ಮೂಡಬಿದ್ರೆ : ಯುವವಾಹಿನಿ (ರಿ) ಮೂಡಬಿದ್ರೆ ಘಟಕ ಹಾಗೂ ಲಯನ್ಸ್ ಕ್ಲಬ್ ಶಿರ್ತಾಡಿ ಇದರ ಜಂಟಿ ಆಶ್ರಯದಲ್ಲಿ ಶ್ರೀನಿವಾಸ್ ಇನ್ಸಿಟ್ಯೂಟ್ ಅಫ್ ಡೆಂಟಲ್ ಸಾಯನ್ಸ್ ಮುಕ್ಕ ಸುರತ್ಕಲ್ ಇದರ ಸಹಯೋಗದೊಂದಿಗೆ ದಿನಾಂಕ 08.07.2018 ರಂದು ಆನೆಗುಡ್ಡೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ ಜರುಗಿತು.
ಆನೆಗುಡ್ಡೆ ಸಂತ ಪ್ರಾನ್ಸಿಸ್ ಕ್ಸೇವಿಯರ್ ಚರ್ಚ್‌ನ ಧರ್ಮಗುರುಗಳಾದ ವಂದನೀಯ ಜೆರಾಲ್ಡ್ ಪ್ರಾನ್ಸಿಸ್ ಪಿಂಟೋ ಇವರು ದೀಪ ಬೆಳಗುವುದರ ಮತ್ತು ಮೂಲಕ ಶಿಬಿರ ಉದ್ಘಾಟಿಸಿದರು.
ಯುವವಾಹಿನಿಯ ಯುವಕರು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸುವ ಸಂಸ್ಥೆ ಹಾಗೂ ಜನರ ನೋವಿಗೆ ಸ್ಪಂದಿಸುವ ಮೂಲಕ ಸಾರ್ಥಕತೆ ಪಡೆದಿದೆ, ಆರೋಗ್ಯಪೂರ್ಣ ಸಮಾಜ ನಿರ್ಮಾಣದಲ್ಲಿ ಯುವವಾಹಿನಿ ಪ್ರಮುಖ ಪಾತ್ರ ನಿರ್ವಹಿಸಿದೆ ಎಂದು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಯುವವಾಹಿನಿ ಮೂಡಬಿದ್ರೆ ಘಟಕದ ಅಧ್ಯಕ್ಷ ರಾಜೇಶ್ ಡಿ. ಕೋಟ್ಯಾನ್ ಪಣಪಿಲ ತಿಳಿಸಿದರು.
ಯುವವಾಹಿನಿ ಮೂಡಬಿದ್ರೆ ಘಟಕದ ಸಲಹೆಗಾರ ಸಾಧು ಪೂಜಾರಿ, ಶೀನಿವಾಸ್ ಡೆಂಟಲ್ ಕಾಲೇಜಿನ ಡಾ.ಕೃಪಲ್ ರೈ, ಶಿರ್ತಾಡಿ ಲಯನ್ಸ್ ಕ್ಲಬ್ ನ ನಿಯೋಜಿತ ಅಧ್ಯಕ್ಷ ರವೀಂದ್ರ ಪೂಜಾರಿ, ಆನೆಗುಡ್ಡೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ನೋರ್ಬರ್ಟ್ ಪಿರೇರಾ , ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಮಿತ್ ರಾಜ್ , ಯುವವಾಹಿನಿ ಮೂಡಬಿದ್ರೆ ಘಟಕದ ಆರೋಗ್ಯ ನಿರ್ದೇಶಕ ಸಂತೋಷ್ ಪಣಪಿಲ, ಜಾನ್ಸನ್ ಡಿ ಸೋಜಾ, ವಸಂತಿ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು. ಸಂತೋಷ್ ಸಲ್ದಾನ ಆನೆಗುಡ್ಡೆ ಕಾರ್ಯಕ್ರಮ ನಿರೂಪಿಸಿದರು.
ಒಟ್ಟು 88 ಜನರು ಶಿಬಿರದ ಪ್ರಯೋಜನ ಪಡೆದರು.
Good social work.Keep it up.
Good attempt, keep it up moodabidre