ಮಂಗಳೂರು : ಯುವವಾಹಿನಿ (ರಿ) ಕೇಂದ್ರ ಸಮಿತಿಯ 2018-19 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ದಿನಾಂಕ 5.8.2018 ರಂದು ಮಂಗಳೂರಿನ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್ ನಲ್ಲಿ ಜರುಗಿದ ಯುವವಾಹಿನಿಯ 31ನೇ ವಾರ್ಷಿಕ ಸಮಾವೇಶದಲ್ಲಿ ಜರುಗಿತು.
ನಿಕಟಪೂರ್ವ ಅಧ್ಯಕ್ಷ ಪದ್ಮನಾಭ ಮರೋಳಿ ನೂತನ ಪದಾಧಿಕಾರಿಗಳನ್ನು ವೇದಿಕೆಗೆ ಆಹ್ವಾನಿಸಿದರು. 2018-19 ನೇ ಸಾಲಿನ ಅಧ್ಯಕ್ಷ ಜಯಂತ ನಡುಬೈಲು ನೇತ್ರತ್ವದ ನೂತನ ತಂಡಕ್ಕೆ ನಿರ್ಗಮನ ಅಧ್ಯಕ್ಷ ಯಶವಂತ ಪೂಜಾರಿ ಪ್ರತಿಜ್ಞಾವಿಧಿ ಬೋಧಿಸಿದರು.
ತನ್ನಲ್ಲಿ ಬಹಳಷ್ಟು ಕನಸುಗಳಿವೆ, ಯುವ ಸಮೂಹವನ್ನು ಒಗ್ಗೂಡಿಸಿ ಪ್ರತಿಯೊಂದು ಕ್ಷೇತ್ರದಲ್ಲೂ ಯುವವಾಹಿನಿಯನ್ನು ರಾರಾಜಿಸುವಂತೆ ಮಾಡುತ್ತಾ ಘಟಕವನ್ನು ರಾಜ್ಯಾದ್ಯಂತ ವಿಸ್ತರಿಸುವ ಗುರಿ ಹೊಂದಿದ್ದೇನೆ, ಮುಂದಿನ ಒಂದು ವರ್ಷದಲ್ಲಿ ಉದ್ಯೋಗ ಮೇಳ ಸೇರಿದಂತೆ ಸಮಾಜದ ಎಲ್ಲಾ ಸಮುದಾಯದ ಯುವಕರಿಗೆ ಉಪಯುಕ್ತ ಕಾರ್ಯಕ್ರಮದ ಆಯೋಜನೆಯ ಚಿಂತನೆ ಇದೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ನೂತನ ಅಧ್ಯಕ್ಷರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿ ಜಯಂತ ನಡುಬೈಲು ತಿಳಿಸಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಸಚಿವರಾದ ಡಾ.ಜಯಮಾಲ , ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೋಟ ಶ್ರೀನಿವಾಸ್ ಪೂಜಾರಿ, ಮಂಗಳೂರು ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್ ಚಂದ್ರ ಡಿ.ಸುವರ್ಣ, ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಅಧ್ಯಕ್ಷ ಎಚ್.ಎಸ್.ಸಾಯಿರಾಮ್, ಉದ್ಯಮಿ ದಿವಾಕರ್, ಖ್ಯಾತ ರಂಗಭೂಮಿ, ಚಲನಚಿತ್ರ ನಟ ಅರವಿಂದ ಬೋಳಾರ್, ಯುವವಾಹಿನಿ(ರಿ) ಕೇಂದ್ರ ಸಮಿತಿಯ ಅಧ್ಯಕ್ಷ ಯಶವಂತ ಪೂಜಾರಿ, ಪ್ರಧಾನ ಕಾರ್ಯದರ್ಶಿ ರಾಜೇಶ್ ಸುವರ್ಣ, ಸಂಚಾಲಕ ನವೀನ್ ಚಂದ್ರ ಡಿ.ಸುವರ್ಣ, ನಿರ್ದೇಶಕ ಹರೀಶ್ ಕೆ.ಪೂಜಾರಿ ಹಾಗೂ ಯುವವಾಹಿನಿಯ 31 ಘಟಕಗಳ ಅಧ್ಯಕ್ಷರುಗಳು ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯಾದ್ಯಂತ 31 ಘಟಕಗಳನ್ನು ಹೊಂದಿರುವ ಯುವವಾಹಿನಿ (ರಿ) ಕೇಂದ್ರ ಸಮಿತಿಯ 2018-19 ನೇ ಸಾಲಿನ ಅಧ್ಯಕ್ಷರಾಗಿ ಜಯಂತ ನಡುಬೈಲು ಆಯ್ಕೆಯಾಗಿದ್ದಾರೆ.
