ಕೂಳೂರು: ಯುವವಾಹಿನಿ(ರಿ) ಕೂಳೂರು ಘಟಕದ ವತಿಯಿಂದ ಕೂಳೂರು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ದಿನಾಂಕ 25/07/2018 ರಂದು ಸಂಜೆ 7 ಗಂಟೆಗೆ ಸರಿಯಾಗಿ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಯಿತು .
ಯುವವಾಹಿನಿ(ರಿ) ಕೂಳೂರು ಘಟಕದ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು . ಯುವವಾಹಿನಿ(ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ್ ಪೂಜಾರಿ ,ಸಲಹೆಗಾರರಾದ ನೇಮಿರಾಜ್, ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಅಧ್ಯಕ್ಷರಾದ ಜಯಾನಂದ ಅಮೀನ್, ಗೋಪಾಲಕೃಷ್ಣ ಭಜನಾ ಮಂಡಳಿಯ ಅಧ್ಯಕ್ಷರಾದ ಗಿರಿಧರ್ ಗಿರಿಧರ್ ಸನಿಲ್, ಕಾರ್ಯದರ್ಶಿ ಪವಿತ್ರ ಅಂಚನ್ ,ಕಾರ್ಯಕ್ರಮದ ಸಂಚಾಲಕರಾದ ದೀಕ್ಷಿತ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು .
ಮುಖ್ಯ ಅತಿಥಿಯಾಗಿದ್ದ ಆರ್ಮಿ ರಿಕ್ರೂಟ್ ಮೆಂಟ್ ಕರ್ನಲ್ ಎಮ್. ಎ. ರಾಜ್ ಮನ್ನಾರ್ ಇವರು ಉಪಸ್ಥಿತರಿದ್ದರು ಹಾಗೂ ಅಧ್ಯಕ್ಷರು ಎಲ್ಲರನ್ನು ಸ್ವಾಗತಿಸಿದರು . ಮುಖ್ಯ ಅತಿಥಿಯಾಗಿ ಆಗಮಿಸಿದ ದಂತಹ ಕರ್ನಲ್ ಎಮ್. ಎ. ರಾಜ್ ಮನ್ನಾರ್ ಇವರು 23 ವರ್ಷಗಳ ತಮ್ಮ ಸೇವೆಯಲ್ಲಿ ತಾವು ಕೂಡ ಕಾರ್ಗಿಲ್ ಯುದ್ಧದ ಸಮಯದಲ್ಲಿ ದೇಶದ ರಕ್ಷಣೆಯಲ್ಲಿ ಭಾಗಿಯಾಗಿರುವ ವಿಷಯವನ್ನು ತಿಳಿಸಿ ತಮ್ಮ ಕಾರ್ಗಿಲ್ ಯುದ್ಧದ ಅನುಭವವನ್ನು ಸಭೆಯಲ್ಲಿ ತಿಳಿಸಿದರು
ಕೋಶಾಧಿಕಾರಿಯಾದ ಮಧುಶ್ರೀ ಅವರು ಕಾರ್ಗಿಲ್ ಯುದ್ಧದಲ್ಲಿ ಮಡಿದಂತಹ ಕೆಲವು ವೀರ ಯೋಧರ ಪರಿಚಯವನ್ನು ಸಭೆಯ ಮುಂದಿಟ್ಟರು . ನಂತರ ಎಲ್ಲರೂ ಸೇರಿ ಭಾರತಾಂಬೆಗೆ ದೀಪ ಹಚ್ಚುವುದರ ಮೂಲಕ ನಮನ ಸಲ್ಲಿಸಿದರು ಹಾಗೂ ಮೇಣದ ಬತ್ತಿಯನ್ನು ಹೊತ್ತಿಸಿ ಯುದ್ಧದಲ್ಲಿ ತಮ್ಮ ಪ್ರಾಣವನ್ನು ಬಲಿದಾನ ಮಾಡಿದ ಆ ವೀರ ಯೋಧರಿಗೆ ಎರಡು ನಿಮಿಷದ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು .ಈ ಸಂದರ್ಭದಲ್ಲಿ ನಮ್ಮ ದೇಶದ ಸೈನ್ಯದಲ್ಲಿ ಸೇವೆ ಸಲ್ಲಿಸಿದ ಊರಿನ ಐದು ಮಂದಿ ಯೋಧರಾದ ಮಾಜಿ ಸೈನಿಕ ವೇದಪ್ರಕಾಶ್, ಮಾಜಿ ಸೈನಿಕ ಪುಷ್ಪರಾಜ್ ಕುಮಾರ್, ಮಾಜಿ ಸೈನಿಕ ರಾಜೇಶ್ ಶ್ರೀಯಾನ್, ಮಾಜಿ ಸೈನಿಕ ರೂಪೇಶ್ ಶೆಟ್ಟಿ , ಮಾಜಿ ಸೈನಿಕ ಆನಂದ್ ಕುಮಾರ್ ಇವರನ್ನು ಘಟಕದ ವತಿಯಿಂದ ಕರ್ನಲ್ ಎಮ್. ಎ ರಾಜ್ ಮನ್ನಾರ್ ಇವರು ಅಭಿನಂದಿಸಿದರು. ನಂತರ ರಾಜೇಶ್ ಶ್ರೀಯಾನ್ ಅವರು ಮಾತನಾಡಿ ತಮ್ಮನ್ನು ಅಭಿನಂದಿಸಿದ ಯುವವಾಹಿನಿ(ರಿ) ಕೂಳೂರು ಘಟಕಕ್ಕೆ ಧನ್ಯವಾದ ಸಲ್ಲಿಸಿದರು. ಯುವವಾಹಿನಿ(ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿ ಅವರು ಮಾತನಾಡಿ ಕೂಳೂರು ಘಟಕದ ವಿಭಿನ್ನ ರೀತಿಯ ಈ ಕಾರ್ಯಕ್ರಮಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಸಭೆಯಲ್ಲಿ ಕೇಂದ್ರ ಸಮಿತಿಯ ಸ್ಥಾಪಕ ಅಧ್ಯಕ್ಷರಾದ ಸಂಜೀವ ಪೂಜಾರಿ ,ಕೂಳೂರು ಘಟಕದ ಸ್ಥಾಪಕ ಅಧ್ಯಕ್ಷರಾದ ಸುಜಿತ್ ರಾಜ್, ನಿಕಟಪೂರ್ವ ಅಧ್ಯಕ್ಷರಾದ ಪುಷ್ಪರಾಜ್ ಕುಮಾರ್, ಪಣಂಬೂರು ಘಟಕದ ಅಧ್ಯಕ್ಷರಾದ ಜಗದೀಶ್ ಇವರು ಉಪಸ್ಥಿತರಿದ್ದರು .ಸುಜಿತ್ ರಾಜ್ ಕಾರ್ಯಕ್ರಮ ನಿರೂಪಿಸಿದರು .ಸಂಚಾಲಕರಾದ ದೀಕ್ಷಿತ್ ಸಿ.ಎಸ್ ವಂದಿಸಿದರು .