ಕಟಪಾಡಿ : ಯುವವಾಹಿನಿ (ರಿ) ಕಟಪಾಡಿ ಘಟಕದ ಆಶ್ರಯದಲ್ಲಿ ಬಡ ಕುಟುಂಬದ ಮನೆಯನ್ನು ವಾಸ ಮಾಡಲು ಯೋಗ್ಯವಾಗುವಂತೆ ಮಾಡಲಾಯಿತು.
ಕಟಪಾಡಿ ಮೂಡಬೆಟ್ಟು ಗ್ರಾಮದ ಶ್ಯಾಮಲ ಪುರಾಣಿಕ್ ಎಂಬವರ ಮನೆ ವಾಸಿಸಲು ಅನಾನುಕೂಲತೆಯಿಂದ ಕೂಡಿದ್ದು, , ಯುವವಾಹಿನಿ ಕಟಪಾಡಿ ಘಟಕವು ರೂ 25,000/- ವೆಚ್ಚದಲ್ಲಿ ಶೌಚಾಲಯ ನಿರ್ಮಾಣದೊಂದಿಗೆ ಮನೆಯನ್ನು ವಾಸಿಸಲು ಯೋಗ್ಯವಾಗುವಂತೆ ಮಾಡಲಾಯಿತು.
ಕಾಪು ಪೋಲೀಸ್ ಠಾಣಾ ಉಪನಿರೀಕ್ಷಕ ನಿತ್ಯಾನಂದ ಗೌಡ, ಹಾಗೂ ಕಟಪಾಡಿ ಗ್ರಾಮ ಪಂಚಾಯತ್ ಸಹಕಾರ ನೀಡಿದರು. ಈ ಸಂದರ್ಭದಲ್ಲಿ ಯುವವಾಹಿನಿ ಕಟಪಾಡಿ ಘಟಕದ ಅಧ್ಯಕ್ಷ ಮಹೇಶ್ ಎನ್.ಅಂಚನ್ , ಕಾರ್ಯದರ್ಶಿ ನಿತಿನ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
Nicework
Good deed indeed