ಕಡಬ: ಯುವ ಜನತೆ ಸ್ವಾಭಿಮಾನಿ ಸ್ವಾವಲಂಭಿ ಬದುಕಿನತ್ತ ಹೆಜ್ಜೆ ಇಟ್ಟು ಎಲ್ಲಾ ಕ್ಷೇತ್ರಗಳಲ್ಲೂ ಸಮಾಜದ ಮುಖ್ಯ ವಾಹಿನಿಗೆ ಬಂದು ಸದೃಡ ಸಮಾಜ ನಿರ್ಮಾಣಕ್ಕೆ ಕಾರಣೀಭೂತರಾಗಿರಬೇಕು ಎಂದು ಯುವವಾಹಿನಿ(ರಿ} ಕೇಂದ್ರ ಸಮಿತಿ, ಮಂಗಳೂರು ಇದರ ಅಧ್ಯಕ್ಷರಾದ ಯಶವಂತ ಪೂಜಾರಿಯವರು ಹೇಳಿದರು.
ಅವರು ದಿನಾಂಕ 10.06.2018 ರಂದು ಕಡಬ ದುರ್ಗಾಂಬಿಕಾ ದೇವಸ್ಥಾನದ ಸಭಾಭವನದಲ್ಲಿ ನಡೆದ ಯುವವಾಹಿನಿ ಸಂಸ್ಥೆಯ 31ನೇ ಘಟಕ ಯುವವಾಹಿನಿ{ರಿ) ಕಡಬ ಘಟಕದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯುವವಾಹಿನಿ ಘಟಕ ಸ್ಥಾಪಿಸುವ ಮೂಲಕ ಬಿಲ್ಲವ ಸಮುದಾಯದ ಯುವ ಜನತೆಯಲ್ಲಿ ಸ್ವಾಭಿಮಾನಿ ಬದುಕು ರೂಪಿಸಲು ಪ್ರೇರಣೆ ನೀಡುತ್ತಿದೆ. ಶಿಕ್ಷಣ, ಉದ್ಯೋಗ, ಸಾಮಾಜಿಕ ಸೌಹಾರ್ದತೆ ಯುವವಾಹಿನಿಯ ಉದ್ದೇಶವಾಗಿದೆ. ನಮ್ಮ ಯುವ ಸಮುದಾಯ ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ಮುಂದೆ ಬಂದು ಸಮಾಜದಲ್ಲಿ ಪ್ರತಿಭಾವಂತರಾಗಿ ಹೊರಹೊಮ್ಮಬೇಕು. ಆ ಮೂಲಕ ಪ್ರಭಾವಿಗಳಾಗಿ ಸಹಕಾರ ಮನೋಭಾವದಿಂದ ಎಲ್ಲರನ್ನು ಒಟ್ಟಾಗಿಸಿಕೊಂಡು ತಾನು ಬೆಳೆಯುವುದರೊಂದಿಗೆ ಸಮಾಜವನ್ನು ಬೆಳೆಸಬೇಕು. ಜಿಲ್ಲೆಯಾದ್ಯಂತ ಯುವ ಸಮುದಾಯ ಒಂದು ಉತ್ತಮ ಉದ್ದೇಶವನ್ನಿಟ್ಟುಕೊಂಡು ಬೆಳೆಯುತ್ತಿರುವುದು ಶ್ಲಾಘನೀಯ ಎಂದು ಹೇಳಿದ ಯಶವಂತ ಪೂಜಾರಿ ಕಡಬದಲ್ಲಿ 31ನೇ ಘಟಕ ಉದ್ಘಾಟನೆಯಾಗುತ್ತಿದ್ದು ಈ ಭಾಗದ ಯುವ ಸಮುದಾಯವನ್ನು ಒಗ್ಗೂಡಿಸುವ ಮೂಲಕ ಸಮಾಜ ಮುಖಿಯಾಗಿ ಬೆಳೆಯಲಿ ಎಂದು ಶುಭಹಾರೈಸಿದರು.
