ಕೂಳೂರು : ಯುವವಾಹಿನಿ(ರಿ) ಕೂಳೂರು ಘಟಕ ಮತ್ತು ಕೂಳೂರು ಪ್ರೌಢಶಾಲೆ ಇವರ ಜಂಟಿ ಸಹಯೋಗದಲ್ಲಿ ಗಾಂಧಿ ಜಯಂತಿ ಆಚರಣೆ ಹಾಗೂ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ದಿನಾಂಕ 02/10/2018 ರಂದು ಕೂಳೂರು ಪ್ರೌಢಶಾಲೆ ಇಲ್ಲಿ ಬೆಳಗ್ಗೆ 9.30 ಕ್ಕೆ ಸರಿಯಾಗಿ ಹಮ್ಮಿಕೊಳ್ಳಲಾಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಕೂಳೂರು ಚರ್ಚಿನ ಫಾ.ವಿನ್ಸೆಂಟ್ ಡಿಸೋಜಾ ಇವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಯುವವಾಹಿನಿ(ರಿ) ಕೂಳೂರು ಘಟಕದ ಅಧ್ಯಕ್ಷ ಲೋಕೇಶ್ ಕೋಟ್ಯಾನ್, ಕೂಳೂರು ಘಟಕದ ಸಲಹೆಗಾರರು ಹಾಗೂ ಯುವವಾಹಿನಿ(ರಿ) ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ನೇಮಿರಾಜ್, ಕೂಳೂರು ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿ ವಿನ್ನಿಫ್ರೆಡ್ ಪತ್ರಾವೋ, ಯುವವಾಹಿನಿ ಕೂಳೂರು ಘಟಕದ ಸಂಘಟನಾ ಕಾರ್ಯದರ್ಶಿ ಪವಿತ್ರ ಅಮೀನ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು . ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಶಾಲಾ ನಾಯಕಿ ಕುಮಾರಿ ಭಾರ್ಗವಿ ಎಲ್ಲರನ್ನು ಸ್ವಾಗತಿಸಿದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದಂತಹ ರೆವರೆಂಡ್ ಫಾ.ವಿನ್ಸೆಂಟ್ ಡಿಸೋಜಾ ಇವರು ತಮ್ಮ ಅಧ್ಯಕ್ಷ ಭಾಷಣದಲ್ಲಿ ಗಾಂಧಿ ಜಯಂತಿಯ ಶುಭಾಶಯವನ್ನು ಕೋರಿದರು. ಹಾಗೂ ‘ಸ್ವಚ್ಛ ಪರಿಸರಕ್ಕೆ ಸ್ವಚ್ಛ ಮನಸ್ಸು ಅತೀ ಅಗತ್ಯ’ .ನಮ್ಮಲ್ಲಿರುವ ಚಿಂತನೆ ಬದಲಾವಣೆ ಆಗಬೇಕು ,ಆಗ ಇಡೀ ಭೂ ಲೋಕವನ್ನೇ ಬದಲಾಯಿಸಬಹುದು ಎಂದರು
ಪ್ರತಿಯೊಬ್ಬರು ಪರಿಸರವನ್ನು ಸ್ವಚ್ಛವಾಗಿಟ್ಟರೆ ಇಡೀ ಭಾರತವನ್ನೆ ಸ್ವಚ್ಛಗೊಳಿಸಬಹುದು, ಪ್ರತಿಯೊಬ್ಬ ಮನುಷ್ಯನು ಪರಿಸರ ಸ್ವಚ್ಛವಾಗಿಟ್ಟರೆ ಅದೇ ನಾವು ಮಾಡುವ ದೇಶ ಸೇವೆ ಎಂದರು. ಮುಂದೆಯೂ ಯುವವಾಹಿನಿ ಘಟಕವು ಇದೇ ರೀತಿಯಲ್ಲಿ ಉತ್ತಮ ಕೆಲಸವನ್ನು ಮಾಡುವಂತಾಗಲಿ ಎಂದು ಶುಭವನ್ನು ಹಾರೈಸಿದರು . ಮುಖ್ಯ ಅತಿಥಿಯಾದ ನೇಮಿರಾಜ್ ಇವರು ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಮನೆಯಿಂದಲೇ ಸ್ವಚ್ಛತಾ ಅಭಿಯಾನವನ್ನು ಮಾಡಿಕೊಳ್ಳುವ ಸಂಕಲ್ಪವನ್ನು ತೆಗೆದುಕೊಳ್ಳಬೇಕೆಂದು ತಿಳಿಸಿದರು ಯುವವಾಹಿನಿ(ರಿ) ಕೂಳೂರು