ಪುತ್ತೂರು : ಯುವವಾಹಿನಿ(ರಿ.) ಪುತ್ತೂರು ಘಟಕ ಇದರ ಆಶ್ರಯದಲ್ಲಿ ಯುವವಾಹಿನಿ ಸಂಚಲನ ಸಮಿತಿ ನರಿಮೊಗರು ಮತ್ತು ಬಿಲ್ಲವ ಗ್ರಾಮ ಸಮಿತಿ ನರಿಮೊಗರು ಇದರ ವತಿಯಿಂದ ದಿನಾಂಕ 25/8/2018 ಶನಿವಾರದಂದು ನಡೆದ ಕಾರ್ಯಕ್ರಮದಲ್ಲಿ ಎಂಡೋ ಪೀಡಿತರ ಪಾಲನ ಕೇಂದ್ರ ಕ್ಯೊಲ, ಇಲ್ಲಿನ ಎಂಡೊ ಪೀಡಿತ ಮಕ್ಕಳಿಗೆ ಬಟ್ಟೆಬರೆ ಕೊಡುಗೆಯಾಗಿ ನೀಡಲಾಯಿತು. . ಘಟಕದ ಅಧ್ಯಕ್ಷರಾದ ಹರೀಶ ಶಾಂತಿ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ SSLCಯಲ್ಲಿ 77% ಅಂಕ ಪಡೆದು ವಿಶಿಷ್ಟ ಸಾದನೆ ಮಾಡಿದ ನಮ್ಮ ಸಮುದಾಯದ ಎಂಡೋ ಪೀಡಿತ ವಿದ್ಯಾರ್ಥಿ ಅಭಿಶೇಕ್ ಇವರಿಗೆ ಸನ್ಮಾನವನ್ನು ಮಾಡಿ ವಸ್ತ್ರ ವಿತರಣೆ ಕಾರ್ಯಕ್ರಮವನ್ನು ಕೇಂದ್ರ ಸಮಿತಿ ಅಧ್ಯಕ್ಷರಾದ ಜಯಂತ ನಡುಬೈಲು ಇವರು ನೆರವೇರಿಸಿದರು.
ನಂತರ ಮಾತನಾಡಿದ ಅವರು ತಮ್ಮ ಸ್ವಾರ್ಥಕ್ಕಾಗಿ ಕೃಷಿಗೆ ಎಂಡೋ ಸಲ್ಫಾನ್ ಸಿಂಪಡಿಸಿದ್ದರಿಂದ ಅದರ ವಿಷಕಾರಿ ಅಂಶಕ್ಕೆ ಎಷ್ಟೋ ಕುಟುಂಬಗಳು ಬಲಿಪಶುಗಳಾಗುವ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ದೇವರ ಮಕ್ಕಳು ಇವರು ಅಂಗವೈಕಲ್ಯವನ್ನು ಹೊಂದಿದ್ದರೂ ಕೂಡ ಎಲ್ಲರ ಆರೈಕೆಯಿಂದ ಆರೋಗ್ಯವಂತರಾಗಿ ಸಮಾಜದಲ್ಲಿ ವಿದ್ಯಾಬದ್ದರಾಗಿ ಬಾಳುವಂತ ಶಕ್ತಿ ಅ ದೇವರು ನೀಡಲಿ.ಯುವವಾಹಿನಿಯಂತಹ ಸಂಘಟನೆಗಳು ನಮ್ಮೊಂದಿಗೆ ಸದಾ ಇದೆ. ನಾರಾಯಣ ಗುರುಗಳ ಶುಭಾಶೀರ್ವಾದ ನಿಮ್ಮಮೇಲಿರಲಿ ಎಂದು ಶುಭಹಾರೈಸಿದರು.
ಮನೋರಂಜನಾ ಕಾರ್ಯಕ್ರಮವಾಗಿ ಘಟಕದ ಗೌರವ ಸಲಹೆಗಾರರಾದ ಮತ್ತು ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಡಾ. ಸದಾನಂದ ಕುಂದರ್ ಇವರಿಂದ ಆಕರ್ಷಕ “ಜಾದು ಪ್ರದರ್ಶನ” ನಡೆಯಿತು. ಕಾರ್ಯಕ್ರಮಲ್ಲಿ ಘಟಕದ ಮಾಜಿ ಅಧ್ಯಕ್ಷರುಗಳಾದ ಜಯಂತ ಕೆಂಗುಡೆಲು ಪ್ರಭಾಕರ ಸಾಲ್ಯಾನ್, ಜಯಂತ ಬಾಯಾರು , ಮಹೇಶ್ಚಂದ್ರ ಸಾಲ್ಯಾನ್ ಶಶಿಧರ್ ಕಿನ್ನಿಮಜಲು . ಸಂಚಾಲಕರಾದ ನಾಗೇಶ್ ಬಲ್ನಾಡು,ನಿಕಟ ಪೂರ್ವ ಅಧ್ಯಕ್ಷ ಉದಯ ಕುಮಾರ್ ಕೋಲಾಡಿ, ಕಡಬ ಘಟಕದ ಅಧ್ಯಕ್ಷರಾದ ಯೋಗೀಶ ಅಗತ್ತಾಡಿ, ಬಿಲ್ಲವ ಸಂಘ ಪುತ್ತೂರು ಇದರ ಪದಾಧಿಕಾರಿಗಳಾದ ಸದಾನಂದ ಕುಮಾರ್, ಪ್ರವೀಣ್ ಕುಮಾರ್ ಬಿಲ್ಲವ ಗ್ರಾಮಸಮಿತಿ ಮತ್ತು ಮಹಿಳಾ ಗ್ರಾಮ ಸಮಿತಿ ನರಿಮೊಗರು ಇದರ ಪದಾದಿಕಾರಿಗಳಾದ ಸದಾನಂದ ಕೂಡುರಸ್ತೆ, ಹೂವಪ್ಪ ಪೂಜಾರಿ, ಚಂದ್ರಕಲಾ ಮುಕ್ವೆ ,
ಎಂಡೋ ಪಾಲನ ಕೇಂದ್ರದ ಮೇಲ್ವಿಚಾರಕಿ ಶಶಿಕಲಾ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.
ಓಂಕಾರ್ ಸ್ವೀಟ್ಸ್ ನ ಮಾಲಕರಾದ ಚಂದ್ರಹಾಸ್ ಇವರು ಸಿಹಿತಿಂಡಿಯ ಕೊಡುಗೆಯನ್ನು ನೀಡಿದ್ದರು.