ಯಾವುದೇ ಒಂದು ಸಂಸ್ಥೆ ವಿಚಾರ ಆಧಾರಿತವಾಗಿ ಬೆಳೆದಲ್ಲಿ ಅದರ ಪ್ರಾಮುಖ್ಯತೆ ಎಲ್ಲರಿಗೂ ತಿಳಿಯುವಂತಾಗುತ್ತದೆ. ಇದಕ್ಕೆ ನಮ್ಮ ಯುವ ವಾಹಿನಿ ಸಾಕ್ಷಿಯಾಗಿದೆ. ನಾವು ಸಮುದ್ರ ಆಗುವುದಕ್ಕಿಂತ ನಿರಂತರ ಹರಿಯುವ ತೋಡು, ಹಳ್ಳ ನದಿಗಳಾಗಿ ಹೊಸ ಹೊಸ ಮುಖಗಳನ್ನು ಹೊಂದಿಸಿಕೊಂಡು ಹೊಸ ಯೋಜನೆಗಳನ್ನು ಹುಟ್ಟು ಹಾಕುವ ಮೂಲಕ ಸಮಾಜ ಉದ್ದಾರದ ಕೆಲಸ ಮಾಡುವ – ಸಂಪತ್ ಸುವರ್ಣ ಅಧ್ಯಕ್ಷರು ಸುವರ್ಣ ಸಾಂಸ್ಕ್ರತಿಕ ಪ್ರತಿಷ್ಠಾನ ಬೆಳ್ತಂಗಡಿ.
ಯುವಕರೇ ಸದೃಢ ಸಮಾಜ ನಿರ್ಮಾಣದ ಪ್ರೇರಕ ಶಕ್ತಿಯಾಗಬೇಕು – ಜಯಂತ ನಡುಬೈಲು
ಯುವ ಸಮುದಾಯ ಎಚ್ಚೆತ್ತುಕೊಂಡಲ್ಲಿ ಸಮಾಜದ ಅಭಿವೃದ್ದಿ ಸಾಧ್ಯ ಎಂದು ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮೀ ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬೈಲು ಹೇಳಿದರು. ಅವರು ಜೂ.10ರಂದು ಯುವವಾಹಿನಿಯ 31ನೇ ಘಟಕ ಯುವವಾಹಿನಿ ಘಟಕ ಕಡಬ ಘಟಕವನ್ನು ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಸಭಾಭವನದಲ್ಲಿ ದೀಪ ಪ್ರಜ್ವಲನಗೊಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಾದ್ಯಂತ ಯುವವಾಹಿನಿ ಘಟಕಗಳು ನಮ್ಮ ಸಮಾಜದ ಪ್ರತಿಯೊಬ್ಬರನ್ನು ಮುಖ್ಯವಾಹಿನಿಗೆ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದಲ್ಲದೆ ಇತರರಿಗೂ ಸಹಕರಿಸುವ ಮನೋಭಾವವನ್ನು ಹೊಂದಿದೆ. ಶಿಕ್ಷಣಕ್ಕೆ ಅತೀ ಹೆಚ್ಚಿನ ಆದ್ಯತೆ ನೀಡುವುದರೊಂದಿಗೆ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸಹಾಯ ಸಹಕಾರ ನೀಡುವುದರೊಂದಿಗೆ ಉದ್ಯೋಗ ದೊರಕಿಸಿ ಕೊಡುವಲ್ಲಿಯೂ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಸಮಾಜದ ನಿರ್ಗತಿಕ ಬಡ ಕುಟುಂಬದವರನ್ನು ಹುಡುಕಿ ಅವರಿಗೆ ಮನೆ ಕಟ್ಟಿ ಕೊಡುವುದಲ್ಲಿದೆ. ಹೆಣ್ಣು ಕ್ಕಳ ವಿವಾಹಕ್ಕೆ ಸಹಕರಿಸುವುದಲ್ಲದೆ ವಧು ವರರನ್ನು ಹುಡುಕಿ ಅವರ ಸಂಬಂಧ ಕಲ್ಪಿಸುವ ಮಹಾತ್ಕಾರ್ಯವನ್ನು ಸಂಘಟನೆ ಮಾಡುತ್ತಿದೆ. ಈಗಾಗಲೇ ಜಿಲ್ಲೆಯಾದ್ಯಂತ ಯುವವಾಹಿನಿಯ 30 ಘಟಕಗಳು ಕಳೆದ 30 ವರ್ಷಗಳಿಂದ ಸಮಾಜದ ಒಳಿತಿಗೆ ಪ್ರಯತ್ನಿಸುತ್ತಿದ್ದರೆ ಈಗ ಈ ತಾಲೂಕು ಕೇಂದ್ರವಾಗಿರುವ ಕಡಬದಲ್ಲಿ ಇಂದು 31 ನೇ ಘಟಕ ಅದ್ದೂರಿಯಾಗಿ ಉದ್ಘಾಟನೆಗೊಂಡಿದೆ. ಇಲ್ಲಿ ವಿವಿಧ ಪದಾಧಿಕಾರಿಗಳು ಸೇರಿದಂತೆ 26 ಮಂದಿ ಇಂದು ಪ್ರತಿಜ್ಞೆ ಸ್ವೀಕರಿಸಿ ಘಟಕ ಅಭಿವೃದ್ದಿಗೆ ಪಣತೊಟ್ಟಿರುವುದು ಶ್ಲಾಘನೀಯವಾಗಿದ್ದು ಯುವ ಮುಂದಾಳು ಯೋಗೀಶ್ ಅಗತ್ತಾಡಿಯವರ ನೇತೃತ್ವದಲ್ಲಿ ಕಡಬ ಯುವವಾಹಿನಿ ಘಟಕವು ಮಾದರಿ ಘಟಕವಾಗಿ ಬೆಳೆಯಲಿ ಎಂದು ಹಾರೈಸಿದರು.
ಬೆಳ್ತಂಗಡಿ ಸುವರ್ಣ ಸಾಂಸ್ಕ್ರತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ.ಸುವರ್ಣ ದಿಕ್ಸೂಚಿ ಭಾಷಣ ಮಾಡಿ ಬದಲಾವಣೆಯೊಂದಿಗೆ 2ನೇ ಹಂತದ ನಾಯಕರನ್ನು ಬೆಳೆಸುವ ಕೆಲಸ ಯುವ ವಾಹಿನಿ ಮಾಡುತ್ತಿದೆ. ನಮ್ಮ ಮಾತು ನಾಲಿಗೆಯಿಂದ ಬಾರದೆ ಹೃದಯಾಂತರಾಳದಿಂದ ಬಂದಾಗ ಸಮಾಜದ ಉದ್ದಾರ ಖಂಡಿತಾ ಸಾಧ್ಯ ಎಂದ ಅವರು ಸಾವಿರ ಸಾವಿರ ಸಾಧಕರನ್ನು ಒಟ್ಟಾಗಿಸಿರುವ ಕೀರ್ತಿ ನಮ್ಮ ಯುವವಾಹಿನಿಗೆ ಸಲ್ಲುತ್ತದೆ ಎಂದರು.
ಸ್ವಾಭಿಮಾನದ ಬದುಕಿಗೆ ಜ್ವಲಂತ ಸಾಕ್ಷಿಯಾಗಬೇಕು – ಉಪನ್ಯಾಸಕ ಕೇಶವ ಬಂಗೇರ
ಮಂಗಳುರು ಕುದ್ರೋಳಿ ಶ್ರೀ ನಾರಾಯಣ ಗುರು ಕಾಲೇಜು ಉಪನ್ಯಾಸಕರಾದ ಕೇಶವ ಬಂಗೇರ ಮಾತನಾಡಿ ಯುವ ವಾಹಿನಿ ತಮ್ಮ ಸಾಧನೆ ಮೂಲಕ ಸ್ವಾಭಿಮಾನ ಯುವ ಪೀಳಿಗೆಗೆ ಮಾದರಿಯಾಗಬೇಕೆಂದು ಕರೆ ನೀಡಿದ ಅವರು ನಾವು ಒಟ್ಟಾಗುವ ಮೂಲಕ ರಾಜಕೀಯ, ಧಾರ್ಮಿಕ, ಶೈಕ್ಷಣಿಕ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಬೆಳೆಸಬೇಕು ಎಂದರು.
