ಬಜ್ಪೆ : ತಾ. 10.06.18 ಭಾನುವಾರ ಯುವವಾಹಿನಿ(ರಿ) ಬಜ್ಪೆ ಘಟಕದ ಸದಸ್ಯರಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಬಜ್ಪೆ ಸಮೀಪದ ಮುಂಡಾರು ಇಲ್ಲಿರುವ ಹಿಂದೂ ರುದ್ರ ಭೂಮಿಯ ಪರಿಸರ ಸ್ವಚ್ಛಗೊಳಿಸಿ, ಗಿಡಗಳನ್ನು ನೆಡುವುದರ ಮೂಲಕ ಆಚರಿಸಲಾಯಿತು.
ಶ್ರೀಯುತ ರಾಘವೇಂದ್ರ ಆಚಾರ್, ಮಾಲಕರು, ಶಾಂತಿ ಭವನ ಬಜ್ಪೆ ಮತ್ತು ಡಾ|| ಜಯರಾಮ್ ಶೆಟ್ಟಿ, ಖ್ಯಾತ ಮಕ್ಕಳ ತಜ್ಞರು, ಬಜ್ಪೆ ಇವರು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸುಮಾರು 20 ವಿವಿಧ ಜಾತಿಯ ಸುಮಾರು 100 ಗಿಡಗಳನ್ನು ಈ ಪರಿಸರದಲ್ಲಿ ನೆಡಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಶಿವರಾಮ್ ಪೂಜಾರಿ, ಅಧ್ಯಕ್ಷರು, ವಿಜಯ ವಿಠಲ ಭಜನಾ ಮಂದಿರ ಬಜ್ಪೆ, ಶ್ರೀ ಗೋಪಾಲಕೃಷ್ಣ ಕೆ., ಸಂಪರ್ಕಾಧಿಕಾರಿ, ಅಂತರರಾಷ್ಟ್ರೀಯ ವಿಮಾನ ನಿಲ್ದಾನ, ಮಂಗಳೂರು, ಯುವವಾಹಿನಿ (ರಿ) ಬಜ್ಪೆ ಘಟಕದ ಅಧ್ಯಕ್ಷರಾದ ಶ್ರೀ ದೇವರಾಜ್ ಅಮೀನ್, ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಪೂಜಾರಿ, ಕಾರ್ಯದರ್ಶಿ ಶ್ರೀಮತಿ ಸುನಿತಾ, ಯುವವಾಹಿನಿ(ರಿ) ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಶ್ರೀ ಪ್ರದೀಪ್ ಅಮೀನ್, ಜಗದಾಂಬಿಕ ಭಜನಾ ಮಂದಿರ ಶಾಂತಿಗುಡ್ಡೆಯ ಸದಸ್ಯರಾದ ಶ್ರೀ ಸುರೇಶ್, ಅಶ್ವಿನ್ ಪೂಜಾರಿ ಮುಂಡಾರು ಉಪಸ್ಥಿತರಿದ್ದರು ಮತ್ತು ಯುವವಾಹಿನಿ (ರಿ) ಬಜ್ಪೆ ಘಟಕದ ಸರ್ವ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.