ಬೆಂಗಳೂರು : ಯುವವಾಹಿನಿ ಸಮಾಜದ ಭೂತ, ವರ್ತಮಾನ ಹಾಗೂ ಭವಿಷ್ಯದ ನಂದಾದೀಪವಾಗಲಿದೆ. ಯುವವಾಹಿನಿ ಶಬ್ದದಲ್ಲಿ ಒಂದು ಆಕರ್ಷಣೆ ಇದೆ, ಶಕ್ತಿ ಇದೆ, ಭರವಸೆ ಇದೆ. ಆರೋಗ್ಯಕರವಾದ ಸಂಪರ್ಕವೇ ಸಂಘಟನೆಯ ಸಾಧನ , ವಾಹಿನಿ ಅಂದರೆ ನಿರಂತರವಾದ ಹರಿವು, ಯುವವಾಹಿನಿಯ ನಿಸ್ವಾರ್ಥವಾದ ಸಾಮಾಜಿಕ ಕಾಳಜಿಯಿಂದ ಈ ಹರಿವಿನ ಶಕ್ತಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹಿರಿಯ ಸಾಹಿತಿ ನೆಕ್ಕಿತಪುಣಿ ಗೋಪಾಲಕೃಷ್ಣ ಅಭಿಪ್ರಾಯ ಪಟ್ಟರು.
ಅವರು ದಿನಾಂಕ 09.09.2018 ರಂದು ಬೆಂಗಳೂರು ಮಲ್ಲೇಶ್ವರಂ ಸೇವಾ ಸದನ ಆಡಿಟೋರಿಯಂ ನಲ್ಲಿ ಯುವವಾಹಿನಿಯ 32ನೇ ನೂತನ ಘಟಕ ಯುವವಾಹಿನಿ (ರಿ) ಬೆಂಗಳೂರು ಘಟಕವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣವು ಮಾನವನ ಸಕಲ ನೋವು, ಕಷ್ಟ ಕಾರ್ಪಣ್ಯಗಳನ್ನು ನಿರ್ವಹಿಸುತ್ತದೆ, ಮಾನವರಲ್ಲಿ ಸುಪ್ತವಾಗಿರುವ ಸಕಲ ನೈಪುಣ್ಯತೆಯನ್ನು ತಿದ್ದಿ ಸ್ವಯಂ ನಿಯಂತ್ರಣಕ್ಕೆ ತಂದು ಸಾಮಾಜಿಕ, ಧಾರ್ಮಿಕ, ಮತ್ತು ಶೈಕ್ಷಣಿಕ ಗುಲಾಮಗಿರಿಯಿಂದ ಬಿಡುಗಡೆಗೊಳಿಸಿ ಸ್ವತಂತ್ರಗೊಳಿಸುವುದು ಎಂದು ತಿಳಿಸಿದರು.
ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು ಇದರ ಅಧ್ಯಕ್ಷ ಜಯಂತ್ ನಡುಬೈಲು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಮತ್ತು ಯುವವಾಹಿನಿ ಬೆಂಗಳೂರು ಘಟಕದ ನೂತನ ತಂಡಕ್ಕೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಉದ್ಯೋಗ, ಆರೋಗ್ಯ ಹೀಗೆ ಇತರ ಸಮಾಜಮುಖಿ ಕಾರ್ಯಗಳ ಯೋಜನೆ ರೂಪಿಸಲಾಗಿದೆ, ಈಗಾಗಲೇ 80 ಕ್ಕೂ ಅಧಿಕ ಸದಸ್ಯರ ಬೆಂಗಳೂರು ಘಟಕವು ಕ್ರಿಯಾಶೀಲವಾಗಿದೆ, ಮುಂದಕ್ಕೆ ಸರ್ವರ ಸಹಕಾರದಿಂದ ಯುವವಾಹಿನಿ ಬೆಂಗಳೂರು ಘಟಕವನ್ನು ಸಮರ್ಥವಾಗಿ ಮುನ್ನಡೆಸುವುದಾಗಿ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸುಧೀರ್.ಎಸ್.ಪೂಜಾರಿ ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹೈಕೋರ್ಟಿನ ವಕೀಲರಾದ ಯಾದವ ಕರ್ಕೇರ ಮಾತನಾಡಿ ಯುವವಾಹಿನಿಯ ಕಾರ್ಯ ಬದ್ದತೆ , ಶಿಸ್ತು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಕಲಾ ಕ್ಷೇತ್ರದ ಸಾಧನೆಗಾಗಿ ರಂಜಿತ್ ಹಾಗೂ ಸಾಮಾಜಿಕ ಕ್ಷೇತ್ರದ ಸಾಧನೆಗಾಗಿ ಶಶಿಧರ ಕೋಟ್ಯಾನ್ ಇವರನ್ನು ಅಭಿನಂದಿಸಲಾಯಿತು, ಕಿಶನ್ ಪೂಜಾರಿ ಹಾಗೂ ಮಹೇಂದ್ರ ಬಿಲ್ಲವ ಅಭಿನಂದನಾ ಪತ್ರ ವಾಚಿಸಿದರು.
