ಮಂಗಳೂರು : ದಿನಾಂಕ 23.09.2018 ರಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದ ಆತಿಥ್ಯದಲ್ಲಿ ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಇದರ ಸಹಯೋಗದೊಂದಿಗೆ ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಸಭಾಂಗಣದಲ್ಲಿ ಯುವವಾಹಿನಿ ಅಂತರ್ ಘಟಕ ಕುಣಿತ ಭಜನಾ ಸ್ಪರ್ಧೆ ನಡೆಯಿತು.
ಈ ಸ್ಪರ್ಧೆಯಲ್ಲಿ ಯುವವಾಹಿನಿ ಬಜಪೆ ಘಟಕ ಪ್ರಥಮ,(ರೂ. 10,000/- ನಗದು ಹಾಗೂ ಸ್ಮರಣಿಕೆ) ಯುವವಾಹಿನಿ ಉಡುಪಿ ಘಟಕ ದ್ವಿತೀಯ (ರೂ 7,000/- ನಗದು ಹಾಗೂ ಸ್ಮರಣಿಕೆ) ಯುವವಾಹಿನಿ ಮುಲ್ಕಿ ಘಟಕ ತೃತೀಯ (ರೂ 5,000/- ನಗದು ಹಾಗೂ ಸ್ಮರಣಿಕೆ) ಬಹುಮಾನ ಪಡೆಯಿತು.
ಬಂಟ್ವಾಳ ಘಟಕ ,ಸಸಿಹಿತ್ಲು ಘಟಕ, ಮಂಗಳೂರು ಘಟಕ, ಉಪ್ಪಿನಂಗಡಿ ಘಟಕ, ಕೂಳೂರು ಘಟಕ, ಸುರತ್ಕಲ್ ಘಟಕಗಳು ಪ್ರೋತ್ಸಾಹಕ ಬಹುಮಾನ ಪಡೆದರು. ರಮೇಶ್ ಕಲ್ಮಾಡಿ ಹಾಗೂ ವಿಜಯಲಕ್ಷ್ಮಿ ಕಟೀಲ್ ತೀರ್ಪುಗಾರರಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ , ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಎಚ್.ಎಸ್.ಸಾಯಿರಾಮ್, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಆರ್.ಪದ್ಮಾರಾಜ್ , ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ ನಡುಬೈಲು .ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಎಂ.ಶಶಿಧರ ಹೆಗ್ಡೆ, ಎಲ್.ಐ.ಸಿ ಯ ನಿವೃತ್ತ ಅಸಿಸ್ಟೆಂಟ್ ಡಿವಿಜನಲ್ ಮೆನೇಜರ್ ಚಂದ್ರಕಾಂತ್, ಮಂಗಳೂರಿನ ಎಸ್.ಕೆ.ಬಿಲ್ಡರ್ಸ್ ಮಾಲಕ ಸಂತೋಷ್ ಕುಮಾರ್, ಮಂಗಳೂರು ಮಂಗಳಾದೇವಿ ಲಯನ್ಸ್ ಕ್ಲಬ್ ಅಧ್ಯಕ್ಷ ಯಶವಂತ ಪೂಜಾರಿ, ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಪರಮೇಶ್ವರ ಪೂಜಾರಿ, ಜಿತೇಂದ್ರ ಜೆ.ಸುವರ್ಣ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ.ಸಿ.ಕರ್ಕೇರ ಸ್ವಾಗತಿಸಿದರು. ಕಾರ್ಯಕ್ರಮ ಸಂಚಾಲಕಿ ಶುಭಾ ರಾಜೇಂದ್ರ ಪ್ರಸ್ತಾವನೆ ಮಾಡಿದರು. ಕಾರ್ಯದರ್ಶಿ ರವಿಕಲಾ ವಂದಿಸಿದರು. ನರೇಶ್ ಕುಮಾರ್ ಸಸಿಹಿತ್ಲು ಹಾಗೂ ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.
Welldown.vivaahini.great.successfull.progremme.all.the.best all.ghataka.