ಮಾಣಿ : ನಾರಾಯಣಗುರುಗಳು ಈ ಜಗತ್ತು ಕಂಡ ಶ್ರೇಷ್ಠ ದಾರ್ಶನಿಕರು. ತಮ್ಮ ಸಂಘರ್ಷ ರಹಿತವಾದ ಕ್ರಾಂತಿ ತತ್ವದ ಮೂಲಕ ಸಮಾಜದ ಉದ್ಧರಕ್ಕಾಗಿ ದುಡಿದವರು. ವಿದ್ಯೆಯಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಬಲಯುತರಾಗಿರಿ ಎಂಬ ಧ್ಯೇಯ ವಾಕ್ಯದೊಂದಿಗೆ ಸಮಾಜದಲ್ಲಿ ಧನಾತ್ಮಕವಾದ ಬದಲಾವಣೆಗೆ ಕಾರಣರಾದರು ಎಂದು ಶಶಿಧರ್ ಕೆ. ಅಂಡಿಂಜೆ ಹೇಳಿದರು.
ಅವರು ಯುವವಾಹಿನಿ(ರಿ) ಮಾಣಿ ಘಟಕದ 2018-19ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ವತಿಯಿಂದ ನಡೆದ ಗುರುಪೂಜೆ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದರು. ಇಂದಿನ ಕಾಲಘಟ್ಟದಲ್ಲಿ ಮಕ್ಕಳಿಗೆ ಸಂಸ್ಕಾರಯುತವಾದ ತಿಳುವಳಿಕೆಯ ಅವಶ್ಯಕತೆ ಇದೆ. ಋಣಾತ್ಮಕವಾದ ಅಂಶಗಳ ಕಡೆಗೆ ಮಕ್ಕಳು ಆಕರ್ಷಿತರಾಗದಂತೆ ತಡೆಯುವ ಜವಾಬ್ದಾರಿ ಇಂದು ಪೋಷಕರ ಮೇಲಿದೆ. ಹಿರಿಯರು ಸಂಸ್ಕಾರಯುತವಾದ ನಡವಳಿಕೆಗಳ ಮೂಲಕ ಮಕ್ಕಳಿಗೆ ಮೂರ್ತರೂಪವಾದ ಆದರ್ಶರಾಗಿ ನಿಲ್ಲಬೇಕು” ಎಂದು ಅವರು ಅಭಿಪ್ರಾಯ ಪಟ್ಟರು.
ಬೆಳಿಗ್ಗೆ 9.00 ಗಂಟೆಗೆ ಶ್ರೀ ಗುರುಪೂಜೆ ನಡೆಯಿತು. ನಂತರ ನಡೆದ ಪದಗ್ರಹಣ ಸಮಾರಂಭದ ಉದ್ಘಾಟನೆಯನ್ನು ಬ್ರಹ್ಮಶ್ರೀ ನಾರಾಯಣಗುರು ಸವಾ ಸಂಘ (ರಿ) ಮಾಣಿ ಇದರ ಅಧ್ಯಕ್ಷರಾದ ನಾರಾಯಣ ಸಾಲ್ಯಾನ್ ನೆರವೇರಿಸಿದರು. ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಈಶ್ವರ ಪೂಜಾರಿ ಹಿರ್ತಡ್ಕ ಕಡೇಶಿವಾಲಯ, ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯರಾದ ಗೀತಾಚಂದ್ರಶೇಖರ ಅನಂತಾಡಿ,ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಪ್ರೇಮನಾಥ ಕೆ., ಯುವವಾಹಿನಿ (ರಿ) ಬಂಟ್ವಾಳ ಘಟಕದ ಅಧ್ಯಕ್ಷರಾದ ಶಿವಾನಂದ ಎಮ್, ಮಾಜಿ ಅಧ್ಯಕ್ಷ ಲೋಕೇಶ ಸುವರ್ಣ ಅಲೆತ್ತೂರು, ಬಿಲ್ಲವ ಸಮಿತಿಯ ಮಹಿಳಾ ಘಟಕದ ಅಧ್ಯಕ್ಷೆ ರೋಹಿಣಿ ಶ್ರೀನಿವಾಸ ಪೂಜಾರಿ ಉಪಸ್ಥಿತರಿದ್ದರು. ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷರಾದ ಜಯಂತ್ ನಡುಬೈಲು ನೂತನವಾಗಿ ಆಯ್ಕೆಗೊಂಡ ಯುವವಾಹಿನಿ (ರಿ) ಮಾಣಿ ಘಟಕದ ಪಧಾದಿಕಾರಿಗಳ ಪದಪ್ರದಾನವನ್ನು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜೇಶ್ ಪೂಜಾರಿ ಬಾಬನಕಟ್ಟೆ ವಹಿಸಿದರು.
ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಪದವಿ, ವೃತ್ತಿ ಶಿಕ್ಷಣ ವಿಬಾಗದಲ್ಲಿ 75 ಶೇಕಡಾಗಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಯುವವಾಹಿನಿ (ರಿ) ಮಾಣಿ ಘಟಕದ ಪ್ರಥಮ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಶ್ರೀ ರಾಜೇಶ್ ಪೂಜಾರಿ ಬಾಬನಕಟ್ಟೆ ಇವರನ್ನು ಸನ್ಮಾನಿಸಲಾಯಿತು. ಮಾಣಿ ಘಟಕದ ಸಲಹೆಗಾರರಾಗಿ ಸೇವೆ ಸಲ್ಲಿಸಿದ ಪ್ರೇಮನಾಥ ಕೆ,ದಯಾನಂದ ಕೊಡಾಜೆ , ಸಂಘಟಾ ಕಾರ್ಯದರ್ಶಿ ಸತೀಶ್ ಬಾಯಿಲ , ಕೇಂದ್ರ ಸಮಿತಿಗೆ ಆಯ್ಕೆಗೊಂಡ ಜಯಂತಿ ವಿ. ಪೂಜಾರಿ ಇವರುಗಳನ್ನು ಗೌರವಿಸಲಾಯಿತು. ಸ್ವರ್ಣಜ್ಯೋತ್ಸ್ನಾ ಮತ್ತು ತಂಡದವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ರಾಜೇಶ್ ಪೂಜಾರಿಯವರು ಅಥಿತಿಗಳನ್ನು ಸ್ವಾಗತಿಸಿದರು. ಘಟಕದ ಹರೀಶ್ ಬಾಕಿಲ, ಜನಾರ್ದನ ಪೆರಾಜೆ, ಚೇತನ್ ಮಲ್ಲಡ್ಕ, ತ್ರಿವೇಣಿ ರಮೇಶ್, ರವಿಚಂದ್ರ ಬಾಬನಕಟ್ಟೆ, ಶಕೀಲಾ ಕೃಷ್ಣಪ್ಪ ಪೂಜಾರಿ ಮಿತ್ತಕೋಡಿ ಮೊದಲಾದವರು ಇವರು ಅಥಿತಿಗಳನ್ನು ಹೂ-ಶಾಲಿನೊಂದಿಗೆ ಗೌರವಿಸಿದರು. ಕಾರ್ಯದರ್ಶಿ ಪ್ರಶಾಂತ್ ಅನಂತಾಡಿ ಗತ ವರ್ಷದ ವರದಿಯನ್ನು ವಾಚಿಸಿದರು. ರಮೇಶ್ ಮುಜಲ, ವಿಶ್ವನಾಥ್ ನೆಟ್ಲಮುಡ್ನೂರು ವಿವಿಧ ಕಾರ್ಯಕ್ರಮವನ್ನು ನಿರ್ವಹಿಸಿದರು. ಘಟಕದ ಸದಸ್ಯರಾದ ದೀಪಕ್ ಹಾಗೂ ತೃಪ್ತಿ ಮಿತ್ತೂರು ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀ ಸಾಯಿ ಶಾಂತಿ ಬಳಗದವರು ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು. ನಿಯೋಜಿತ ಕಾರ್ಯದರ್ಶಿ ಸುಜಿತ ಅಂಚನ್ ಮಾಣಿ ಧನ್ಯವಾದ ಸಮರ್ಪಿಸಿದರು.