ಯುವವಾಹಿನಿ ಕೇಂದ್ರ ಸಮಿತಿಯ ಪ್ರಥಮ ಅಧ್ಯಕ್ಷ ಸಂಜೀವ ಪೂಜಾರಿ, ಮಾಜಿ ಅಧ್ಯಕ್ಷರಾದ ಟಿ.ಶಂಕರ ಸುವರ್ಣ, ಲಕ್ಷ್ಮಣ್ ಸಾಲ್ಯಾನ್, ಪರಮೇಶ್ವರ ಪೂಜಾರಿ, ಬೆಂಗಳೂರು ಘಟಕದ ಸಲಹೆಗಾರ ಯಶವಂತ ಪೂಜಾರಿ, ಯುವವಾಹಿನಿ ಸಸಿಹಿತ್ಲು ಘಟಕದ ಅಧ್ಯಕ್ಷ ಮಧು ಬಂಗೇರ ಕಲ್ಲಡ್ಕ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೇಂದ್ರ ಸಮಿತಿಯ ಉಪಾಧ್ಯಕ್ಷ ನರೇಶ್ ಕುಮಾರ್ ಸಸಿಹಿತ್ಲು ಪ್ರಾಸ್ತಾವನೆ ಮಾಡಿದರು, ಪ್ರಧಾನ ಕಾರ್ಯದರ್ಶಿ ಸುನೀಲ್.ಕೆ.ಅಂಚನ್ ಸ್ವಾಗತಿಸಿದರು, ಯುವಸಿಂಚನ ಪತ್ರಿಕೆಯ ಸಂಪಾದಕ ರಾಜೇಶ್ ಸುವರ್ಣ ನೂತನ ಪದಾಧಿಕಾರಿಗಳನ್ನು ಪರಿಚಯಿಸಿದರು, ಬೆಂಗಳೂರು ಘಟಕದ ನೂತನ ಕಾರ್ಯದರ್ಶಿ ರಾಘವೇಂದ್ರ ಪೂಜಾರಿ ಧನ್ಯವಾದ ನೀಡಿದರು.
ಸಭಾ ಕಾರ್ಯಕ್ರಮದ ಮೊದಲು ಬೆಂಗಳೂರು ಘಟಕದ ಸದಸ್ಯರಿಂದ ವೈವಿಯ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಬೆಂಗಳೂರು ಘಟಕ ಮಾದರಿ ಘಟಕ ವಾಗಿ ಮೂಡಿ ಬರಲಿ, ಮುಂದಕ್ಕೆ ಅಲ್ಲಿ ಹೆಚ್ಚು ಘಟಕಗಳು ಚಿಗುರೊಡೆಯಲಿ ಎಂದು ಹಾರೈಸುವ.
All the best
Congrts
It’s a dream come true for the organization.Congratulations to all of you for your time and effort. Keep it up and develop further.
ಶುಭವಾಗಲಿ..
Congratulations. All the best.
Congratulations and All the very best for you entire team