.
ಪುತ್ತೂರು : ಯುವವಾಹಿನಿ (ರಿ.) ಪುತ್ತೂರು ಘಟಕ ಇದರ ಆಶ್ರಯದಲ್ಲಿ ರೋಟರಿ ಕ್ಯಾಂಪ್ಕೊ ಬ್ಲಡ್ ಬ್ಯಾಂಕ್ ಪುತ್ತೂರು, ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳಂದೂರು ಇದರ ರೆಡ್ ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಕಾಲೇಜ್ ಅಭಿವೃದ್ಧಿ ಸಮಿತಿ ಇದರ ಸಹಭಾಗಿತ್ವದಲ್ಲಿ “ಸ್ವಯಂ ಪ್ರೇರಿತ ರಕ್ತದಾನ ಶಿಬಿರ ” ದಿನಾಂಕ 22/9/2018ನೇ ಶನಿವಾರ ಬೆಳಿಗ್ಗೆ ಗಂಟೆ 9.30ಕ್ಕೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳಂದೂರು ಇಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ(ರಿ.)ಪುತ್ತೂರು ಘಟಕದ ಅಧ್ಯಕ್ಷರಾದ ಹರೀಶ ಶಾಂತಿ ಪುತ್ತೂರು ವಹಿಸಿದ್ದರು.
ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳಂದೂರು ಇಲ್ಲಿನ ಪ್ರಾಂಶುಪಾಲರಾದ ಪದ್ಮನಾಭ.ಕೆ ಇವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಗ್ರಾಮೀಣ ಪ್ರದೇಶದಲ್ಲಿ ಯುವವಾಹಿನಿಯು ರಕ್ತದಾನದಂತಹ ಸಮಾಜಮುಖಿ ಕಾರ್ಯಕ್ರಮ ಮಾಡಿದುದರ ಬಗ್ಗೆ ಶ್ಲಾಘಿಸಿದರು.
ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದ ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷರಾದ ಜಯಂತ ನಡುಬೈಲು ಮಾತನಾಡಿ ವಿದ್ಯಾರ್ಥಿಗಳು ಸಾಮಾಜಿಕ ಸಂಘಟನೆಗಳೊಂದಿಗೆ ಸೇರಿ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು.ರಕ್ತದಾನ ಮಾಡಿಒಂದು ಜೀವ ಉಳಿಸುವ ಸೇವೆಯಲ್ಲಿ ವಿದ್ಯಾರ್ಥಿಗಳು ಭಾಗಿಯಾಗಿ ಎಂದು ತಿಳಿಸಿದರು. ರೋಟರಿ ಕ್ಯಾಂಪ್ಕೊ ಬ್ಲಡ್ ಬ್ಯಾಂಕ್ ಪುತ್ತೂರು ಇಲ್ಲಿನ ವೈದ್ಯರಾದ ಡಾ||ರಾಮಚಂದ್ರ ಭಟ್ ಮಾತನಾಡಿ ರಕ್ತದಾನ ಮಾಡುವ ಬಗ್ಗೆ ಸವಿವರವಾಗಿ ತಿಳಿಸಿ ಮಕ್ಕಳಿಗೆ ಸಂಪೂರ್ಣ ಮಾಹಿತಿ ನೀಡಿದರು.
ವೇದಿಕೆಯಲ್ಲಿ ರೋ.ಆಸ್ಕರ್ ಆನಂದ್ , ಚೇರ್ ಮೆನ್ IRS ಪುತ್ತೂರು, ವೆಂಕಟೇಶ ಪ್ರಸನ್ನ ಅಧಿಕಾರಿ, ರಾ. ಸೇ. ಯೋಜನೆ ಮತ್ತು ಸಂಚಾಲಕರು ರೆಡ್ ಕ್ರಾಸ್ ಘಟಕ) ಡಾ.ಸದಾನಂದ ಕುಂದರ್ (ಗೌರವ ಸಲಹೆಗಾರರು, ಯುವವಾಹಿನಿ (ರಿ.) ಪುತ್ತೂರು ಘಟಕ), ಸಂತೋಷ್ ಕುಮಾರ್ (ಆರೋಗ್ಯ ಮತ್ತು ಕ್ರೀಡಾ ನಿರ್ದೇಶಕರು, ಯುವವಾಹಿನಿ (ರಿ.) ಪುತ್ತೂರು ಘಟಕ), ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ವಿಶ್ವನಾಥ ಮರ್ಕಾಜೆ ಉಪಸ್ಥಿತರಿದ್ದರು. ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳಂದೂರಿನಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವು ಬಹಳ ಅರ್ಥಪೂರ್ಣವಾಗಿ ಮೂಡಿಬಂದಿದ್ದು ಬೆಳಂದೂರಿನ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಕಾರ್ಯಕ್ರಮದಲ್ಲಿ ಅಣ್ಣಿ ಪೂಜಾರಿ, ಶಶಿಧರ್ ಕಿನ್ನಿಮಜಲ್, ಜಯಂತ ಕೆಂಗುಡೆಲು, ಬಿ.ಟಿ.ಮಹೇಶ್ಚಂದ್ರ ಸಾಲ್ಯಾನ್, ಬಾಬು ಪೂಜಾರಿ ಇದ್ಪಾಡಿ, ಸುಕುಮಾರ್ ಅಂಚನ್ ಅರ್ಕ, ಸುರೇಶ್ ಸಾಲ್ಯಾನ್, ಪ್ರಶಾಂತ್ ಪಲ್ಲತಡ್ಕ, ಉಮೇಶ್ ಬಾಯಾರ್, ಪ್ರಜ್ವಲ್ ಎಮ್.ಎಸ್, ಪವನ್ ಕುಮಾರ್ ಸೌತೆಮಾರ್ , ಸುದೀರ್ ಸಾಲಿಯಾನ್ ಕೆಲೆಂಬಿರಿ , ಚಂದ್ರಶೇಖರ್ ಕೆಲೆಂಬಿರಿ ಮತ್ತು ಕಾಲೇಜಿನ ಪ್ರಾದ್ಯಪಕರು ಉಪಸ್ಥಿತರಿದ್ದರು.ನಾಗೇಶ್ ಬಲ್ನಾಡು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿದ್ಯಾರ್ಥಿಗಳು ಪ್ರಾರ್ಥನೆಯನ್ನು ಮಾಡಿದರು.
ಎವರೆಸ್ಟ್ ರೋಡ್ರಿಗಸ್ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಹನುಮಂತೇ ಗೌಡ ಧನ್ಯವಾದ ಮಾಡಿದರು.