ಕೂಳೂರು : ಕತ್ತಲೆಯನ್ನು ಹೋಗಲಾಡಿಸಿ ಮನೆ ಹಾಗೂ ಮನದ ಕತ್ತಲೆಯನ್ನು ನಿವಾರಿಸಿ ಬೆಳಕನ್ನು ಉಂಟು ಮಾಡುವ ‘ಕತ್ತಲಿನಿಂದ ಬೆಳಕಿನೆಡೆಗೆ- ನಮ್ಮ ಮನೆ ಹಬ್ಬ ದೀಪಾವಳಿ’ ಯನ್ನು ದಿನಾಂಕ 06/11/2018 ರಂದು ಯುವವಾಹಿನಿ(ರಿ) ಕೂಳೂರು ಘಟಕದ ವತಿಯಿಂದ ಆಚರಿಸಲಾಯಿತು. ಈ ಕಾರ್ಯಕ್ರಮವು ಘಟಕದ ಕುಟುಂಬ ಸಂಪರ್ಕ ನಿರ್ದೇಶಕರಾದ ರೇಣುಕಾ ತಾರನಾಥ್ ಅವರ ಸಂಚಾಲಕತ್ವದಲ್ಲಿ ಅವರ ಮನೆಯಲ್ಲಿ 90 ಮಂದಿ ಸದಸ್ಯರ ಉಪಸ್ಥಿತಿಯೊಂದಿಗೆ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಅವರು ವಹಿಸಿದ್ದರು .ಮುಖ್ಯ ಅತಿಥಿಯಾಗಿ ಯುವವಾಹಿನಿ(ರಿ) ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಲಕ್ಷ್ಮಣ್ ಸಾಲ್ಯಾನ್ ಹಾಗೂ ಯುವವಾಹಿನಿ(ರಿ) ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ಸುನೀಲ್ ಕೆ ಅಂಚನ್, ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಉಪಾಧ್ಯಕ್ಷರಾದ ಸುಕುಮಾರ್ ಸುವರ್ಣ, ಘಟಕದ ಸಲಹೆಗಾರರಾದ ನೇಮಿರಾಜ್, ಕಾರ್ಯಕ್ರಮದ ಸಂಚಾಲಕರಾದ ರೇಣುಕಾ ತಾರಾನಾಥ ಅವರ ತಾಯಿ ಉಮಾವತಿ ಸುವರ್ಣ ,ಪತಿ ತಾರಾನಾಥ್ ಹಾಗೂ ಕಾರ್ಯದರ್ಶಿ ಪವಿತ್ರ ಅಂಚನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳು ದೀಪವನ್ನು ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಳಿಕ ಸಂಚಾಲಕರಾದ ರೇಣುಕಾ ತಾರಾನಾಥ್ ಹಾಗೂ ಅವರ ಪತಿ ಲಕ್ಷ್ಮಿ ಪೂಜೆಯನ್ನು ನೆರವೇರಿಸಿ ದೀಪಾವಳಿ ಹಬ್ಬವನ್ನು ಬಹಳ ಸಂಭ್ರಮದಿಂದ ಕುಟುಂಬ ಸಮೇತ ಸದಸ್ಯರೊಂದಿಗೆ ಆಚರಿಸಿದರು . ಮುಖ್ಯ ಅತಿಥಿಯಾದ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಲಕ್ಷ್ಮಣ ಸಾಲ್ಯಾನ್ ಅವರು ಮಾತನಾಡಿ ದೀಪಾವಳಿ ಹಬ್ಬದ ಆಚರಣೆಯ ಮಹತ್ವ ಹಾಗು ಸಮಾಜದಲ್ಲಿ ಯುವವಾಹಿನಿಯ ಪಾತ್ರವನ್ನು ಸದಸ್ಯರಿಗೆ ತಿಳಿಸಿದರು. ಪ್ರಧಾನ ಕಾರ್ಯದರ್ಶಿಯಾದ ಸುನೀಲ್ ಅಂಚನ್ ಅವರು ಮಾತನಾಡಿ ಶಿಕ್ಷಣ ಕ್ಷೇತ್ರದಲ್ಲಿ ಯುವವಾಹಿನಿಯ ಪಾತ್ರದ ಬಗ್ಗೆ ತಿಳಿಸಿ , ದೀಪಾವಳಿ ಹಬ್ಬವನ್ನು ಕಳೆದ ಮೂರು ವರ್ಷಗಳಿಂದ ಕೂಳೂರು ಘಟಕವು ಯುವವಾಹಿನಿ ಸದಸ್ಯರೊಂದಿಗೆ ಆಚರಿಸಿರುವುದರ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಉಪಾಧ್ಯಕ್ಷರಾದ ಸುಕುಮಾರ್ ಸುವರ್ಣ ಹಾಗೂ ಸಲಹೆಗಾರರಾದ ನೇಮಿರಾಜ್, ಮನೆಯ ಹಿರಿಯ ಸದಸ್ಯೆ ಉಮಾವತಿ ಸುವರ್ಣ ದೀಪಾವಳಿ ಹಬ್ಬದ ಪ್ರಯುಕ್ತ ಘಟಕಕ್ಕೆ ಶುಭ ಹಾರೈಸಿದರು. ಘಟಕದ ಸದಸ್ಯರೆಲ್ಲರೂ ಸೇರಿ ಹಣತೆಯನ್ನು ಬೆಳಗಿಸಿ, ಪಟಾಕಿಗಳನ್ನು ಸಿಡಿಸಿ, ಆಟದ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಕಾರ್ಯಕ್ರಮದಲ್ಲಿ ಯುವವಾಹಿನಿ(ರಿ) ಕೂಳೂರು ಘಟಕದ ನಿಕಟಪೂರ್ವ ಅಧ್ಯಕ್ಷರಾದ ಪುಷ್ಪರಾಜ್ ಕುಮಾರ್, ಉಪಾಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್, ಮಾರ್ಗದರ್ಶಕರಾದ ಜಯಾನಂದ ಅಮೀನ್, ಘಟಕದ ಹಿರಿಯ ಸದಸ್ಯರಾದ ಚಂದಪ್ಪ ಸನಿಲ್, ಯುವವಾಹಿನಿ(ರಿ) ಮಂಗಳೂರು ಘಟಕದ ಸದಸ್ಯರಾದ ಪ್ರಸಾದ್ ಉಪಸ್ಥಿತರಿದ್ದರು. ಘಟಕದ ಸದಸ್ಯನಾದ ಪ್ರತೀಶ್ ಗೌರೀಶ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಪವಿತ್ರ ಅಂಚನ್ ವಂದಿಸಿದರು .