ವೇಣೂರು : ಜೀವನದಲ್ಲಿ ಏನಾದರೊಂದು ಸಾಧಿಸಬೇಕು, ಅದಕ್ಕೆ ವೈದ್ಯರು, ಇಂಜಿನಿಯರುಗಳೇ ಆಗಬೇಕೆಂದಿಲ್ಲ, ಕೃಷಿಕನಾಗಿಯೂ ಉತ್ತಮ ಸಾಧನೆ ಮಾಡಬಹುದು. ಪರಿಶ್ರಮ ಇದ್ದರೆ ಜೀವನದಲ್ಲಿ ಉತ್ತುಂಗಕ್ಕೇರಲು ಸಾಧ್ಯ ಎಂದು ವೆನ್ಲಾಕ್ ಆಸ್ಪತ್ರೆಯ ಹಿರಿಯ ಮೂತ್ರರೋಗ ತಜ್ಞ ಡಾ. ಸದಾನಂದ ಪೂಜಾರಿ ತಿಳಿಸಿದರು.
ವೇಣೂರು ಲಯನ್ಸ್ ಕ್ಲಬ್ ಸಭಾಭವನದಲ್ಲಿ ದಿನಾಂಕ ರಂದು ಜರುಗಿದ ಯುವವಾಹಿನಿ (ರಿ) ವೇಣೂರು ಘಟಕದ ಯುವವಾಹಿನಿ ಸೇವಾ ಯೋಜನೆ ಆಸರೆ ಇದರ ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಪ್ರಧಾನ ಭಾಷಣಕಾರರಾಗಿ ಅವರು ಮಾತನಾಡಿದರು.
ಸಮಾರಂಭದ ಉದ್ಘಾಟನೆಯನ್ನು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ್ ನಡುಬೈಲು ನೆರವೇರಿಸಿ ಯುವವಾಹಿನಿಯ 32 ಘಟಕಗಳಲ್ಲಿ ವೇಣೂರು ಘಟಕವೂ ಒಂದು ಪ್ರತಿಷ್ಟಿತ ಘಟಕವಾಗಿದೆ. ಪ್ರತಿ ತಿಂಗಳು ಪ್ರತಿ ಸದಸ್ಯನಿಂದ ನೂರು ರೂಪಾಯಿ ಸಂಗ್ರಹಿಸಿ ಆರ್ಥಿಕ ದುರ್ಬಲರಿಗೆ ವಿತರಿಸುವ ಪುಣ್ಯ ಕಾರ್ಯ ಕೈಗೊಂಡಿದೆ. ಇಂತಹ ಸಮಾಜಮುಖಿ ಕಾರ್ಯಗಳ ಮೂಲಕ ಯುವವಾಹಿನಿ ವೇಣೂರು ಘಟಕ ಸಮಾಜದ ಆಸ್ತಿಯಾಗಿ ರೂಪುಗೊಂಡಿದೆ ಎಂದರು.
ಯುವವಾಹಿನಿ ವೇಣೂರು ಘಟಕದ ಅಧ್ಯಕ್ಷ ನಿತೀಶ್ ಎಚ್. ಅಧ್ಯಕ್ಷತೆಯನ್ನು ವಹಿಸಿದ್ದರು. ಬೆಳ್ತಂಗಡಿ ಶ್ರೀ ಗುರುನಾರಾಯಣ ಸಮಾಜ ಸೇವಾ ಸಂಘದ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಾಳೆ, ಯುವವಾಹಿನಿ ವೇಣೂರು ಘಟಕದ ಸಲಹೆಗಾರ ಪ್ರೇಮನಾಥ್ ಕೆ, ಸಾವ್ಯ ಅಯ್ಯಪ್ಪ ಸೇವಾ ಸಮಿತಿ ಗೌರವಾಧ್ಯಕ್ಷ ಶ್ರೀಧರ ಪೂಜಾರಿ, ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ರಾಕೇಶ್ ಕುಮಾರ್ ಮೂಡುಕೋಡಿ, ನಾಮನಿರ್ದೇಶನ ಸದಸ್ಯ ಯೋಗೀಶ್ ಪೂಜಾರಿ ಬಿಕ್ರೊಟ್ಟು, ವೇಣೂರು ಘಟಕದ ಕೋಶಾಧಿಕಾರಿ ಉಮೇಶ್ಚಂದ್ರ ಅಂಬಲ ಮತ್ತಿತರರು ಉಪಸ್ಥಿತರಿದ್ದರು.
ಸನ್ಮಾನ :
ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಹಿರಿಯ ಮೂತ್ರರೋಗ ತಜ್ಞ ಡಾ.ಸದಾನಂದ ಪೂಜಾರಿ, ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ ನಡುಬೈಲು ಇವರನ್ನು ಸನ್ಮಾನಿಸಲಾಯಿತು. ಪ್ರಗತಿಪರ ಕೃಷಿಕ ಸಂಜೀವ ಪೂಜಾರಿ ಮೂಡ್ಲ ಅವರನ್ನು ಗೌರವಿಸಲಾಯಿತು.
ಸಾಂತ್ವನ ನಿಧಿ ವಿತರಣೆ :
ರಾಮಣ್ಣ ಪೂಜಾರಿ, ರಕ್ಷಾ ಹೊಸಪಟ್ಣ, ಗುಲಾಬಿ ಅಂಡಿಂಜೆ, ಶೇಖರ ಪೂಜಾರಿ ನೀರಪಲ್ಕೆ, ಇವರಿಗೆ ಸಾಂತ್ವನ ನಿಧಿ ವಿತರಿಸಲಾಯಿತು. ಯುವವಾಹಿನಿ ವೇಣೂರು ಘಟಕದ ಕಾರ್ಯದರ್ಶಿ ಸತೀಶ್.ಪಿ.ಎನ್ ಪ್ರಸ್ತಾವಿಸಿ ಸ್ವಾಗತಿಸಿದರು. ಉಪಾಧ್ಯಕ್ಷ ಅರುಣ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ನವೀನ್ ಪಚ್ಚೇರಿ ವಂದಿಸಿದರು