ಪ್ರತಿಜ್ಞಾ ವಿಧಿ-
ಯುವವಾಹಿನಿ ಕಡಬ ಘಟಕದ ನೂತನ ಪದಾಧಿಕಾರಿಗಳಿಗೆ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಯಶವಂತ ಪೂಜಾರಿ ಪ್ರತಿಜ್ಞಾ ವಿಧಿ ಬೋಧಿಸಿದರು. ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜೇಶ್ ಸುವರ್ಣ ಪದಾಧಿಕಾರಿಗಳು ಹಾಗೂ ನಿರ್ದೇಶಕರನ್ನು ಪರಿಚಯಿಸಿದರು.
ಸಾಧಕರಿಗೆ ಸನ್ಮಾನ:
ಭಾರತೀಯ ಸೇನೆಯಲ್ಲಿ 21 ವರ್ಷ ಸೇವೆ ಸಲ್ಲಿಸಿರುವ ಸುದರ್ಶನ್ ಎಂ.ಕೆ ನೂಜಿಬಾಳ್ತಿಲ ಹಾಗೂ ಕೃಷಿ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಗೈದ ವಿಕಲ ಚೇತನ ಇಚಿಲಂಪಾಡಿಯ ಮೋನಪ್ಪ ಪೂಜಾರಿಯವರನ್ನು ಯುವ ವಾಹಿನಿ ವತಿಯಿಂದ ಸಭಾ ಅಧ್ಯಕ್ಷ ಯಶವಂತ ಪೂಜಾರಿ ಶಾಲು ಹೊದಿಸಿ ಫಲಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಿದರು. ಕಡಬ ಯುವವಾಹಿನಿಯ ನೂತನ ಅಧ್ಯಕ್ಷ ಯೋಗೀಶ್ ಕುಮಾರ್ ಅಗತ್ತಾಡಿ, ಕಾರ್ಯದರ್ಶಿ ಮಿಥುನ್ ಸುಂದರ್ ಪಲ್ಲತಡ್ಕ ಸೇರಿದಂತೆ ಎಲ್ಲಾ ಪದಾಧಿಕಾರಿಗಳಿಗೆ ಶಾಲು ಹೊದಿಸಿ ಪುಷ್ಪಗುಚ್ಚ ನೀಡಿ ಗೌರವಿಸಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದ ಯೋಗೀಶ್ ಕುಮಾರ್ ಈಗಾಗಲೇ ಯುವವಾಹಿನಿ ಕಡಬಘಟಕವನ್ನು ಒಂದು ಮಾದರಿ ಘಟಕವನ್ನಾಗಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಕಡಬ ತಾಲೂಕಿನಾದ್ಯಂತ ವಿವಿಧ ಗ್ರಾಮಗಳಿಂದ ಉತ್ತಮ ಸಂಘಟಕರನ್ನು ಗುರುತಿಸಿ ಅವರಿಗೆ ವಿವಿಧ ಜವಾಬ್ದಾರಿಯನ್ನು ನೀಡಲಾಗಿದ್ದು ಉತ್ತಮವಾಗಿ ಕೆಲಸ ಮಾಡುವ ಯುವಶಕ್ತಿಯಾಗಿ ಬೆಳೆಯಲಿದೆ ಎಂದು ಆಶಿಸಿದ ಅವರು ನಮ್ಮ ಘಟಕ ಯುವವಾಹಿನಿಯ ಪ್ರತಿಷ್ಠಿತ ಘಟಕವಾಗಿ ಬೆಳೆಯುವಲ್ಲಿ ನಾವೆಲ್ಲರೂ ಒಟ್ಟಾಗಿ ಶ್ರಮಿಸಲಿದ್ದೇವೆ ಎಂದರು.
