ಮೂಡಬಿದಿರೆ : ಜಗತ್ತಿನ ಎಲ್ಲಾ ಜೀವಿಗಳನ್ನು ತನ್ನ ಆತ್ಮವೆಂದೇ ತಿಳಿ ಎಂಬ ಉಪನಿಷತ್ತಿನ ತತ್ವವನ್ನು ಅಕ್ಷರಶಃ ಪಾಲಿಸಿದವರು ನಾರಾಯಣ ಗುರುಗಳು. ನಾರಾಯಣ ಗುರುಗಳದ್ದು ಎಲ್ಲರನ್ನು ಒಳಗೊಳ್ಳುವ ಚಿಂತನೆ, ನಾರಾಯಣ ಗುರು ನಾಡುಕಂಡ ಅಪೂರ್ವ ದಾರ್ಶನಿಕ.ತನ್ನಲ್ಲೆ ದೇವನನ್ನು ಕಾಣುವ ಅದ್ವೆಯ್ತವಾದ ಅವರದ್ದು. ತನ್ನಲ್ಲೂ .ಇತರರಲ್ಲೂ ದೇವರನ್ನು ಕಾಣುವ ಮಹಾ ಗುಣ ಅವರದ್ದು . ಎಂದು ಲೇಖಕ ಅರವಿಂದ ಚೊಕ್ಕಾಡಿ ನುಡಿದರು.
ಯುವವಾಹಿನಿ (ರಿ) ಮೂಡಬಿದಿರೆ ಘಟಕದಿಂದ ದಿನಾಂಕ 21:09:2018ನೇ ಶುಕ್ರವಾರದಂದು ಬೆಳಿಗ್ಗೆ 10:30ಕ್ಕೆ ಸರಿಯಾಗಿ ಬ್ರಹ್ಮಶ್ರೀ ಗುರುನಾರಾಯಣ ಸೇವಾ ಸಂಘ ರಿ. ಮೂಡಬಿದಿರೆಯಲ್ಲಿ ಶಾಲಾ ಹಾಗೂ ಕಾಲೇಜು ವಿಧ್ಯಾರ್ಥಿಗಳಿಗೆ ನಾರಾಯಣ ಗುರುಗಳ ಚಿಂತನೆಯ ಕುರಿತು ನಡೆದ ‘ಅರಿವು-2018’ ಎಂಬ ವಿಚಾರ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಯುವವಾಹಿನಿ (ರಿ) ಮೂಡಬಿದಿರೆ ಘಟಕದ ಅಧ್ಯಕ್ಷ ರಾಜೇಶ್ ಡಿ.ಕೋಟ್ಯಾನ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ನಾರಾಯಣ ಗುರುಗಳು ಧಾರ್ಮಿಕ ವ್ಯವಸ್ಥೆಯನ್ನು ಕೇಂದ್ರ ವಾಗಿರಿಸಿ ಶೈಕ್ಷಣಿಕ ಹಾಗೂ ಆರ್ಥಿಕ ಶಕ್ತಿಯನ್ನು ನೀಡಿದ ಮಹಾತ್ಮ ಎಂದು ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಭಾನುಮತಿ ಶೀನಪ್ಪ.ಮಾಲಕರು,ನಾರಾಯಣ ಸಾ.ಮಿಲ್, ಮೂಡಬಿದಿರೆ ಇವರು ನುಡಿದರು.. ಬ್ರಹ್ಮ ಶ್ರೀ ಗುರುನಾರಾಯಣ ಸೇವಾ ಸಂಘ ರಿ. ಮೂಡಬಿದಿರೆ ಇದರ ಅಧ್ಯಕ್ಷ ರವೀಂದ್ರ ಎಮ್ ಸುವರ್ಣ , ಮಾಜಿ ಅಧ್ಯಕ್ಷ ಪದ್ಮಯ ಸುವರ್ಣ,ಲಕ್ಷಣ್ ವಿ. ಕೋಟ್ಯಾನ್ , ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ್ ನಡುಬೈಲ್ , ನಾರಾಯಣ ಗುರು ಸೇವಾದಳದ ಅಧ್ಯಕ್ಷ ರಮೇಶ್ ಅಮಿನ್ ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದರು.
ಆಳ್ವಾಸ್ ಕಾಲೇಜು ಮೂಡಬಿದಿರೆಯ ಉಪನ್ಯಾಸಕ ಡಾ. ಯೋಗೀಶ್ ಕೈರೋಡಿ ಆಶಯ ಭಾಷಣ ಮಾಡಿದರು.
ಯುವವಾಹಿನಿ ರಿ. ಮೂಡಬಿದಿರೆ ಘಟಕದ ಅಧ್ಯಕ್ಷ ರಾಜೇಶ್ ಡಿ.ಕೋಟ್ಯಾನ್ ಸ್ವಾಗತಿಸಿದರು. ಕಾರ್ಯದರ್ಶಿ ರಾಮ್ ಕುಮಾರ್ ವಂದಿಸಿದರು..ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕ ಸುದೀಪ್ ಬುನ್ನನ್ ಕಾರ್ಯಕ್ರಮವನ್ನು ನಿರೂಪಿಸಿದರು…
Good concept, well executed. An unique program. Congratulations every body who involved