ಪದಾಧಿಕಾರಿಗಳು :
ಅಧ್ಯಕ್ಷರು : ಜಯಂತ ನಡುಬೈಲು ಪುತ್ತೂರು
ಉಪಾಧ್ಯಕ್ಷರು : ನರೇಶ್ ಕುಮಾರ್ ಸಸಿಹಿತ್ಲು , ಡಾ.ರಾಜಾರಾಮ್.ಕೆ.ಬಿ ಉಪ್ಪಿನಂಗಡಿ
ಪ್ರಧಾನ ಕಾರ್ಯದರ್ಶಿ : ಸುನೀಲ್.ಕೆ.ಅಂಚನ್ ಮಂಗಳೂರು
ಕೋಶಾಧಿಕಾರಿ : ಹರೀಶ್ ಎಸ್.ಕೋಟ್ಯಾನ್ ಬಂಟ್ವಾಳ
ಜತೆ ಕಾರ್ಯದರ್ಶಿ : ಶರತ್ ಕುಮಾರ್ ಹಳೆಯಂಗಡಿ
ನಿರ್ದೇಶಕರು :
ಕಲೆ ಮತ್ತು ಸಾಹಿತ್ಯ : ವಿಠ್ಠಲ್.ಎಮ್.ಪೂಜಾರಿ ಬೆಳುವಾಯಿ
ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ : ಅಶೋಕ್ ಕುಮಾರ್ ಪಡ್ಪು
ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ : ಸಂಜೀವ ಸುವರ್ಣ ಪಣಂಬೂರು
ಸಮಾಜ ಸೇವೆ :ಸಂತೋಷ್. ಎಸ್. ಪೂಜಾರಿ ಪಡುಬಿದ್ರೆ
ವ್ಯಕ್ತಿತ್ವ ವಿಕಸನ : ರಮೇಶ್ ಕುಮಾರ್ ಉಡುಪಿ
ಕ್ರೀಡೆ ಮತ್ತು ಆರೋಗ್ಯ : ಸುಪ್ರೀತಾ ಪೂಜಾರಿ ಮಂಗಳೂರು
ಮಹಿಳಾ ಸಂಘಟನೆ : ಪಾರ್ವತಿ ಅಮೀನ್ ಮಂಗಳೂರು
ಪ್ರಚಾರ : ಹರೀಶ್ ಕೆ.ಪೂಜಾರಿ
ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿ ಸಂಚಾಲಕರು : ಪ್ರದೀಪ್ ಎಸ್ .ಆರ್ ಸಸಿಹಿತ್ಲು
ಯುವ ಸಿಂಚನ ಪತ್ರಿಕೆ ಸಂಪಾದಕರು : ರಾಜೇಶ್ ಸುವರ್ಣ ಬಂಟ್ವಾಳ
ಸಂಘಟನಾ ಕಾರ್ಯದರ್ಶಿಗಳು :
ನಾಗೇಶ್ ಬಲ್ನಾಡ್ ಪುತ್ತೂರು
ಬಿ.ಟಿ.ಮಹೇಶ್ಚಂದ್ರ ಪುತ್ತೂರು
ಗುಣಕರ್ ಅಗ್ನಾಡಿ ಉಪ್ಪಿನಂಗಡಿ
ಲೋಕೇಶ್ ಸುವರ್ಣ ಬಂಟ್ವಾಳ
ಪ್ರವೀಣ್ ಕುಮಾರ್ ಉಡುಪಿ
ಪ್ರಶಾಂತ್ ಯಡ್ತಾಡಿ
ರಾಕೇಶ್ ಕುಮಾರ್ ಬೆಳ್ತಂಗಡಿ
ರವೀಂದ್ರ ಸುವರ್ಣ ಬಜಪೆ
ರಮೇಶ್ ಕೋಟ್ಯಾನ್ ಕಟಪಾಡಿ
ಶಿವರಾಮ್.ಜಿ.ಅಮೀನ್ ಹೆಜಮಾಡಿ
ಗೋಪಾಲ ಪೂಜಾರಿ ಕಂಕನಾಡಿ
ಸುರೇಶ್ ಬಿ. ಕೊಲ್ಯ
ರವೀಂದ್ರ.ಎಸ್.ಕೋಟ್ಯಾನ್ ಸುರತ್ಕಲ್
ಪುಷ್ಪರಾಜ್ ಕುಮಾರ್ ಕೂಳೂರು
ಸುಜಿತ್ ರಾಜ್.ವೈ. ಕೂಳೂರು
ಚಂದ್ರಶೇಖರ್ ಪೂಜಾರಿ ಬಜಪೆ
ಶಿವಪ್ರಸಾದ್.ಕೆ.ವಿ. ಸುಳ್ಯ
ಚೇತನ್ ಕುಮಾರ್ ಮುಲ್ಕಿ
ನಿತೇಶ್ ಜೆ.ಕರ್ಕೇರಾ ಅಡ್ವೆ
Congregation Jayanthanna..