬವನ್ನು ಉದ್ಘಾಟಿಸಿ ಮಾತನಾಡಿದರು.
ಮೂಲ್ಕಿ ಕೊಸೆಸಾಂ ಅಮ್ಮನವರ ಚರ್ಚ್‌ನ ಧರ್ಮಗುರು ಸಿಲ್ವೆಸ್ಟರ್ ಡಿಕೋಸ್ಟಾ ಮಾತನಾಡಿ, “ದೀಪಾವಳಿ ಬೆಳಕಿನ ಹಾಗೂ ಕೊಡುಗೆಗಳ ಹಬ್ಬ,ಧಾರ್ಮಿಕ ಹಬ್ಬಗಳು ನಮ್ಮ ಹೃದಯದ ಕತ್ತಲೆ ದೂರ ಮಾಡುವ ಮೂಲಕ ಸಾಮರಸ್ಯದ ಬೆಳಕನ್ನು ಕಾಣಬೇಕು, ಭಗವಾನ್ ಏಸು ಕ್ರಿಸ್ತರೂ ಇದನ್ನೇ ಸಾರಿದ್ದಾರೆ. ನಾರಾಯಣ ಗುರುಗಳೂ ಇದೇ ತತ್ವವನ್ನು ತಿಳಿಸಿದ್ದಾರೆ” ಎಂದರು.
ಎಲ್‌ಐಸಿಯ ನಿವೃತ್ತ ಅಧಿಕಾರಿ ಕೊಲ್ನಾಡುಗುತ್ತು ವಿದ್ಯಾಧರ ಶೆಟ್ಟಿ ಮಾತನಾಡಿ, “ಹಬ್ಬ ಹರಿದಿನಗಳು ನಮ್ಮನ್ನು ಸಂಘಟಿತರನ್ನಾಗಿಸಿ ಸಂತೋಷ ಪಡುವುದರೊಂದಿಗೆ ಸಂತಸ ಹಂಚುವ ಹಬ್ಬಗಳಾಗಿವೆ ನಮ್ಮ ಪೂರ್ವಿಕರು ಬಿಟ್ಟುಹೊಂದ ಈ ಸಂಪ್ರದಾಯಗಳನ್ನು ಯುವ ಜನತೆಗೆ ತಿಳಿಸಿ ಬೆಳೆಸುವ ಹೊಣೆ ನಮ್ಮದಾಗಿದೆ” ಎಂದರು.
ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ್ ನಡುಬೈಲ್ ಶುಭ ಹಾರೈಸಿ, ತುಳುನಾಡಿನ ಪರಂಪರೆಯನ್ನು ಉಳಿಸಿ, ಬೆಳೆಸುವ ಕಾಯಕದಲ್ಲಿ ಯುವವಾಹಿನಿ ಮುನ್ನುಡಿ ಬರೆದಿದೆ, ಇಂದು ಎಲ್ಲಾ ಕಡೆಗಳಲ್ಲಿಯೂ ಸಂಸ್ಕೃತಿ ಮತ್ತು ಸಂಸ್ಕಾರದ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಇದಕ್ಕೆ ಪರೋಕ್ಷವಾಗಿ ಯುವವಾಹಿನಿ ಮೂಲ್ಕಿ ಕಾರಣವಾಗಿರುವುದು ಸಂತಸ ತಂದಿದೆ ಎಂದರು.
ಯುವವಾಹಿನಿ ಮೂಲ್ಕಿ ಘಟಕದ ಅಧ್ಯಕ್ಷೆ ಕುಶಲ ಎಸ್. ಕುಕ್ಯಾನ್ ಅಧ್ಯಕ್ಷತೆಯನ್ನು ವಹಿಸಿ ಸ್ವಾಗತಿಸಿದರು.
