ವೇಣೂರು : ಯುವವಾಹಿನಿ (ರಿ) ವೇಣೂರು ಘಟಕದ ಸೇವಾ ಯೋಜನೆಯಡಿಯಲ್ಲಿ ವಿದ್ಯುತ್ ಸಂಪರ್ಕದಿಂದ ವಂಚನೆಗೊಂಡಿದ್ದ ಮೂಡುಕೋಡಿ ಹೊಸಮನೆ ದೋಟ ಸುಶೀಲ ರವರ ಮನೆಗೆ 20,000/- ರೂಪಾಯಿ ವೆಚ್ಚದಲ್ಲಿ ವಿದ್ಯುತ್ ಸಂಪರ್ಕ ಮಾಡಿಕೊಡಲಾಯಿತು. ಯುವವಾಹಿನಿ ಕೇಂದ್ರ ಸಮಿತಿಯ ನಿಯೋಜಿತ ಅಧ್ಯಕ್ಷರಾದ ಜಯಂತ ನಡುಬೈಲು ವಿದ್ಯುತ್ ಸಂಪರ್ಕ ಉದ್ಘಾಟನೆ ಮಾಡಿದರು .ಇದೇ ಮನೆಯ ಸುಶೀಲಾರ ಮಗ ಸಚಿನ್ ಮನೊರೋಗದಿಂದ ಬಳಲುತ್ತಿದ್ದು ಇವರ ಚಿಕಿತ್ಸೆಗೆ ಘಟಕದ ವತಿಯಿಂದ 7,000 /-ರೂಪಾಯಿ ಘಟಕದ ಅಧ್ಯಕ್ಷರಾದ ನಿತೀಶ್ ಎಚ್ ವಿತರಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸಮಿತಿಯ ನಿರ್ದೇಶಕರು ಶಶಿಧರ್ ಕನ್ನಿಮಜಲು,ತಾಲೂಕು ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ರಾಕೇಶ್ ಮೂಡುಕೋಡಿ, ಮೂಡುಕೋಡಿ ಬಿಲ್ಲವ ಸಂಘದ ಅಧ್ಯಕ್ಷರಾದ ಗಣೇಶ್ ಶಾಂತಿ,ಸಂಚಾಲನ ಸಮಿತಿಯ ಅಧ್ಯಕ್ಷರಾದ ಯೋಗೀಶ್ ಬಿಕ್ರೋಟ್ಟು, ಪಂಚಾಯತ್ ಸದಸ್ಯರಾದ ಹರೀಶ್ ಪಿ ಯಸ್.ಘಟಕದ ಉಪಾಧ್ಯಕ್ಷರಾದ ನವೀನ್ ಪಚ್ಚೇರಿ ,ಅರುಣ್ ಕೋಟ್ಯಾನ್ ,ಪ್ರಧಾನ ಕಾರ್ಯದರ್ಶಿ ಸತೀಶ್ ಪಿ ಎನ್, ಪದಾಧಿಕಾರಿಗಳಾದ ರವೀಂದ್ರ ಪೂಜಾರಿ ,ಸುಕೇಶ್ ಹುರಾಬೆ,ಪ್ರಭಾಕರ ಉರಿಂಜೆಬೆಟ್ಟು , ಪ್ರಮೋದ್ ಪರಾರಿ,ನಾಗೇಶ್ ಮಾಂದಡ್ಕ, ಉಪಸ್ಥಿತರಿದ್ದರು .