ಬಪ್ಪನಾಡು ಶ್ರೀದುರ್ಗಾ ಪರಮೇಶ್ವರಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಜಯಮ್ಮ ಪಿ., ಯಶಸ್ವೀ ಗುತ್ತಿಗೆದಾರ ಆರ್ಯಭಟ ಪ್ರಶಸ್ತಿ ಪುರಸ್ಕ್ರತ ಜೆಸಿಐ ವಲಯ ಉಪಾಧ್ಯಕ್ಷ ರವಿ ಕಕ್ಕೆಪದವು, ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಚಂದ್ರಶೇಖರ, ಯುವವಾಹಿನಿ ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಶೇಖರ ಗೌಂಡತ್ತಿಗೆ ಮಾತನಾಡಿ ಶುಭಹಾರೈಸಿದರು. ಜಿಲ್ಲೆಯಾದ್ಯಂತ ಆಗಮಿಸಿದ ಹಲವಾರು ಯುವವಾಹಿನಿ ಘಟಕಗಳ ಅಧ್ಯಕ್ಷರು, ಮಾಜಿ ಅಧ್ಯಕ್ಷರು, ಸಲಹೆಗಾರರು ತಮ್ಮ ಅನಿಸಿಕೆ ವ್ಯಕ್ತಪಡಿಸಿ ಯುವವಾಹಿನಿ ಕಡಬ ಘಟಕಕ್ಕೆ ಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದರು.
ಈ ಸಂದರ್ಭದಲ್ಲಿ ಸಲಹೆಗಾರರಾದ ಜಿನ್ನಪ್ಪ ಸಾಲಿಯಾನ್, ಐತ್ತೂರು ಗ್ರಾ.ಪಂ.ಅಧ್ಯಕ್ಷ ಸತೀಶ್ ಕೆ, ಸದಾನಂದ ಕುಮಾರ್ ಸಾಂಸ್ಕøತಿಕ ಕಾರ್ಯಕ್ರಮ ನೀಡಿದ ತಂಡದ ನಾಯಕಿ ದೀಪ್ತಿ ಅಗತ್ತಾಡಿರನ್ನು ಸ್ಮರಣಿಕೆ ನೀಡಿ ಗೌರವಿಸಿದರು. ನೂಜಿಬಾಳ್ತಿಲ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವಸಂತ ಪೂಜಾರಿ, ಕಡಬ ವಲಯ ಸಮಿತಿ ಸಂಚಾಲಕ ಜಿನ್ನಪ್ಪ ಸಾಲಿಯಾನ್, ಉಪಾಧ್ಯಕ್ಷ ಸತೀಶ್ ಬಲ್ಯ, ಜನಾರ್ಧನ ಬಿ.ಎಲ್, ಶಿಲ್ಪಾಶ್ರೀ ಕೆ.ಎಸ್, ಜಯಪ್ರಕಾಶ್, ಸುಂದರ ಕರ್ಕೇರ, ಅಭಿಲಾಷ್, ವಿನೋದ್ ಮೊದಲಾದವರು ಅತಿಥಿಗಳಿಗೆ ಶಾಲು ಹೊದಿಸಿ ಹೂ ಗುಚ್ಚ ನೀಡಿ ಗೌರವಿಸಿದರು. ಶಶಿಧರ ಕಿನ್ನಿಮಜಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪ್ಪಿನಂಗಡಿ ಯುವವಾಹಿನಿ ಘಟಕದ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಸ್ವಾಗತಿಸಿ, ಕಡಬ ನೂತನ ಘಟಕದ ಕಾರ್ಯದರ್ಶಿ ಮಿಥುನ್ ಸುಂದರ್ ವಂದಿಸಿದರು.ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷ ನರೇಶ್ ಕುಮಾರ್ ಸಸಿಹಿತ್ಲು ಹಾಗೂ ಯುವವಾಹಿನಿ ಕಡಬ ಘಟಕದ ನೂತನ ನಿರ್ದೇಶಕ ಗಣೇಶ್ ನಡುವಾಳ್ ಕಾರ್ಯಕ್ರಮ ನಿರೂಪಿಸಿದರು.
Allthebest kadaba yuvavahini
Wonderful program.New hopes with great enthusiasm. Keep it up Kadaba