ಕೂಳೂರು : ಯುವವಾಹಿನಿ (ರಿ) ಕೂಳೂರು ಘಟಕದ ಸದಸ್ಯರು ದಿನಾಂಕ 10/06/2018 ಪಂಜಿಮೊಗರು ಮಂಜೊಟ್ಟಿ ಅಂಗನವಾಡಿ ಕೇಂದ್ರದ ಎದುರಿನ ಪ್ರದೇಶದಲ್ಲಿ ಶ್ರಮದಾನ ಮಾಡಲಾಯಿತು. ಅಂಗನವಾಡಿ ಕೇಂದ್ರದ ಕಾಲುದಾರಿಯು ಅಸ್ತವ್ಯಸ್ತವಾಗಿದ್ದು ಶಾಲಾ ಮಕ್ಕಳಿಗೆ ಶಾಲೆಗೆ ಹಾಜರಾಗಲು ಅನಾನುಕೂಲವಾದ್ದರಿಂದ ಘಟಕದ ವತಿಯಿಂದ ಶ್ರಮದಾನ ಮಾಡಲಾಯಿತು. ಒಟ್ಟು 25 ಮಂದಿ ಸದಸ್ಯರು ಶ್ರಮದಾನ ಮಾಡಿದರು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್, ಉಪಾಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್, ನಿಕಟಪೂರ್ವ ಅಧ್ಯಕ್ಷರಾದ ಪುಷ್ಪರಾಜ್ ಕುಮಾರ್ ಮತ್ತು ಈ ಕಾರ್ಯಕ್ರಮದ ಸಂಚಾಲಕಿ ಹಾಗೂ ಸಂಘಟನಾ ಕಾರ್ಯದರ್ಶಿಯಾದ ಪವಿತ್ರ ಅಮೀನ್ ಉಪಸ್ತಿತರಿದ್ದು ಅಧ್ಯಕ್ಷರು ಎಲ್ಲರನ್ನು ಸ್ವಾಗತಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಅಂಗನವಾಡಿಯ ಕಾರ್ಯಕರ್ತೆ ಶ್ರೀಮತಿ ಪ್ರಮೀಳಾ ಇವರು ಮಾತನಾಡಿ ಯುವವಾಹಿನಿ (ರಿ ) ಕೂಳೂರು ಘಟಕವು ಈವರೆಗೆ ಉತ್ತಮ ಸೇವೆಯನ್ನು ನೀಡುತ್ತಾ ಬಂದಿದೆ. ಈ ಶ್ರಮದಾನ ಕಾರ್ಯಕ್ರಮಕ್ಕೆ ನಾನು ಅಭಾರಿಯಾಗಿದ್ದೇನೆ ಎಂದು ಎಲ್ಲರಿಗೂ ತಮ್ಮ ಪರವಾಗಿ ಧನ್ಯವಾದ ಸಲ್ಲಿಸಿದರು. ಕಾರ್ಯದರ್ಶಿ ಪವಿತ್ರ ಅಂಚನ್ ವಂದಿಸಿದರು.