ಘಟಕದ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಅವರು ಮಾತನಾಡಿ ಇಂದಿನ ಕಾರ್ಯಕ್ರಮ ಮಾಡಲು ಅವಕಾಶ ನೀಡಿದಂತಹ ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿ ವಿನ್ನಿಫ್ರೆಡ್ ಪತ್ರಾವೊ,ಶಾಲಾ ದೈಹಿಕ ಶಿಕ್ಷಕರಾದ ಆಲ್ವಿನ್ ಸಲ್ಡಾನ ಹಾಗೂ ಶಿಕ್ಷಕಿ ಸೌಮ್ಯಲತಾ ಬಂಗೇರ ಇವರನ್ನು ಅಭಿನಂದಿಸಿದರು. ದೈಹಿಕ ಶಿಕ್ಷಕರಾದ ಆಲ್ವಿನ್ ಸಲ್ದಾನ ಕಾರ್ಯಕ್ರಮ ನಿರೂಪಿಸಿದರು. ಶಾಲಾ ವಿದ್ಯಾರ್ಥಿನಿ ಮಂಜುಳಾ ಧನ್ಯವಾದ ಸಲ್ಲಿಸಿದರು. ಸಭಾ ಕಾರ್ಯಕ್ರಮದ ನಂತರ ಸುಮಾರು 180 ವಿದ್ಯಾರ್ಥಿಗಳು ಹಾಗೂ ಸುಮಾರು 60 ಮoದಿ ಘಟಕದ ಸದಸ್ಯರು ಸೇರಿ ಶಾಲಾ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿದರು. ನಂತರ ಯುವವಾಹಿನಿ(ರಿ) ಕೂಳೂರು ಘಟಕದೊಂದಿಗೆ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಮಂದಿರ (ರಿ) ಕೂಳೂರು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಮಂಗಳೂರು ಇವರ ಸಹಕಾರದೊಂದಿಗೆ ಕೂಳೂರು ಜಂಕ್ಷನ್ ಹಾಗೂ ಸುತ್ತಮುತ್ತಲಿನ ಪ್ರದೇಶದ ಸ್ವಚ್ಛತಾ ಅಭಿಯಾನಕ್ಕೆ ಕೂಳೂರು ಘಟಕದ ಸಲಹೆಗಾರರಾದ ನೇಮಿರಾಜ್ ಅವರು ಚಾಲನೆ ನೀಡಿದರು . ಈ ಸಂದರ್ಭದಲ್ಲಿ ಯುವವಾಹಿನಿ(ರಿ) ಕೂಳೂರು ಘಟಕದ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಮಂದಿರದ ಅಧ್ಯಕ್ಷರಾದ ಜಯಾನಂದ ಅಮೀನ್, ಮಾರ್ಗದರ್ಶಕರಾದ ಗಿರಿಧರ್ ಸನಿಲ್, ಕೂಳೂರು ಘಟಕದ ಸ್ಥಾಪಕ ಅಧ್ಯಕ್ಷರಾದ ಸುಜಿತ್ ರಾಜ್, ನಿಕಟಪೂರ್ವ ಅಧ್ಯಕ್ಷರಾದ ಪುಷ್ಪರಾಜ್ ಕುಮಾರ್, ಉಪಾಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್, ಕಾರ್ಯದರ್ಶಿ ಪವಿತ್ರ ಅಂಚನ್, ಸಂಘಟನಾ ಕಾರ್ಯದರ್ಶಿ ಪವಿತ್ರ ಅಮೀನ್ ಉಪಸ್ಥಿತರಿದ್ದು ಸುಮಾರು 60 ಮಂದಿ ಸದಸ್ಯರು ಈ ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾಗಿದ್ದರು. ಸುರಕ್ಷಾ ಕ್ರಮವಾಗಿ ಕಾವೂರು ಪೊಲೀಸ್ ಸಿಬ್ಬಂದಿ ವರ್ಗದವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಸಹಕಾರ ನೀಡಿದರು . ಘಟಕದ ಸದಸ್ಯೆಯಾದ ರೇಣುಕಾ ಪ್ರಸಾದ್ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಸದಸ್ಯರಿಗೆ ಲಘು ಉಪಹಾರದ ವ್ಯವಸ್ಥೆಯನ್ನು ಮಾಡಿದರು. ಸಂಘಟನಾ ಕಾರ್ಯದರ್ಶಿ ಪವಿತ್ರ ಅಮೀನ್ ಎಲ್ಲರನ್ನೂ ವಂದಿಸಿದರು .