ಕೊಲ್ಯ : ರೋಟರಿ ಕ್ಲಬ್ ಮಂಗಳೂರು ಪೂರ್ವ,ರೋಟರಿ ಸಮುದಾಯ ದಳ ಕೊಲ್ಯ ಸೋಮೇಶ್ವರ,ಎನಿಮಲ್ ಕೇರ್ ಟ್ರಸ್ಟ್ ಮತ್ತು ಯುವವಾಹಿನಿ (ರಿ) ಕೊಲ್ಯ ಘಟಕ ಇದರ ಜಂಟಿ ಸಹಭಾಗಿತ್ವದಲ್ಲಿ ” ಹುಚ್ಚುನಾಯಿ ನಿಯಂತ್ರಣ ಲಸಿಕಾ ಶಿಬಿರ” ವನ್ನು ಕೊಲ್ಯ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿಯ ವಠಾರದಲ್ಲಿ ದಿನಾಂಕ 07/10/2018 ನೇ ಆದಿತ್ಯವಾರದಂದು ಜರಗಿತು.
ರೋಟರಿ ಕ್ಲಬ್ ಮಂಗಳೂರು ಪೂರ್ವದ ಅಧ್ಯಕ್ಷರಾದ ರೋ| ಜ?? ಕುಮಾರ್ ಕೊಲ್ಯರವರು ವಿವಿಧ ಸಂಘಟನೆಗಳ ಆಶ್ರಯದೊಂದಿಗೆ ಕಳೆದ ಹದಿನಾಲ್ಕು ವರುಷಗಳೊಂದಿಗೆ ಯಶಸ್ವಿಯಾಗಿ ನಡೆಸಿಕೊಂಡು ಬಂದಿರುವ ಹುಚ್ಚುನಾಯಿ ನಿಯಂತ್ರಣ ಲಸಿಕಾ ಶಿಬಿರಕ್ಕೆ ಕಳೆದ ವರುಷದಿಂದ ನಮ್ಮೊಂದಿಗೆ ಯುವವಾಹಿನಿ (ರಿ) ಕೊಲ್ಯ ಘಟಕವು ಕೈ ಜೋಡಿಸಿರುವುದು ಅತ್ಯಂತ ಸಂತೋಷದ ವಿಷಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಯುವವಾಹಿನಿ (ರಿ) ಕೊಲ್ಯ ಘಟಕದ ಸಲಹೆಗಾರರಾದ ,ಯುವವಾಹಿನಿ (ರಿ) ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಅಶೋಕ್ ಕುಮಾರ್ ಮಂಗಳೂರು ರವರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದು,ಮೂಕಪ್ರಾಣಿಗಳ ರಕ್ಷಣೆಯ ಈ ವಿಶೇಷ ಶಿಬಿರಕ್ಕೆ ಕೈ ಜೋಡಿಸಿದ ಯುವವಾಹಿನಿ (ರಿ) ಕೊಲ್ಯ ಘಟಕಕ್ಕೆ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪಶು ವೈದ್ಯರಾದ ರೋ| ವಸಂತ್ ಕುಮಾರ್ ಶೆಟ್ಟಿಯವರು ಹುಚ್ಚುನಾಯಿ ನಿಯಂತ್ರಣ ಲಸಿಕೆಯ ಅಗತ್ಯತೆಯ ಕುರಿತು ಮಾಹಿತಿಯನ್ನು ನೀಡಿದರು.
ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಕೊಲ್ಯ ಇದರ ಟ್ರಸ್ಟಿಗಳಾದ ಪ್ರಕಾಶ್ ಎಚ್ ಕೊಲ್ಯರವರು ವರ್ಷಂಪ್ರತಿ ನಡೆಯುವ ಈ ಶಿಬಿರಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.
ಪ್ರಾಣಿಗಳ ರಕ್ಷಣೆಯ ಜೊತೆಗೆ ಸಮಾಜದ ಜನರನ್ನು ರೇಬಿಸ್ ನಂತಹ ಮಾರಕರೋಗಗಳಿಂದ ಕಾಪಾಡುವ ಇಂತಹ ವಿಶೇಷ ಶಿಬಿರದಲ್ಲಿ ನಮ್ಮ ಯುವವಾಹಿನಿ (ರಿ) ಕೊಲ್ಯ ಘಟಕ ಪಾಲ್ಗೊಂಡಿರುವುದು ನಿಜಕ್ಕೂ ಸಂತಸ ತಂದಿದೆ ಎಂದು ಯುವವಾಹಿನಿ (ರಿ) ಕೊಲ್ಯ ಘಟಕದ ಅಧ್ಯಕ್ಷರಾದ ಕುಸುಮಾಕರ್ ಕುಂಪಲರವರು ಅಭಿಪ್ರಾಯ ವ್ಯಕ್ತಪಡಿಸಿದರು.
ರೋಟರಿ ಸಮುದಾಯ ದಳ ಕೊಲ್ಯ ಸೋಮೇಶ್ವರದ ಅಧ್ಯಕ್ಷರಾದ ಸುಧಾಸುರೇಶ್ ರವರು ಶಿಬಿರದ ಪ್ರಯೋಜನದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.ಎನಿಮಲ್ ಕೇರ್ ಟ್ರಸ್ಟ್ ಟ್ರಸ್ಟಿಯಾದ ಪೌಲ್ ಚಾರ್ಲ್ ಹಾಗೂ ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಸ್ಥಳಿಯ ಪರಿಸರದ ಸಾರ್ವಜನಿಕರು ತಮ್ಮ ತಮ್ಮ ಮನೆಯ ಸುಮಾರು 137 ಸಾಕು ನಾಯಿಗಳನ್ನು ತಂದು ಲಸಿಕೆ ಹಾಕಿಸಿಕೊಂಡು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.ರೋಟರಿ ಸಮುದಾಯ ದಳದ ಸದಸ್ಯರಾದ ಸುಕೇಶ್ ಮಂಜನಾಡಿ ಸ್ವಾಗತಿಸಿ ,ಕಾರ್ಯಕ್ರಮ ನಿರೂಪಿಸಿದರು,ರೋಟರಿ ಸಮುದಾಯ ದಳದ ಮಾಜಿ ಜಿಲ್ಲಾ ಪ್ರತಿನಿಧಿ ಜೈ ದೇವ್ ಕೊಲ್ಯ ವಂದನಾರ್ಪಣೆ ಮಾಡಿದರು.