ಉಪ್ಪಿನಂಗಡಿ : ಸ್ವಸ್ಥ ಸಮಾಜದ ಕನಸನ್ನು ಕಂಡ ಯುವವಾಹಿನಿ ಯುವಕರು ಕಳೆದ 30 ವರ್ಷಗಳಿಂದ ಅವರದೇ ಆದ ವೈಯಕ್ತಿಕ ಬದುಕನ್ನು ಪಕ್ಕಕ್ಕಿಟ್ಟು ಸಾಮೂಹಿಕ ಬದುಕಿಗೆ ಪಣತೊಟ್ಡು ಹಬ್ಬದ ವಾತಾವರಣ ಒಂದು ಮನೆಗೆ ಸೀಮಿತವಾಗಿರದೆ ಇಡೀ ಸಮಾಜವೇ ಹಬ್ಬದ ವಾತಾವರಣದಿಂದ ಕೂಡಿರಬೇಕು ಎಂಬ ಯುವವಾಹಿನಿ ಯುವಕರ ಸತತ ಪರಿಶ್ರಮದ ಫಲವೇ ಯುವವಾಹಿನಿಯ ಯಶಸ್ಸು ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಯಶವಂತ ಪೂಜಾರಿ ತಿಳಿಸಿದರು.
ಅವರು ದಿನಾಂಕ 14.06.2018 ನೇ ಗುರುವಾರ ಇಂದಿರಾ ವೆಂಕಟೇಶ್ ಸಭಾಂಗಣ, ಹಿರಿಯ ಪ್ರಾಥಮಿಕ ಶಾಲೆ ಉಪ್ಪಿನಂಗಡಿ ಇಲ್ಲಿ ಜರುಗಿದ ಯುವವಾಹಿನಿ (ರಿ) ಉಪ್ಪಿನಂಗಡಿ ಘಟಕದ 2018-19 ನೇ ಸಾಲಿನ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದರು.
ಪುತ್ತೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಹಾಗೂ ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷ ಜಯಂತ ನಡುಬೈಲು ದೀಪ ಬೆಳಗುವುದರ ಮೂಲಕ ಸಮಾರಂಭ ಉದ್ಘಾಟಿಸಿದರು.
ಯುವವಾಹಿನಿ ಉಪ್ಪಿನಂಗಡಿ ಘಟಕದ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಅಧ್ಯಕ್ಷತೆ ವಹಿಸಿದ್ದರು ಪುತ್ತೂರು ಎ.ಪಿ.ಎಮ್.ಸಿ.ಉಪಾಧ್ಯಕ್ಷ ಬಾಲಕೃಷ್ಣ ಬಾಣಜಾಲು, ಪುತ್ತೂರು ಯುವಮೋರ್ಚಾದ ಅಧ್ಯಕ್ಷ ಸುನೀಲ್ ದಡ್ಡು, ಯುವವಾಹಿನಿ ಉಪ್ಪಿನಂಗಡಿ ಘಟಕದ ಸಲಹೆಗಾರರಾದ ವರದ್ರಾಜ್, ಕರುಣಾಕರ ಸುವರ್ಣ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
2017-18 ನೇ ಸಾಲಿನ ಶ್ರೇಷ್ಠ ಸಾಧನೆಗಾಗಿ ಯುವವಾಹಿನಿ ಉಪ್ಪಿನಂಗಡಿ ಘಟಕದ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ದಂಪತಿಗಳನ್ನು ಉಪ್ಪಿನಂಗಡಿ ಘಟಕದ ವತಿಯಿಂದ ಅಭಿನಂದಿಸಲಾಯಿತು.
ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅಜಿತ್ ಕುಮಾರ್ ಪಾಲೇರಿ ಅಧ್ಯಕ್ಷ ಹುದ್ದೆಯನ್ನು ಪ್ರೀತಿಯಿಂದ ಸ್ವೀಕರಿಸಿದ್ದೇನೆ. ಮಾಜಿ ಅಧ್ಯಕ್ಷರು ಹಾಗೂ ಸಲಹೆಗಾರರು ಘಟಕದ ಬಹು ದೊಡ್ಡ ಆಸ್ತಿ ಈ ಆಸ್ತಿಯನ್ನು ಜೋಪಾನವಾಗಿ ಕಾಪಾಡಿಕೊಂಡು ಬರುವ ಜವಾಬ್ದಾರಿ ತನ್ನ ಮೇಲಿದೆ, ಸರ್ವರ ಸಹಕಾರದ ಮೂಲಕ ಘಟಕವನ್ನು ಯಶಸ್ವಿಯಾಗಿ ಮುನ್ನಡೆಸುವ ಆತ್ಮವಿಶ್ವಾಸ ತನ್ನಲ್ಲಿದೆ ಎಂದರು.
ಡಾ.ರಾಜಾರಾಮ್ ಕೆ.ವಿ. ಪ್ರಾಸ್ತಾವನೆ ಮಾಡಿದರು, ಕಾರ್ಯದರ್ಶಿ ಮನೋಜ್ ಎನ್.ಸಾಲ್ಯಾನ್ ವಾರ್ಷಿಕ ವರದಿ ಮಂಡಿಸಿದರು, ಮಾಜಿ ಅಧ್ಯಕ್ಷ ಡಾ.ಸದಾನಂದ ಕುಂದರ್ ಸ್ವಾಗತಿಸಿದರು. ನೂತನ ಕಾರ್ಯದರ್ಶಿ ಅನಿಲ್ ಕುಮಾರ್ ದಡ್ಡು ವಂದಿಸಿದರು.ಮಾಜಿ ಅಧ್ಯಕ್ಷ ಲೋಕೇಶ್ ಬೆತ್ತೋಡಿ ಕಾರ್ಯಕ್ರಮ ನಿರೂಪಿಸಿದರು.
Congrats Ajithkumar
Congratulations Uppinangadi. All the best new team