ಪಣಂಬೂರು : ಅವ್ಯವಸ್ಥೆಯನ್ನು ತಿಂದುಂಡು ಹೊದ್ದು ಮಲಗೇಳುವ ನಮ್ಮ ಪರಿಸ್ಥಿತಿಯನ್ನು ಬದಲಾಯುಸೋ ಪ್ರಯತ್ನಕ್ಕೆ ಯುವವಾಹಿನಿ ಸಂಘಟನೆ ಅನಿವಾರ್ಯ ಹಾಗೂ ಆಗ ಮಾತ್ರ ಒಂದು ಸುಭದ್ರ ನಾಳೆ, ಒಂದು ನೆಮ್ಮದಿಯ ನಾಳೆ, ಒಂದು ನಿರಾತಂಕ ನಾಳೆ, ಒಂದು ಸ್ಪಷ್ಟ ನಾಳೆ, ಒಂದು ಸಮೃದ್ಧಿಯ ನಾಳೆ ನಿರ್ಮಾಣಕ್ಕೆ ಸಾಧ್ಯ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಯಶವಂತ ಪೂಜಾರಿ ತಿಳಿಸಿದರು.
ಅವರು ದಿನಾಂಕ 09.06.2018 ರಂದು ಪಣಂಬೂರು, ನವಮಂಗಳೂರು ಬಂದರು ಮಂಡಳಿಯ ರಿಕ್ರಿಯೇಶನ್ ಕ್ಲಬ್ ಇಲ್ಲಿ ಯುವವಾಹಿನಿ(ರಿ) ಪಣಂಬೂರು ಘಟಕದ 2018-19 ನೇ ಸಾಲಿನ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಭೋಧಿಸಿ ಮಾತನಾಡಿದರು.
ಕುಳಾಯಿ ಬಿಲ್ಲವ ಸಂಘದ ಅಧ್ಯಕ್ಷ ಪ್ರಭಾಕರ ಕುಲಾಯಿ ದೀಪ ಬೆಳಗುವುದರ ಮೂಲಕ ಸಮಾರಂಭ ಉದ್ಘಾಟಿಸಿದರು. ಕೋಟಿ ಚೆನ್ನಯ ನಾಟಕದಲ್ಲಿ ಅದ್ಭುತ ವಾಗಿ ನಟಿಸಿದ ಘಟಕದ ಕಲಾವಿದರಾದ ನಿತಿನ್ ಹಾಗೂ ರಂಜನ್ ಇವರನ್ನು ಅಭಿನಂದಿಸಲಾಯಿತು.
ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿ ಗಳಾದ ದೀಪಕ್ , ಸಂಜನಾ, ಕಾರ್ತಿಕ್, ಹಾಗೂ ಭೂಮಿಕಾ ಸುವರ್ಣ ಇವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.
2018-19 ನೇ ಸಾಲಿನ ನೂತನ ಅಧ್ಯಕ್ಷರಾಗಿ ಜಗದೀಶ್ ಸುವರ್ಣ ನೇತ್ರತ್ವದ ತಂಡವು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಘಟಕದ ಮಾಜಿ ಅಧ್ಯಕ್ಷ ರಾಜೀವ ಪೂಜಾರಿ ನೂತನ ಪದಾಧಿಕಾರಿಗಳನ್ನು ಸಭೆಗೆ ಪರಿಚಯಿಸಿದರು.
ಕರಾಟೆ ಪಟು ಶರತ್ ಕುಮಾರ್, ಸಲಹೆಗಾರರಾದ ಜಯರಾಮ ಕಾರಂದೂರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮ ಸಂಚಾಲಕ ಮಹೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು
ಯುವವಾಹಿನಿ ಪಣಂಬೂರು ಘಟಕದ ಅಧ್ಯಕ್ಷ ಉದಯ ಆರ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಮಾಜಿ ಅಧ್ಯಕ್ಷ ಪದ್ಮನಾಭ ಮರೋಳಿ ಪ್ರಸ್ತಾವನೆ ಮಾಡಿದರು, ಅಧ್ಯಕ್ಷ ಉದಯ ಆರ್ ಸ್ವಾಗತಿಸಿದರು, ಕಾರ್ಯದರ್ಶಿ ನರೇಶ್ ಕುಮಾರ್ ವಾರ್ಷಿಕ ವರದಿ ಮಂಡಿಸಿದರು, ಸಂಜೀವ ಸುವರ್ಣ ಕಾರ್ಯಕ್ರಮ ನಿರೂಪಿಸಿದರು, ನೂತನ ಕಾರ್ಯದರ್ಶಿ ರಾಜೇಶ್ ವಂದಿಸಿದರು.
Nice