ಹಿರಿಯ ಕೃಷಿಕೆ ರಾಜೀವಿ ಮಾಧವ ಬಂಗೇರ ಕೊಕ್ಕರಕಲ್ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಚಂದ್ರಶೇಖರ ನಾನಿಲ್‌ರನ್ನು ಸನ್ಮಾನಿಸಲಾಯಿತು.
ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪೀನಾಥ ಪಡಂಗ ಅವರು ಯುವವಾಹಿನಿಯಿಂದ ನೀಡಿದ ವಿಶೇಷ ರಂಗಲಂಕಾರವನ್ನು ಅನಾವರಣಗೊಳಿಸಿದರು.
ಯುವವಾಹಿನಿ ಮೂಲ್ಕಿ ಘಟಕದ ಕೋಶಾಧಿಕಾರಿ ದಿವಾಕರ ಕೋಟ್ಯಾನ್, ಕಾರ್ಯಕ್ರಮ ಸಂಘಟಕರಾದ ಕಮಲಾಕ್ಷ ಬಡಗುಹಿತ್ಲು, ವೇದಾವತಿ ಜಯಕುಮಾರ್ ಉಪಸ್ಥಿತರಿದ್ದರು.
ಮಾಜಿ ಅಧ್ಯಕ್ಷ ಯೋಗೀಶ್ ಕೋಟ್ಯಾನ್ ಚಿತ್ರಾಪು ಪ್ರಸ್ತಾವನೆಗೈದರು, ಮಾಜಿ ಅಧ್ಯಕ್ಷ ಮೋಹನ್ ಸುವರ್ಣ ಮತ್ತು ರಿತೇಶ್ ಸನ್ಮಾನ ಪತ್ರ ವಾಚಿಸಿದರು, ಕಾರ್ಯದರ್ಶಿ ಚರಿಷ್ಠಾ ಶ್ರೀನಿವಾಸ್ ವಂದಿಸಿದರು, ಮಾಜಿ ಅಧ್ಯಕ್ಷರುಗಳಾದ ನರೇಂದ್ರ ಕೆರೆಕಾಡು ಮತ್ತು ಉದಯ ಅಮೀನ್ ಮಟ್ಟು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ವೈಶಿಷ್ಟ :
* ಮೂರು ಧರ್ಮದ ಪ್ರಮುಖರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
* ರಂಗೋಲಿ/ಗೂಡುದೀಪ ಸ್ಪರ್ಧೆಗಳು ನಡೆದವು.
* ಬಂದವರಿಗೆ ಗಟ್ಟಿ ಬಜೀಲ್ದ್ ಔತಣ.
* ಸಾಧಕರಿಗೆ ಸನ್ಮಾನ.
ಸ್ಪರ್ಧಾ ಫಲಿತಾಂಶ:
ರಂಗೋಲಿ ಸ್ಪರ್ಧೆ : ಶರತ್ ಅಡ್ವೆ ಯುವವಾಹಿನಿ ಘಟಕ (ಪ್ರಥಮ), ರಿತೇಶ್ ಕಂಕನಾಡಿ ಯುವವಾಹಿನಿ ಘಟಕ (ದ್ವೀತಿಯ), ಸಹನಾ ಕರ್ಕೇರಾ ಬಂಟ್ವಾಳ ಯುವವಾಹಿನಿ ಘಟಕ (ತೃತೀಯ).
ಗೂಡುದೀಪ ಸ್ಪರ್ಧೆ: ಆದಿತ್ಯ ಭಟ್ ಮಂಗಳೂರು (ಪ್ರಥಮ), ವಿಖ್ಯಾತ್ ಭಟ್ ಮಂಗಳೂರು (ದ್ವೀತೀಯ), ದೀಕ್ಷಿತ್ ಮತ್ತು ತಂಡ ಯುವವಾಹಿನಿ ಶಕ್ತಿ ನಗರ ಮತ್ತು ಯೋಗೀಶ್ ಯುವವಾಹಿನಿ ಬಜ್ಪೆ (ತೃತೀಯ).