ಮಂಗಳೂರು : ನಗರಕ್ಕೆ ಹಸಿರ ಮೆರುಗು ನೀಡುವ ಸಂಘಟನೆಗಳ ಕಾರ್ಯ ಶ್ಲಾಘನೀಯವಾದುದು ಎಂದು ಮಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಸಚೇತಕರಾದ ಶಶಿಧರ ಹೆಗ್ಡೆ ತಿಳಿಸಿದರು.
ಅವರು ದಿನಾಂಕ 29.07.2018 ರಂದು ಲಯನ್ಸ್ ಮತ್ತು ಲಯನೆಸ್ ಕ್ಲಬ್ ಹಾಗೂ ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ಮಂಗಳೂರಿನ ಉರ್ವಾಸ್ಟೋರ್ ನಿಂದ ಕೊಟ್ಟಾರದವರೆಗೆ ರಸ್ತೆ ವಿಭಜಕದಲ್ಲಿ ಹೂ ಗಿಡಗಳನ್ನು ನೆಡುವ ಕಾರ್ಯಕ್ರಮ ಚಾಲನೆ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸದಸ್ಯರಾದ ನಾಗವೇಣಿ ,ಸ್ಥಾಯಿ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ, ಮಾಜಿ ಕಾರ್ಪೊರೇಟರ್ ಪದ್ಮನಾಭ ಅಮೀನ್, ಪಿ.ಎಸ್.ಐ ವನಜಾಕ್ಷಿ, ಮಂಗಳಾದೇವಿ ಲಯನ್ಸ್ ಕ್ಲಬ್ ಅಧ್ಯಕ್ಷ ಯಶವಂತ್ ಪೂಜಾರಿ, ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ಸಿ.ಕರ್ಕೇರ, ಮಂಗಳಾದೇವಿ ಲಯನೆಸ್ ಕ್ಲಬ್ ಅಧ್ಯಕ್ಷೆ ಕುಶಲಾ ಯಶವಂತ್, ರೀಜಿನಲ್ ಚೇರ್ ಮೆನ್ ಲ.ಹರೀಶ್ ಕೆ. ಲಯನ್ ದಿವಾಕರ್ ಬಿ.ಎಸ್, ಲಯನ್ ಪ್ರದೀಪ್, ಯುವವಾಹಿನಿ ಮಂಗಳೂರು ಘಟಕದ ಅಧ್ಯಕ್ಷ ನವೀನ್ ಚಂದ್ರ, ಮಂಗಳೂರು ಮಹಿಳಾ ಘಟಕದ ಕಾರ್ಯದರ್ಶಿ ರವಿಕಲಾ, ಉಪಾದ್ಯಕ್ಷೆ ಉಮಾಶ್ರೀಕಾಂತ್, ಸಲಹೆಗಾರ ಪರಮೇಶ್ವರ ಪೂಜಾರಿ, ಸಂಚಾಲಕರಾದ ರೇಖಾ ಗೋಪಾಲ್, ಮತ್ತಿತರರು ಉಪಸ್ಥಿತರಿದ್ದರು.
ಬಳಿಕ ಉರ್ವಾಸ್ಟೋರ್ ನಿಂದ ಕೊಟ್ಟಾರದವರೆಗೆ ನಗರಕ್ಕೆ ಮೆರುಗು ನೀಡಲು ರಸ್ತೆ ವಿಭಜಕದಲ್ಲಿ ಸಸಿಗಳನ್ನು ನೆಡಲಾಯಿತು