ಕೂಳೂರು : ಕೇಸರ್ ದ ಗೊಬ್ಬುಲು ಕ್ರೀಡಾಕೂಟದ ಮೂಲಕ ಕೃಷಿಕರ ಬದುಕಿನ ನೈಜ ಚಿತ್ರಣ ಅನಾವರಣಗೊಂಡಿದೆ , ಕ್ರೀಡೆಯ ಮೂಲಕ ಪರಸ್ಪರ ಪ್ರೀತಿ , ವಿಶ್ವಾಸ ಬೆಳೆಸುವ ಕಾರ್ಯ ಯುವವಾಹಿನಿ ಕುಳೂರು ಘಟಕ ಮಾಡುತ್ತಿದೆ ಎಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷ ಯಶವಂತ ಪೂಜಾರಿ ತಿಳಿಸಿದರು
ಅವರು ದಿನಾಂಕ 01.07.2017 ರಂದು ಯುವವಾಹಿನಿ(ರಿ) ಕೂಳೂರು ಘಟಕದ ಆಶ್ರಯದಲ್ಲಿ ಕೂಳೂರಿನ ಮೇಲ್ ಕೊಪ್ಪಳದಲ್ಲಿ ಜರುಗಿದ ಕೆಸರ್ದ ಗೊಬ್ಬುಲು 2018 ಕ್ರೀಡಾಕೂಟದ ಗದ್ದೆಗೆ ಸಾಂಪ್ರದಾಯಿಕವಾಗಿ ಹಾಲು ಹಾಗೂ ತೆಂಗಿನ ಕಾಯಿ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು .
ವಿದ್ಯೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಲಕ್ಷಾಂತರ ರೂಪಾಯಿಗಳ ವಿದ್ಯಾರ್ಥಿ ವೇತನ ನೀಡುವ ಕೂಳೂರು ಘಟಕದ ಸಾಧನೆ ಶ್ಲಾಘನೀಯ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಯುವವಾಹಿನಿ(ರಿ) ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಜಯಂತ ನಡುಬೈಲು ತಿಳಿಸಿದರು
ಮುಖ್ಯ ಅತಿಥಿಗಳಾಗಿ ಪತ್ರಕರ್ತ ಹಾಗೂ ರಂಗ ನಿರ್ದೇಶಕರಾದ ಪರಮಾನಂದ ಸಾಲ್ಯಾನ್ , ಕೂಳೂರು ಘಟಕದ ಗೌರವ ಸಲಹೆಗಾರರಾದ ನೇಮಿರಾಜ್ , ಕೂಳೂರು ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಬಿ.ಕೆ ಸುಜಿತ್ , ಕೂಳೂರು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಮಂದಿರದ ಅಧ್ಯಕ್ಷರಾದ ಜಯಾನಂದ ಅಮೀನ್, ಕೂಳೂರು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಮಂದಿರದ ಪ್ರಧಾನ ಕಾರ್ಯದರ್ಶಿ ಸದಾಶಿವ ಬಿ ಸುವರ್ಣ , ಗೋಪಾಲಕೃಷ್ಣ ಭಜನಾ ಮಂಡಳಿಯ ಅಧ್ಯಕ್ಷರಾದ ಗಿರಿಧರ್ ಸನಿಲ್, ಬಿ ನವೀನ್ ಚಂದ್ರ ಪೂಜಾರಿ , ಉಪಾಧ್ಯಕ್ಷರು ಭಾಜಪ ಹಿಂದುಳಿದ ಮೋರ್ಚಾ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ , ಪದ್ಮನಾಭ ಮರೋಳಿ ಮಾಜಿ ಅಧ್ಯಕ್ಷರು ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ,ಯುವವಾಹಿನಿ (ರಿ) ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಕೆ ವಿಶ್ವನಾಥ್ ,ಪದ್ಮನಾಭ ಮರೋಳಿ ಭಾಗವಹಿಸಿದ್ದರು.
ಮುಖೇಶ್ ಕರ್ಕೇರಾ ಹಾಗೂ ವಿರೇಶ್ ತೀರ್ಪುಗಾರರಾಗಿ ಭಾಗವಹಿಸಿದ್ದರು . ಯುವವಾಹಿನಿ (ರಿ)ಕೂಳೂರು ಘಟಕದ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಸ್ವಾಗತಿಸಿದರು ಕಾರ್ಯದರ್ಶಿ ಪವಿತ್ರ ಅಂಚನ್ ಉಪಸ್ಥಿತರಿದ್ದರು ,ಸಂಚಾಲಕರಾದ ರೋಹಿತ್ ಕೂಳೂರು ವಂದಿಸಿದರು .ಘಟಕದ ಸ್ಥಾಪಕ ಅಧ್ಯಕ್ಷರಾದ ಸುಜಿತ್ ರಾಜ್ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.
Super
Nice
Wonderful program